fbpx
ಸಮಾಚಾರ

ಕನ್ನಡದಲ್ಲಿ ಟ್ವೀಟ್​ ಮಾಡಿ ‘ಬ್ರಹ್ಮಾಸ್ತ್ರ’ ರಿಲೀಸ್​ ಡೇಟ್​ ತಿಳಿಸಿದ ಆಲಿಯಾ ಭಟ್​; ಶಿವನ ಗೆಟಪ್​ನಲ್ಲಿ ರಣಬೀರ್​

ನಟಿ ಆಲಿಯಾ ಭಟ್ ಕನ್ನಡದಲ್ಲೇ ಟ್ವೀಟ್​ ಮಾಡಿ ಮಾಹಿತಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಅಷ್ಟೇ ಅಲ್ಲದೇ ಆಲಿಯಾ ಭಟ್​ ಅವರ ಕನ್ನಡ ಪ್ರೇಮಕ್ಕೆ ಕನ್ನಡಿಗರು ಕ್ಲೀನ್​ ಬೋಲ್ಡ್​ ಆಗಿದ್ದಾರೆ.

 

 

‘’ಬ್ರಹ್ಮಾಂಡದಲ್ಲಿ ಮಹಾಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ. ಮಹಾಯೋಧನೊಬ್ಬನ ಉದಯವಾಗಲಿದೆ. ಇಂಟ್ರೊಡ್ಯೂಸಿಂಗ್ – ಶಿವ. 09.09.2022 ರಂದು ‘ಬ್ರಹ್ಮಾಸ್ತ್ರ’ ಮೊದಲ ಭಾಗ ಬಿಡುಗಡೆಯಾಗಲಿದೆ. ಶಿವನನ್ನು ನೀವು ತಪ್ಪಿಸಿಕೊಳ್ಳುವಂತಿಲ್ಲ’’ ಎಂದು ನಟಿ ಆಲಿಯಾ ಭಟ್ ಕನ್ನಡದಲ್ಲೇ ಟ್ವೀಟಿಸಿದ್ದಾರೆ.

ಅಂದಹಾಗೆ ಮೂರು ಪಾರ್ಟ್​ಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. ಮೊದಲ ಭಾಗಕ್ಕೆ ‘ಬ್ರಹ್ಮಾಸ್ತ್ರ: ಪಾರ್ಟ್ ಒನ್​ ಶಿವ’ ಎಂದು ಶೀರ್ಷಿಕೆ ಇಡಲಾಗಿದೆ. ಇದರಲ್ಲಿ ನಟ ರಣಬೀರ್​ ಕಪೂರ್​ ಅವರು ಶಿವನ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಮೋಷನ್​ ಪೋಸ್ಟರ್​ನಿಂದ ಅಭಿಮಾನಿಗಳಲ್ಲಿ ಭಾರಿ ಕೌತುಕ ನಿರ್ಮಾಣ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top