fbpx
ಸಮಾಚಾರ

ವಾಹ್ ರೆ ವಾಹ್.. Jio ಪರಿಚಯಿಸಿದೆ 1 ರೂಪಾಯಿಯ ಪ್ಲಾನ್​; ಇದರಿಂದ ಏನು ಲಾಭ ಗೊತ್ತಾ?

ದೇಶದ ನಂ.1 ಮೊಬೈಲ್‌ ಸೇವಾ ಕಂಪನಿಯಾದ ರಿಲಯನ್ಸ್‌ ಜಿಯೋ ತನ್ನ ಪ್ರೀಪೇಯ್ಡ್‌ ಗ್ರಾಹಕರಿಗಾಗಿ ಕೇವಲ 1 ರು. ರೀಚಾಜ್‌ರ್‍ ಯೋಜನೆ ಮಾಡಿದೆ. ಈ ಯೋಜನೆಯಡಿ ಯಾವುದೇ ಗ್ರಾಹಕರು 1 ರು. ರಿಚಾಜ್‌ರ್‍ ಪ್ಲಾನ್‌ ಆಯ್ಕೆ ಮಾಡಿಕೊಂಡರೆ 1 ತಿಂಗಳು ಯೋಜನೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಗ್ರಾಹಕರು ಯಾವುದೇ ಕರೆ ಸ್ವೀಕರಿಸುವ ಕರೆ ಮಾಡುವ ಸೌಲಭ್ಯ ಇರುವುದಿಲ್ಲ. ಆದರೆ 100 ಎಂಬಿ ಡಾಟಾ ಸಿಗುತ್ತದೆ. ಇದು ಖಾಲಿ ಆದ ಬಳಿಕ ಇಂಟರ್ನೆಟ್‌ ವೇಗ 64 ಕೆಬಿಪಿಎಸ್‌ಗೆ ಇಳಿಯುತ್ತದೆ. ಗ್ರಾಹಕರಿಗೆ ಅಚ್ಚರಿಯಾಗುವಂತೆ ಭಾರೀ ಅಗ್ಗದ ಪ್ಲಾನ್​ವೊಂದನ್ನು ಜಿಯೋ ಪರಿಚಯಿಸಿದೆ.

ಈ ಯೋಜನೆಯಲ್ಲಿ ಕರೆ ಮತ್ತು SMS ಸೌಲಭ್ಯವಿಲ್ಲವಾದರು 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಆದರೆ 100MB ಡೇಟಾವನ್ನು ನೀಡುತ್ತದೆ. ಡೇಟಾ ಮುಗಿದ ನಂತರ ಇಂಟರ್ನೆಟ್ ವೇಗವು 60kbps ಗೆ ಇಳಿಯುತ್ತದೆ. ಜಿಯೋ ಹೊರತುಪಡಿಸಿ ಯಾವುದೇ ಟೆಲಿಕಾಂ ಕಂಪನಿಯು 1 ರೂ ಯೋಜನೆಯನ್ನು ಪರಿಚಯಿಸಿಲ್ಲ. ಜಿಯೋ 10 ರೂ ಮತ್ತು 20 ರೂ ಯೋಜನೆ: ಜಿಯೋ 10 ಮತ್ತು 20 ರೂಪಾಯಿಗಳ ಅಗ್ಗದ ಯೋಜನೆಗಳನ್ನು ಸಹ ಹೊಂದಿದೆ. 10 ರೂ.ವಿನ ಯೋಜನೆಯಲ್ಲಿ, 7.47 ರೂ.ವಿನ ಟಾಕ್-ಟೈಮ್ ಅನಿಯಮಿತ ಮಾನ್ಯತೆಯೊಂದಿಗೆ ಲಭ್ಯವಿದೆ. 20 ರೂ. ಯೋಜನೆಯಲ್ಲಿ 14.95 ರೂ.ವಿನ ಟಾಕ್ ಟೈಮ್ ಅನಿಯಮಿತ ಮಾನ್ಯತೆಯೊಂದಿಗೆ ಲಭ್ಯವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top