fbpx
ಸಮಾಚಾರ

ಕೌಟುಂಬಿಕ ಕಲಹದಿಂದ ತನ್ನ ಮುಗುವನ್ನು ಕೊಂದ ತಾಯಿ

ತಾನೇ ಹೆತ್ತ ಮಗುವನ್ನು ತನ್ನ ಕೈಯಾರೆ ಕೊಂದು ತಾಯ್ತನಕ್ಕೇ ಕಳಂಕ ತಂದಿದ್ದಾಳೆ. ಕೌಟುಂಬಿಕ ಕಲಹದ ಹಿನ್ನೆಲೆಯಿಂದಾಗಿ ತಾಯಿಯೊಬ್ಬಳು ತನ್ನ ಮಗುವನ್ನೇ ಕೊಂದು ತಾನೂ ಕೂಡ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಗಟ್ಟವಾಡಿ ಗ್ರಾಮದಲ್ಲಿ ನಡೆದಿದೆ.

ಅನ್ನಪೂರ್ಣ 22  ವರ್ಷ  ಮತ್ತು ಮೋಕ್ಷಿತ್  2  ವರ್ಷ   ಮೃತರು. ಗಟ್ಟವಾಡಿ ಗ್ರಾಮದ ಮಹಾದೇವ ಪ್ರಸಾದ್ ಅಲಿಯಾಸ್ ರಚ್ಚು ಎಂಬವರ ಪತ್ನಿ ಹಾಗೂ ಪುತ್ರ. ಅನ್ನಪೂರ್ಣ ಅವರು 2 ವರ್ಷಗಳ ಹಿಂದೆಯಷ್ಟೇ ರಚ್ಚುವನ್ನು ಮದುವೆಯಾಗಿದ್ದು, ಇಬ್ಬರ ನಡುವೆ ಅವಾಗ ಅವಾಗ  ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ ಆಗುತ್ತಿತ್ತು. ಇದರಿಂದ ಸಾಕಾಗಿದ್ದ ಅವಳು  ಮೊದಲಿಗೆ ಮಗುವನ್ನು ಬಕೆಟ್‌ನಲ್ಲಿರುವ ನೀರಿಗೆ ಮುಳುಗಿಸಿ ನಂತರ ಕೋಣೆಯಲ್ಲಿರುವ ಫ್ಯಾನ್‌ಗೆ ನೇಣು ಹಾಕಿಕೊಂಡು  ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಘಟನೆಯ ಬಳಿಕ ನಂಜನಗೂಡಿನ ಡಿವೈಎಸ್‌ಪಿ ಗೋವಿಂದ ರಾಜು, ವೃತ್ತ ನಿರೀಕ್ಷಕ ಲಕ್ಮೀಕಾಂತ ತಳವಾರ ದೊಡ್ಡಕವಲಂದೆ, ಪಿಎಸ್‌ಐ ಮಹೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top