fbpx
ಸಮಾಚಾರ

ಭಾರತದ ಅಗರ್ಭ ಶ್ರೀಮಂತ ದೇವಾಲಯಗಳ ಸಂಪತ್ತು ಎಷ್ಟು ಗೊತ್ತೇ?

ಭಾರತ ದೇಶವು ಕಲೆ, ಸಂಗೀತಗಳಲ್ಲಿ ಶ್ರೀಮಂತಿಕೆಯಿAದ ಕೂಡಿದ ದೇಶ. ಇಲ್ಲಿನ ಸಂಪತ್ತು ವಿದೇಶಗಳ ದಾಳಿಕೋರರನ್ನು ಆಕರ್ಷಿಸುತ್ತಿತ್ತು ಎಂಬುದನ್ನು ನಾವು ಇತಿಹಾಸದಲ್ಲಿ ಓದಿದ್ದೇವೆ. ಹಿಂದೆಲ್ಲಾ ಈ ದಾಳಿಗಳಿಂದ ಸಂಪತ್ತನ್ನು ರಕ್ಷಿಸಲು ದೇವಸ್ಥಾನಗಳಲ್ಲಿ ಕೂಡಿಡುತ್ತಿದ್ದರು. ಅನೇಕ ವಿದೇಶಿ ದಾಳಿಗಳು ಇಲ್ಲಿನ ಸಂಪತ್ತನ್ನು ದೋಚಿದ್ದವಾದರೂ ಕೆಲವೊಂದು ದೇವಸ್ಥಾನಗಳಲ್ಲಿ ಅಪಾರ ಸಂಪತ್ತು ಈಗಲೂ ಹಾಗೆಯೇ ಉಳಿದುಕೊಂಡಿವೆ. ಭಾರತದ ಅತೀ ಹೆಚ್ಚು ಸಂಪತ್ತನ್ನು ಹೊಂದಿರುವ ದೇವಸ್ಥಾನಗಳನ್ನು ನೋಡೋಣ.
ಪದ್ಮನಾಭ ಸ್ವಾಮಿ ದೇವಸ್ಥಾನ, ತಿರುವನಂತಪುರ. ಕೇರಳದಲ್ಲಿರುವ ಪದ್ಮನಾಭ ಸ್ವಾಮಿ ದೇವಾಲಯವು ಭಾರತದ ಅತ್ಯಂತ ಶ್ರೀಮಂತ ದೇವಾಲಯವಾಗಿದೆ. ಕೇರಳದ ರಾಜಧಾನಿ ತಿರುವನಂತಪುರAನಲ್ಲಿ ಈ ದೇವಾಲಯವಿದೆ. ತಿರುವಾಂಕೂರಿನ ಹಿಂದಿನ ರಾಜಮನೆತನದವರು ಈ ದೇವಾಲಯವನ್ನು ನೋಡಿಕೊಳ್ಳುತ್ತಾರೆ. ವಜ್ರಗಳು, ಚಿನ್ನದ ಆಭರಣಗಳು ಮತ್ತು ಚಿನ್ನದ ಶಿಲ್ಪಗಳನ್ನು ಈ ದೇವಾಲಯ ಒಳಗೊಂಡಿದೆ. ವರದಿಯ ಪ್ರಕಾರ, ದೇವಾಲಯದ ೬ ಕಮಾನುಗಳಲ್ಲಿ ಒಟ್ಟು ೨೦ ಬಿಲಿಯನ್ ಡಾಲರ್‌ಗಳಿವೆ. ಇಷ್ಟೇ ಅಲ್ಲ, ದೇವಾಲಯದ ಗರ್ಭಗುಡಿಯಲ್ಲಿ ವಿಷ್ಣುವಿನ ಬೃಹತ್ ಚಿನ್ನದ ವಿಗ್ರಹವಿದ್ದು, ಈ ವಿಗ್ರಹವು ೫೦೦ ಕೋಟಿ ಬೆಲೆಬಾಳುತ್ತದೆಯಂತೆ.

ತಿರುಪತಿ ಬಾಲಾಜಿ ದೇವಸ್ಥಾನ, ಆಂಧ್ರಪ್ರದೇಶ
ಆoಧ್ರಪ್ರದೇಶದ ತಿರುಪತಿ ಬಾಲಾಜಿ ದೇವಸ್ಥಾನ ದೇಶದ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ವೈಷ್ಣವ ಪಂಥದ ಈ ದೇವಾಲಯವು ದೇಣಿಗೆಯ ದೃಷ್ಟಿಯಿಂದ ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವಾಗಿದೆ. ಈ ದೇವಾಲಯದ ವಾಸ್ತುಶೈಲಿಯಲ್ಲಿಯೂ ಅದ್ಭುತವಾಗಿದೆ. ಪ್ರತಿ ವರ್ಷ ಬರೀ ಲಡ್ಡುಗಳ ಪ್ರಸಾದ ಮಾರಾಟದಿಂದ ೬೫೦ ಕೋಟಿ ರೂ. ದೇವಸ್ಥಾನಕ್ಕೆ ಆದಾಯ ಬರುತ್ತದೆ. ತಿರುಪತಿ ದೇವಸ್ಥಾನವು ವಿಷ್ಣುವಿನ ಅವತಾರವೆಂದು ನಂಬಲಾದ ವೆಂಕಟೇಶ್ವರನಿಗೆ ಸಮರ್ಪಿತವಾಗಿದೆ. ದೇವಸ್ಥಾನವು ಒಂಬತ್ತು ಟನ್ ಚಿನ್ನ ಮತ್ತು ೧೪,೦೦೦ ಕೋಟಿ ರೂಪಾಯಿಗಳ ಸ್ಥಿರ ಠೇವಣಿಗಳನ್ನು ವಿವಿಧ ಬ್ಯಾಂಕ್‌ಗಳಲ್ಲಿ ಹೊಂದಿದೆ ಎಂದು ಹೇಳಲಾಗುತ್ತದೆ.

ಸಾಯಿಬಾಬಾ ದೇವಸ್ಥಾನ, ಶಿರಡಿ
ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿ ಬಾಬಾ ದೇವಾಲಯ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಮೂಲಗಳ ಪ್ರಕಾರ ದೇವಾಲಯದ ಬ್ಯಾಂಕ್ ಖಾತೆಗೆ ಸುಮಾರು ೧,೮೦೦ ಕೋಟಿ ರೂಪಾಯಿ ಜಮಾ ಆಗಿದೆ, ಜೊತೆಗೆ ೩೮೦ ಕೆಜಿ ಚಿನ್ನ, ೪,೪೨೮ ಕೆಜಿ ಬೆಳ್ಳಿ, ಡಾಲರ್ ಮತ್ತು ಪೌಂಡ್‌ನoತಹ ವಿದೇಶಿ ಕರೆನ್ಸಿಗಳ ರೂಪದಲ್ಲಿ ದೊಡ್ಡ ಮೊತ್ತದ ಹಣವು ಠೇವಣಿಯಾಗಿದೆ. ೨೦೧೭ರಲ್ಲಿ ರಾಮ ನವಮಿಯ ಸಂದರ್ಭದಲ್ಲಿ ಅಪರಿಚಿತ ಭಕ್ತರೊಬ್ಬರು ದೇವಸ್ಥಾನಕ್ಕೆ ೧೨ ಕೆಜಿ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದರು. ಪ್ರತಿ ವರ್ಷ ಸುಮಾರು ೩೫೦ ಕೋಟಿ ದೇಣಿಗೆ ಈ ದೇವಸ್ಥಾನಕ್ಕೆ ಬರುತ್ತದೆಯಂತೆ.

ವೈಷ್ಣೋ ದೇವಿ ದೇವಸ್ಥಾನ, ಜಮ್ಮು
ದೇಶದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದೆAದು ವೈಷ್ಣೋ ದೇವಿ ದೇವಸ್ಥಾನವನ್ನು ಪರಿಗಣಿಸಲಾಗಿದೆ. ಮಾನ್ಯತೆ ಪಡೆದ ಶಕ್ತಿ ಪೀಠಗಳಲ್ಲಿ ಈ ದೇವಾಲಯವೂ ಒಂದಾಗಿದೆ. ಟ್ರಾವೆಲ್ ಗೈಡ್ ಟೂರ್ ಮೈಇಂಡಿಯಾ ಪ್ರಕಾರ, ಪ್ರತಿ ವರ್ಷ ೫೦೦ ಕೋಟಿ ರೂಪಾಯಿ ಆದಾಯವನ್ನು ಗಳಿಸುತ್ತದೆ. ಮಾತಾ ವೈಷ್ಣೋ ದೇವಿಯ ದರ್ಶನಕ್ಕೆ ಪ್ರತಿ ವರ್ಷ ದೇಶ ಮತ್ತು ಪ್ರಪಂಚದಾದ್ಯAತ ಲಕ್ಷಾಂತರ ಜನರು ಬರುತ್ತಾರೆ. ಇದು ಇಲ್ಲಿಯ ಆದಾಯವನ್ನು ಹೆಚ್ಚಿಸಿದೆ.

ಸಿದ್ಧಿವಿನಾಯಕ ದೇವಸ್ಥಾನ, ಮುಂಬೈ
ಮುAಬೈನಲ್ಲಿರುವ ಸಿದ್ಧಿವಿನಾಯಕ ದೇವಾಲಯವು ದೇಶದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ವಿಘ್ನವಿನಾಯಕನ ಈ ದೇವಸ್ಥಾನದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಉದ್ಯಮಿಗಳವರೆಗೆ ಅನೇಕ ಸೆಲೆಬ್ರಿಟಿಗಳು ಇಲ್ಲಿ ಕಾಣಸಿಗುತ್ತಾರೆ. ಈ ದೇವಾಲಯಕ್ಕೆ ಕೋಲ್ಕತ್ತಾದ ಉದ್ಯಮಿಯೊಬ್ಬರು ದೇಣಿಗೆಯಾಗಿ ನೀಡಿದ ೩.೭ ಕೆಜಿ ಚಿನ್ನವನ್ನು ಲೇಪಿಸಲಾಗಿದೆ. ದಾಖಲೆಗಳ ಪ್ರಕಾರ ದೇವಸ್ಥಾನಕ್ಕೆ ವಾರ್ಷಿಕವಾಗಿ ದೇಣಿಗೆ ಮತ್ತು ಕಾಣಿಕೆಯಿಂದ ಸುಮಾರು ೧೨೫ ಕೋಟಿ ಆದಾಯ ಬರುತ್ತದೆ.

ಮೀನಾಕ್ಷಿ ದೇವಸ್ಥಾನ, ಮಧುರೈ
ಈ ದೇವಾಲಯದ ವಾರ್ಷಿಕ ಆದಾಯ ಸುಮಾರು ೬ ಕೋಟಿ ರೂ. ಈ ದೇವಾಲಯದ ಸಂಕೀರ್ಣದಲ್ಲಿ ಸುಮಾರು ೩೩,೦೦೦ ವಿಗ್ರಹಗಳಿವೆ. ಮುಖ್ಯ ವಿಗ್ರಹವು ಭಗವಾನ್ ಸುಂದರೇಶ್ವರರ (ಭಗವಾನ್ ಶಿವ) ಪತ್ನಿ ಮೀನಾಕ್ಷಿ ದೇವಿಯದ್ದಾಗಿದೆ. ದೇವಾಲಯದಲ್ಲಿ ಎರಡು ಚಿನ್ನದ ಬಂಡಿಗಳಿದ್ದು ಅದು ಅದರ ಭವ್ಯತೆಯನ್ನು ಹೆಚ್ಚಿಸುತ್ತದೆ. ಇದು ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.

ಜಗನ್ನಾಥ ದೇವಾಲಯ, ಪುರಿ
ಭಾರತದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಪುರಿಯ ಜಗನ್ನಾಥ ದೇವಾಲಯವು ಒಂದಾಗಿದೆ, ದೇಶದ ಎಲ್ಲಾ ಮೂಲೆಗಳಿಂದ ಮತ್ತು ಪ್ರಪಂಚದಾದ್ಯAತದ ಭಕ್ತರಿಂದ ಅಪಾರ ದೇಣಿಗೆಗಳನ್ನು ಪಡೆಯುತ್ತದೆ. ದೇವಾಲಯದ ಸಂಪತ್ತಿನ ಬಗ್ಗೆ ನಿಖರವಾಗಿ ಯಾರಿಗೂ ತಿಳಿದಿಲ್ಲವಾದರೂ, ದೇವಾಲಯದಲ್ಲಿ ೧೦೦ ಕೆಜಿಗೂ ಹೆಚ್ಚು ಚಿನ್ನ ಮತ್ತು ಬೆಳ್ಳಿ ವಸ್ತುಗಳು ಇವೆ ಎಂದು ಅಂದಾಜಿಸಲಾಗಿದೆ. ಪುರಾತನ ದೇವಾಲಯವು ಜಗನ್ನಾಥನಿಗೆ ಸಮರ್ಪಿತವಾಗಿದೆ ಮತ್ತು ಹಿಂದೂಗಳ ಪ್ರಮುಖ ಯಾತ್ರಾ ಕೇಂದ್ರವಾಗಿದೆ. ಇದಲ್ಲದೆ, ದೇವಾಲಯವು ತನ್ನ ವಾರ್ಷಿಕ ರಥಯಾತ್ರೆ ಉತ್ಸವಕ್ಕೂ ಪ್ರಸಿದ್ಧವಾಗಿದೆ. ಈ ದೇವಸ್ಥಾನಕ್ಕೆ ಯುರೋಪ್ ನ ಭಕ್ತರೊಬ್ಬರು ೧.೭೨ ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ. ಇದು ದೇವಾಲಯದ ಸಂಪತ್ತನ್ನು ಇಮ್ಮಡಿಗೊಳಿಸಿದೆ.

ಸೋಮನಾಥ ದೇವಾಲಯ, ಗುಜರಾತ್
ಗುಜರಾತ್‌ನ ಸೋಮನಾಥ ದೇವಾಲಯವು ದೇಶದ ಐತಿಹಾಸಿಕ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಮಹ್ಮದ್ ಘಜ್ನಿ ೧೭ ಬಾರಿ ಈ ದೇವಾಲಯವನ್ನು ಲೂಟಿ ಮಾಡಿದ್ದು ಇದೇ ಕಾರಣಕ್ಕೆ. ಇಂದಿಗೂ ಗುಜರಾತ್‌ನಲ್ಲಿ ಈ ದೇವಾಲಯವನ್ನು ಸಮೃದ್ಧ ದೇವಾಲಯವೆಂದು ಪರಿಗಣಿಸಲಾಗಿದೆ. ಈ ದೇವಾಲಯವನ್ನು ಗುಜರಾತ್‌ನ ಸೌರಾಷ್ಟ್ರ ಪ್ರದೇಶದ ವೆರಾವಲ್‌ನಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಶಿವನ ೧೨ ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಸೋಮನಾಥನಿಗೆ ಕೋಟಿಗಟ್ಟಲೆ ಕಾಣಿಕೆಗಳು ಬರುತ್ತವೆ. ಆದ್ದರಿಂದ ಇದು ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.

ಶಬರಿಮಲೆ ಅಯ್ಯಪ್ಪ ದೇವಸ್ಥಾನ, ಕೇರಳ
ಶಬರಿಮಲೆ ಅಯ್ಯಪ್ಪ ದೇವಸ್ಥಾನ ದೇಶದ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಸೇರಿದೆ. ಪ್ರತಿ ವರ್ಷ ಸುಮಾರು ೧೦ ಕೋಟಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯವು ಪರ್ವತಗಳು ಮತ್ತು ದಟ್ಟವಾದ ಕಾಡುಗಳ ನಡುವೆ ಸಮುದ್ರ ಮಟ್ಟದಿಂದ ೪,೧೩೩ ಅಡಿ ಎತ್ತರದಲ್ಲಿದೆ. ಈ ದೇವಾಲಯಕ್ಕೆ ಪುರುಷರು ಮಾತ್ರ ಹೋಗಬಹುದು. ಈ ದೇವಾಲಯವು ಒಂದು ವರ್ಷದಲ್ಲಿ ಸುಮಾರು ೨೩೦ ಕೋಟಿ ರೂಪಾಯಿಗಳನ್ನು ಗಳಿಸುತ್ತದೆ. ಮಕರ ಸಂಕ್ರಾAತಿ ಸಂದರ್ಭದಲ್ಲಿ ಇಲ್ಲಿ ಕಾಣುವ ಜ್ಯೋತಿ ದರ್ಶನಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕಾಣಸಿಗುತ್ತಾರೆ.

ಅಕ್ಷರಧಾಮ ದೇವಾಲಯ, ದೆಹಲಿ
ದೆಹಲಿಯ ಕಾಮನ್ ವೆಲ್ತ್ ಖೇಲ್ಗಾಂವ್ ಬಳಿ ೧೦೦ ಎಕರೆ ಭೂಮಿಯಲ್ಲಿ ನಿರ್ಮಿಸಲಾದ ಸ್ವಾಮಿನಾರಾಯಣ ಮಂದಿರವನ್ನು ಅಕ್ಷರಧಾಮ ದೇವಾಲಯ ಎಂದೂ ಕರೆಯುತ್ತಾರೆ. ಇದರ ಹೆಸರು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಎಂದು ದಾಖಲಾಗಿದೆ. ಇದು ೧೦,೦೦೦ ವರ್ಷಗಳಷ್ಟು ಹಳೆಯ ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ವಾಸ್ತುಶಿಲ್ಪವನ್ನು ಚಿತ್ರಿಸುತ್ತದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೇವಾಲಯದಲ್ಲಿರುವ ಸ್ವಾಮಿನಾರಾಯಣನ ವಿಗ್ರಹವು ಚಿನ್ನದಿಂದ ಮಾಡಲ್ಪಟ್ಟಿದೆ.

ಕಾಶಿ ವಿಶ್ವನಾಥ ದೇವಸ್ಥಾನ, ವಾರಣಾಸಿ
ದೇಶದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯವು ಒಂದಾಗಿದೆ. ಪ್ರತಿ ವರ್ಷ ೩೦ ಲಕ್ಷಕ್ಕೂ ಹೆಚ್ಚು ದೇಶೀಯ ಮತ್ತು ೨ ಲಕ್ಷ ವಿದೇಶಿ ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯವು ವಾರ್ಷಿಕವಾಗಿ ೪ ರಿಂದ ೫ ಕೋಟಿ ರೂಪಾಯಿಗಳ ಕಾಣಿಕೆಯನ್ನು ಪಡೆಯುತ್ತದೆ, ಇದು ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ದೇವಾಲಯದ ೩ ಗುಮ್ಮಟಗಳಲ್ಲಿ ೨ ಚಿನ್ನದ ಲೇಪನವಿದೆ.
ಈ ದೇವಾಲಯಗಳ ಶ್ರೀಮಂತಿಕೆಯನ್ನು, ಪವಿತ್ರತೆಯನ್ನು ಹಾಗೇ ಉಳಿಸಿಕೊಳ್ಳುವ ಅನಿವಾರ್ಯತೆಯೂ ನಮಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top