fbpx
ಸಮಾಚಾರ

ಚಿತ್ರ ವಿಮರ್ಶೆ: ಪುಷ್ಪ ಅಂದ್ರೆ ಫೈರ್ ಅಲ್ಲ, ‘ಬಾಡಿದ ಹೂ’

ದೇಶಾದ್ಯಂತ ನೆನ್ನೆ ತಾನೇ ತೆರೆಕಂಡ ಅಲ್ಲೂ ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಸಿನಿಮಾ ಮೊದಲ ದಿನದಲ್ಲೇ ಪ್ರೇಕ್ಷಕರಿಂದ ಕೆಟ್ಟ ಪ್ರತಿಕ್ರಿಯೆ ಪಡೆದುಕೊಂಡಿದೆ. ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ತೆರೆಕಂಡ ಪುಷ್ಪನನ್ನು ನೋಡಿ ಸಿನಿ ಪ್ರೇಕ್ಷಕರು ಸುಸ್ತಾಗಿದ್ದಾರೆ. ಮೂ ಮುಖೇನ ಸೃಷ್ಟಿಸಿದ್ದ ನಿರೀಕ್ಷೆಯನ್ನು ತೃಪ್ತಿಗೊಳಿಸುವಲ್ಲಿ ‘ಪುಷ್ಪ’ ಚಿತ್ರ ಸಂಪೂರ್ಣವಾಗಿ ಸೋತಿದೆ.

ಚಿತ್ರದ ಕಥಾನಾಯಕ ‘ಪುಷ್ಪ’ ರಕ್ತಚಂದನ ಕಳ್ಳ ಸಾಗಾಣ್ಕೆ ಮಾಡುವ ಸ್ಮಗ್ಲರ್.. ಆ ದಂಧೆಯಲ್ಲಿ ಆತ ಹೇಗೆ ಮೆರೆಯುತ್ತಾನೆ ಅನ್ನೋದೇ ಕಥೆ.. ಇಂಥಾ ತೀರಾ ಸಾಧಾರಣ ಕತೆಗೆ ಅಸಾಧಾರಣ ಗಟ್ಟಿ ಚಿತ್ರಕತೆ ಹೆಣೆಯುವಲ್ಲಿ ನಿರ್ದೇಶಕ ಸಂಪೂರ್ಣವಾಗಿ ಸೋತಿದ್ದಾರೆ. ಇನ್ನು ನಟಿ ರಶ್ಮಿಕಾ ಅವರು ಡಿಗ್ಲಾಮ್​ ಲುಕ್​ನಲ್ಲಿ ಕಾಣಿಸಿಕೊಂಡಿರುವುದನ್ನು ನೋಡಿ ಪ್ರೇಕ್ಷಕರು ಕಿರಿಕೇರಿಗೆ ಒಳಗಾಗಿದ್ದಾರೆ. ಅಷ್ಟರ ಮಟ್ಟಿಗೆ ಓವರ್ ಆಕ್ಟಿಂಗ್ ಆಕೆಯದ್ದು.

ಇನ್ನು ಚಿತ್ರದ ಒಂದೆರೆಡು ಹಾಡುಗಳು ಸಾಧಾರಣವಾಗಿದ್ದು ಉಳಿದ ಹಾಡುಗಳು ಕಳಪೆಯಾಗಿವೆ. ಹಿನ್ನಲೆ ಸಂಗೀತ ಕೂಡ ಕೆಟ್ಟದಾಗಿದೆ. ಕಥೆ, ಚಿತ್ರಕಥೆ, ನಿರ್ದೇಶನದಲ್ಲಿ ನಿರ್ದೇಶಕರು ಹಳಿತಪ್ಪಿದ್ದಾರೆ. ಆಯಾ ಪಾತ್ರಗಳಿಗೆ ಕಲಾವಿದರ ಆಯ್ಕೆ ಕೂಡ ಸರಿಯಾಗಿ ಆಗಿಲ್ಲ. ಅನವಶ್ಯಕವಾಗಿ ಕಥೆಯನ್ನು ಎಳೆಯಲಾಗಿದೆ.ಚಿತ್ರದಲ್ಲಿ ವಾವ್ ಎನಿಸುವಂಥ ಯಾವುದೇ ಅಂಶವಿಲ್ಲ.. ಸರ್ಪ್ರೈಸ್ ಎಲಿಮೆಂಟ್ ಕೂಡ ಇಲ್ಲ,. ಚಿತ್ರದ ಬಹುತೇಕ ಸಮಯವನ್ನು ಅಲ್ಲು ಅರ್ಜುನ್ ಪಾತ್ರಕ್ಕೆ ಬಿಲ್ಡಪ್‌ ನೀಡುವುದಕ್ಕೆಂದೇ ವ್ಯಯಿಸಲಾಗಿದೆ. ಹೀಗೆ ಬೇಕಾಬಿಟ್ಟಿಯಾಗಿ ಸಿನಿಮಾ ಮಾಡಿದಂತೆ ಅನಿಸುತ್ತದೆ.

ಹೀಗೆ ಅನಗತ್ಯ ಪ್ರಚಾರ, ಓವರ್ ಬಿಲ್ಡಪ್ ಕೊಟ್ಟು ಸಪ್ಪೆ ಚಿತ್ರವನ್ನು ತೋರಿಸಿದ ಪುಷ್ಪ ಚಿತ್ರತಂಡಕ್ಕೆ ಪ್ರೇಕ್ಷಕರು ಬೈಕೊಂಡು ಚಿತ್ರಮಂದಿರಗಳಿಂದ ಬೈದುಕೊಂಡು ಹೊರಬರುತ್ತಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top