ಈ ಸಲ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿಯುತ್ತಾರಾ? ಈ ದಿಗ್ಗಜ ಕ್ರಿಕೆಟಿಗರು ೨೦೨೨ರ ಐಪಿಎಲ್ ಇನ್ನೇನು ಸನಿಹದಲ್ಲಿದೆ. ಈಗಾಗಲೇ ೨ ಹೊಸ ತಂಡಗಲು ಬೇರೆ ಸೇರಿಕೊಂಡಿವೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಡ್ಡಿಂಗ್ ಕೂಡ ನಡೆಯಲಿದೆ. ಅನೇಕ ಪ್ರತಿಭಾನ್ವಿತ ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗೆ ಎದುರು ನೋಡುತ್ತಿದ್ದಾರೆ. ಸ್ಟಾರ್ ಆಟಗಾರರಾಗಿದ್ದರೂ ಈ ಬಾರಿಯ ಬಿಡ್ಡಿಂಗ್‌ನಲ್ಲಿ ಹರಾಜಾಗದೆ ಒಂದಿಷ್ಟು ಆಟಗಾರರು ಉಳಿಯಬಹುದೆನ್ನುವ ನಿರೀಕ್ಷೆ ಇದೆ. ಅಂತಹ ಆಟಗಾರರು ಯಾರು? ಒಂದು ಸಣ್ಣ ಸಮೀಕ್ಷೆ ಇಲ್ಲಿದೆ.
ಕ್ರಿಸ್ ಗೇಲ್ :
ಕ್ರಿಸ್ ಗೇಲ್ ಕಳೆದ ಬಾರಿ ಬಿಡ್ಡಿಂಗ್‌ನಲ್ಲಿಯೇ ಯಾರೂ ಖರೀದಿಸದೆ ಉಳಿದುಕೊಂಡಿದ್ದರು. ಬಳಿಕ ಅಂತಿಮವಾಗಿ ಪ್ರೀತಿ ಝಿಂಟಾ ಮೂಲಬೆಲೆ ೨ ಕೋಟಿ ರುಪಾಯಿಗಳಿಗೆ ಪಂಜಾಬ್ ಕಿಂಗ್ಸ್ ತೆಕ್ಕೆಗೆ ಹಾಕಿಕೊಂಡಿದ್ದರು. ಆದರೆ ಕಳೆದ ಐಪಿಎಲ್ ಪಂದ್ಯದಲ್ಲಿ ಗೇಲ್ ಒಂದೇ ಒಂದು ಅರ್ಧ ಶತಕವನ್ನೂ ಬಾರಿಸಿಲ್ಲ. ಹಾಗೂ ಗೇಲ್ ರನ್ ಸರಾಸರಿ ಕೂಡ ಬಹಳ ಕಡಿಮೆ. ಒಟ್ಟಾರೆ ಟೂರ್ನಮೆಂಟ್‌ನಲ್ಲಿ ಗೇಲ್ ೧೯೩ ರನ್ ಗಳಿಸಿದ್ದರು. ಹಾಗಾಗಿ ವೆಸ್ಟ್ ಇಂಡೀಸ್ ದೈತ್ಯ ಹರಾಜಾಗದೆ ಉಳಿಯಬಹುದು ಎಂಬುದು ಕ್ರಿಕೆಟ್ ತಜ್ಞರ ಊಹೆ.
ಹರ್ಭಜನ್ ಸಿಂಗ್
ಕಳೆದ ಬಾರಿಯ ಹರಾಜಿನಲ್ಲಿ ಅಂತಿಮ ಕ್ಷಣದಲ್ಲಿ ಕೊಲ್ಕತ್ತಾ ತಂಡದ ಪಾಲಾಗಿದ್ದ ಭಜ್ಜಿ ಈ ಬಾರಿ ಯಾವುದೇ ಫ್ರಾಂಚೈಸಿ ಪಾಲಾಗುವುದು ಅನುಮಾನ. ಮೂರು ಪಂದ್ಯಗಳಲ್ಲಿ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿದ್ದರೂ ಭಜ್ಜಿ ಅಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಸಫಲರಾಗಿರಲಿಲ್ಲ. ಅದಲ್ಲದೆ ೯ರ ಸರಾಸರಿಯಲ್ಲಿ ರನ್ ನೀಡಿದ್ದರು. ಹಾಗಾಗಿ ಯಾವುದೇ ಫ್ರಾಂಚೈಸಿ ಪಾಲಾಗುವುದು ಅನುಮಾನ.
ಅಂಬಾಟಿ ರಾಯುಡು
ಮಧ್ಯಮ ಕ್ರಮಾಂಕದಲ್ಲಿ ಆಡುವ ರಾಯುಡು ಕಳೆದ ಸೀಸನ್‌ನಲ್ಲಿ ಚೆನ್ನೆöÊ ಪರ ಆಡುವ ಬಳಗದಲ್ಲಿದ್ದರು. ಅದಕ್ಕೂ ಮೊದಲು ಟ್ರೋಫಿ ಗೆದ್ದ ಮುಂಬೈ ತಂಡದ ಭಾಗವೂ ಆಗಿದ್ದರು. ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಈ ಪ್ರತಿಭೆ ಕಳೆದ ಸೀಸನ್ ನಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಹಾಗಾಗಿ ಈ ಬಾರಿ ಅವರೂ ಯಾವುದೇ ತಂಡದ ಪಾಲಾಗುವುದು ಅನುಮಾನ.
ಡ್ವೆöÊನ್ ಬ್ರಾವೋ :
ವೆಸ್ಟ್ ಇಂಡೀಸ್‌ನ ಈ ಆಲ್ ರೌಂಡರ್ ಐಪಿಎಲ್ ಇತಿಹಾಸದಲ್ಲಿ ತಮ್ಮ ಅಮೋಘ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಗಮನ ಸೆಳೆದವರು. ಚೆನ್ನೆöÊ ಪರವಾಗಿ ಆಡಿರುವ ಈ ಕೆರಿಬಿಯನ್ ಪ್ರತಿಭೆ ಪ್ರಶಸ್ತಿ ವಿಜೇತ ತಂಡದ ಭಾಗವಾಗಿದ್ದರು. ಇತ್ತೀಚೆಗಷ್ಟೆ ನಡೆದ ಟಿ-೨೦ ವಿಶ್ವಕಪ್‌ನಲ್ಲಿ ತನ್ನ ಕಳಪೆ ಪ್ರದರ್ಶನದಿಂದಾಗಿ ನಿವೃತ್ತಿ ಘೋಷಿಸಿದ್ದರು. ಹಾಗಾಗಿ ಈ ಬಾರಿಯ ಐಪಿಎಲ್ ಹರಾಜಿನಲ್ಲೂ ಬ್ರಾವೋ ಆಯ್ಕೆ ಅನುಮಾನ.
ಇಶಾಂತ್ ಶರ್ಮಾ
ಭಾರತ ಟೆಸ್ಟ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾಗಿರುವ ಇಶಾಂತ್ ಟಿ-೨೦ ಮಾದರಿಯಲ್ಲಿ ಅಷ್ಟೊಂದು ಯಶಸ್ವಿಯಾಗಿಲ್ಲ. ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡಿದ್ದ ಇಶಾಂತ್ ೩ ಪಂದ್ಯಗಳಿAದ ಕೇವಲ ಒಂದು ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು. ಅಷ್ಟೇ ಅಲ್ಲದೆ ಗಾಯದ ಸಮಸ್ಯೆಯೂ ಅವರನ್ನು ಕಾಡುತ್ತಿದೆ.
ಇನ್ನೂ ಅನೇಕ ದಿಗ್ಗಜ ಆಟಗಾರರು ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿಯಬಹುದೆನ್ನುವ ನಿರೀಕ್ಷೆ ಇದೆ. ಹರಾಜು ನಡೆದ ಬಳಿಕವಷ್ಟೇ ನಿಖರವಾದ ಫಲಿತಾಂಶ ದೊರಕಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
