fbpx
ಸಮಾಚಾರ

2021ರಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಮೆಚ್ಚುಗೆ ಪಡೆದ ಪುರುಷರು ಯರ‍್ಯಾರು? ಪಟ್ಟಿಯಲ್ಲಿರುವ ಭಾರತೀಯರು ಯರ‍್ಯಾರು?

‘ಯೂ ಗವ್’ ನ ಅಂತಾರಾಷ್ಟ್ರೀಯ ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ ಅತಿಹೆಚ್ಚು ಮೆಚ್ಚುಗೆಗೆ ಪಾತ್ರರಾದ ವಿಶ್ವದ ಅಗ್ರ ಹತ್ತು ಪುರುಷರ ಪಟ್ಟಿ ಇಲ್ಲಿದೆ. ಬ್ರಿಟಿಷ್ ಸಂಸ್ಥೆಯ ಪ್ರಕಾರ ೩೮ ದೇಶಗಳು ಮತ್ತು ಪ್ರಾಂತ್ಯಗಳು ೪೨ ಸಾವಿರ ಕ್ಕಿಂತ ಹೆಚ್ಚು ಜನರನ್ನು ಸಮೀಕ್ಷೆಗೆ ಬಳಸಿದ್ದು ಪ್ರಪಂಚದ ಅತ್ಯಂತ ಮೆಚ್ಚುಗೆ ಪಡೆದ ಪುರುಷರು ಮತ್ತು ಮಹಿಳೆಯರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪುರುಷರ ಶ್ರೇಯಾಂಕದಲ್ಲಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಮಹಿಳಾ ರ‍್ಯಾಂಕಿoಗ್‌ನಲ್ಲಿ ಹತ್ತನೇ ಸ್ಥಾನ ಪಡೆದಿದ್ದಾರೆ.
ಹಾಗಾದರೆ ಟಾಪ್ ಇಪ್ಪತ್ತು ಪುರುಷರು ಮತ್ತು ಮಹಿಳೆಯರ ಸಂಪೂರ್ಣ ಪಟ್ಟಿಯನ್ನು ನೋಡೋಣ:

 

 

೨೦. ಜೋ ಬಿಡನ್ :
ಇವರು ಇಪ್ಪತ್ತನೇ ಶತಮಾನದಲ್ಲಿ ಅತ್ಯಂತ ಮೆಚ್ಚುಗೆ ಪಡೆದಂಥ ವ್ಯಕ್ತಿ. ಇತ್ತೀಚೆಗೆ ಅಮೆರಿಕದ ಚುನಾವಣೆಯಲ್ಲಿ ಗೆದ್ದು ಪ್ರಸ್ತಕ ಅಧ್ಯಕ್ಷರಾಗಿದ್ದಾರೆ. ಬರಾಕ್ ಒಬಾಮ ಅವರ ಅಧ್ಯಕ್ಷತೆಯಲ್ಲಿ ನಲವತ್ತೇಳನೇ ಉಪಾಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ.

೧೯. ಆಂಡಿ ಲಾವ್
ಹಾಂಕಾAಗ್ ನಟ, ಗಾಯಕ, ಗೀತ ರಚನೆಕಾರ ಹಾಗೂ ಚಲನಚಿತ್ರ ನಿರ್ಮಾಪಕ. ೨೦೨೧ ರಲ್ಲಿ ವಿಶ್ವದ ಹತ್ತೊಂಭತ್ತನೇ ಅತ್ಯಂತ ಮೆಚ್ಚುಗೆ ಪಡೆದ ವ್ಯಕ್ತಿಯಾಗಿ ಸ್ಥಾನ ಪಡೆದುಕೊಂಡಿದ್ದಾರೆ. ನೂರ ಅರುವತ್ತು ಚಲನ ಚಿತ್ರಗಳಲ್ಲಿ ನಟಿಸಿದ್ದು ಯಶಸ್ವೀ ವೃತ್ತಿಜೀವನವÀನ್ನು ಸಹ ಇವರು ನಿರ್ವಹಿಸಿದ್ದಾರೆ.

೧೮. ವಿರಾಟ್ ಕೊಹ್ಲಿ
ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಹದಿನೆಂಟನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯಸ್ಥರು. ಇತ್ತೀಚೆಗಷ್ಟೇ ರೋಹಿತ್ ಶರ್ಮಾ ಅವರನ್ನು ವೈಟ್ ಬಾಲ್ ನಲ್ಲಿ ನಾಯಕರನ್ನಾಗಿ ನೇಮಿಸಲಾಯಿತು ಅತ್ಯುತ್ತಮ ಬ್ಯಾಟ್ಸ್ ಮನ್ ಆಗಿರುವ ಕೊಹ್ಲಿ ಈ ಬಾರಿ ಹದಿನೇಳನೇ ಸ್ಥಾನದಲ್ಲಿದ್ದಾರೆ.

೧೭. ಇಮ್ರಾನ್ ಖಾನ್
ಪ್ರಸ್ತುತ ಪಾಕಿಸ್ತಾನದ ಪ್ರಧಾನಿಯಾಗಿ ಕೆಲವೊಂದು ವಿವಾದಾತ್ಮಕ ಹೇಳಿಕೆಗಳಿಂದ ಜನಪ್ರಿಯವಾಗಿರುವಂತಹ ಇಮ್ರಾನ್ ಖಾನ್ ೨೦೨೧ರ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್ ಇಪ್ಪತ್ತು ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಕ್ರಿಕೆಟಿಗರಾಗಿ ವೃತ್ತಿಜೀವನ ಆರಂಭಿಸಿದ ಇವರು ನಂತರ ರಾಜಕೀಯ ಪ್ರವೇಶ ಮಾಡಿದ್ದರು.

೧೬. ಪೋಪ್ ಫ್ರಾನ್ಸಿಸ್
ಕ್ಯಾಥೊಲಿಕ್ ಚರ್ಚ್ ನ ಮುಖ್ಯಸ್ಥರಾಗಿರುವ ಇವರು ೨೦೧೩ರರಿಂದ ವ್ಯಾಟಿಕನ್ ಸಿಟಿಯ ಸಾರ್ವಭೌಮರಾಗಿದ್ದವರು. ಸೊಸೈಟಿ ಆಫ್ ಜೀಸಸ್‌ನ ಸದಸ್ಯರಾಗಿರುವ ಮೊದಲ ಪೋಪ್ ಕೂಡ ಇವರು.

೧೫. ಅಮಿತಾಭ್ ಬಚ್ಚನ್
ಬಿಗ್ ಬಿ ಎಂದೇ ಹೆಸರಾಗಿರುವ ಅಮಿತಾಬ್ ಬಚ್ಚನ್ ವಿಶ್ವದ ಅತ್ಯಂತ ಪ್ರಭಾವಶಾಲಿ ನಟರಲ್ಲಿ ಒಬ್ಬರು. ಇವರು ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಪುರುಷರ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

೧೪. ಶಾರುಖ್ ಖಾನ್
ರೊಮ್ಯಾಂಟಿಕ್ ಚಲನಚಿತ್ರಗಳಿಗೆ ಹೆಸರುವಾಸಿಯಾಗಿ ಜಾಗತಿಕ ಮನ್ನಣೆ ಪಡೆದುಕೊಂಡಿರುವ ಭಾರತೀಯ ನಟ, ನಿರ್ಮಾಪಕ, ಟಿವಿ ಸೆಲೆಬ್ರಿಟಿ ಶಾರುಖ್ ಖಾನ್ ಈ ಬಾರಿ ವಿಶ್ವದ ಮನ್ನಣೆ ಪಡೆದ ೧೪ನೇ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

೧೩. ಡೊನಾಲ್ಡ್ ಟ್ರಂಪ್
ಅಮೇರಿಕದ ಅಧ್ಯಕ್ಷರಲ್ಲಿ ಅತ್ಯಂತ ವಿವಾದಾತ್ಮಕ ನಿರ್ಧಾರಗಳನ್ನು ತೆಗೆದುಕೊಂಡು ಜನಪ್ರಿಯರಾದವರು. ಮೊದಲಿಗೆ ಉದ್ಯಮಿಯಾಗಿ ನಂತರ ರಾಜಕಾರಣಿಯಾಗಿ ಯಶಸ್ವಿಯಾದವರು. ಅಮೇರಿಕಾದ ನಲವತ್ತೈದನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರ ಅಮೇರಿಕನ್ ಪ್ರಜೆ. ಇವರ ನಂತರ ಜೋ ಬಿಡನ್ ಅವರು ಅಧಿಕಾರ ವಹಿಸಿಕೊಂಡರು.

೧೨. ಸಚಿನ್ ತೆಂಡೂಲ್ಕರ್
ಕ್ರಿಕೆಟ್ ದೇವರು ಎಂದೇ ಹೆಸರಾಗಿರುವ ಸಚಿನ್ ತೆಂಡೂಲ್ಕರ್ ಭಾರತದ ಮಾಜಿ ಕ್ರಿಕೆಟಿಗ ಮತ್ತು ಬ್ಯಾಟ್ಸ್ ಮನ್. ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಕೂಡ ಸೇವೆ ಸಲ್ಲಿಸಿದವರು. ಈಗ ವಿಶ್ವದ ಹನ್ನೆರಡನೇ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

೧೧. ವಾರೆನ್ ಬಫೆಟ್
ಅಮೇರಿಕದ ಉದ್ಯಮಿಯಾಗಿರುವ ಹೂಡಿಕೆದಾರರಾಗಿರುವ ಪ್ರಸ್ತುತ ಬರ್ಕ್ ಶೈರ್ ಹ್ಯಾಥ್‌ವೇಯ ಅಧ್ಯಕ್ಷರು ಮತ್ತು ಸಿಇಒ ಆಗಿರುವಂಥ ವಾರೆನ್ ಬಫೆಟ್ ೨೦೨೧ರ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಪುರುಷರ ಪಟ್ಟಿಯಲ್ಲಿ ಹನ್ನೊಂದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

೧೦. ಜಾಕ್ ಮಾ
ಅಮೆರಿಕದ ಆಲಿಬಾಬಾ ಗ್ರೂಪ್‌ನ ಸಂಸ್ಥಾಪಕ, ಸ್ಥಾಪಕ ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ಅಂಥ ಜಾಕ್ ಮಾ ಒಬ್ಬ ಚೈನೀಸ್ ಉದ್ಯಮಿ, ಹೂಡಿಕೆದಾರ. ಜಾಕ್ ಮಾ ಅಲಿಬಾಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ ಇವರು ವಿಶ್ವದ ಜನಪ್ರಿಯ ವ್ಯಕ್ತಿಗಳಲ್ಲಿ ಹತ್ತನೇ ಸ್ಥಾನ ಪಡೆದುಕೊಂಡಿದ್ದಾರೆ

೦೯. ವ್ಲಾಡಿಮಿರ್ ಪುಟಿನ್:
೨೦೧೨ರಿಂದ ರಷ್ಯಾದ ಅಧ್ಯಕ್ಷರಾಗಿದ್ದಾರೆ. ೧೯೯೯ರಿಂದ ೨೦೦೮ರವರೆಗೆ ಅವರು ಈ ಹುದ್ದೆಯನ್ನು ಹೊಂದಿದ್ರು ರಷ್ಯಾದ ರಾಜಕಾರಣಿ ಮತ್ತು ಮಾಜಿ ಗುಪ್ತಚರ ಅಧಿಕಾರಿ ಆಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.

೦೮. ನರೇಂದ್ರ ಮೋದಿ
೨೦೧೪ರಿಂದ ಅಧಿಕಾರ ವಹಿಸಿಕೊಂಡಿರುವ ಭಾರತದ ನಾಲ್ಕನೆ ಮತ್ತು ಪ್ರಸ್ತಕ ಪ್ರಧಾನಿ. ೨೦೦೧ರಿಂದ ೨೦೦೪ ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಭಾರತೀಯ ಜನತಾ ಪಕ್ಷ ಮತ್ತು ಅದರ ರಾಷ್ಟ್ರೀಯ ಪ್ರಜಾಸತಾತ್ಮಕ ಒಕ್ಕೂಟದ ಸದಸ್ಯರಾಗಿದ್ದಾರೆ.

೦೭. ಲಿಯೋನಲ್ ಮೆಸ್ಸಿ
ಲಿಯೋ ಮೆಸ್ಸಿ ಎಂದೇ ಪ್ರಸಿದ್ಧರಾಗಿರುವ ಮೆಸ್ಸಿ ಅರ್ಜೆಂಟೀನದ ಫುಟ್ಬಾಲ್ ಆಟಗಾರ. ಅರ್ಜೆಂಟೀನಾದ ರಾಷ್ಟ್ರೀಯ ತಂಡದ ನಾಯಕರೂ ಕೂಡ. ಇವರು ಪ್ರಸ್ತಕ ಏಳನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ

೦೬. ಎಲೋನ್ ಮಸ್ಕ್ :
ಟೆಸ್ಲಾ ಕಂಪೆನಿಯ ಉತ್ಪನ್ನ ವಾಸ್ತುಶಿಲ್ಪಿ ಮತ್ತು ಸ್ಪೇಸ್ ಎಕ್ಸ್ ನ ಸಿಇಒ ಮುಖ್ಯ ಎಂಜಿನಿಯರ್ ಕೂಡ ಹೌದು. ಬೋರಿಂಗ್ ಕಂಪೆನಿಯ ಸ್ಥಾಪಕರು, ನ್ಯೂರಾಲಿಂಕ್ ಮತ್ತು ಓಪನ್ ಎ ಐ ನ ಸಹ ಸಂಸ್ಥಾಪಕ ಎಲೋನ್ ಮಸ್ಕ್ ಅವರು ವರ್ಡ್ಸ್ ವರ್ತ್ ಇಪ್ಪತ್ತೊಂದರ ಅತ್ಯಂತ ಜನಪ್ರಿಯ ಪುರುಷರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.

೦೫. ಜಾಕಿ ಜಾನ್ :

ಜಾಕಿ ಜಾನ್ ಹಾಂಕಾAಗ್‌ನ ನಟ, ಸಮರ ಕಲಾವಿದ, ನಿರ್ದೇಶಕ ಮತ್ತು ಸ್ಟಂಟ್ ಮನ್. ಅವ್ರು ಸ್ಲ್ಯಾಪ್ ಸ್ಟಿಕ್ ಚಮತ್ಕಾರಿಕ ಹೋರಾಟ ಶೈಲಿಗೆ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ. ಇವರು ವಿಶ್ವದ ಐದನೇ ಪ್ರಸಿದ್ಧ ಪುರುಷ.

೦೪. ಕ್ರಿಸ್ಟಿಯಾನೊ ರೊನಾಲ್ಡೊ
ಇಪ್ಪತ್ತೊಂದರ ಅತ್ಯಂತ ಪ್ರಶಂಸನೀಯ ಪುರುಷರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ರೊನಾಲ್ಡೊ ಪಡೆದುಕೊಂಡಿದ್ದಾರೆ. ಪೋರ್ಚುಗೀಸ್ ಫುಟ್ ಬಾಲ್ ತಂಡದ ಆಟಗಾರರಾಗಿದ್ದು ಈಗ ಪೋರ್ಚುಗಲ್ ರಾಷ್ಟ್ರೀಯ ತಂಡದ ನಾಯಕರೂ ಹೌದು.

೦೩. ಕ್ಸಿ ಜಿನ್ ಪಿಂಗ್
೨೦೧೩ರರಿಂದ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧ್ಯಕ್ಷರಾಗಿ ಕ್ಸಿ ಜಿನ್ ಪಿಂಗ್ ಇವರು ೨೦೨೧ರ ಅತ್ಯಂತ ಜನಪ್ರಿಯ ಪುರುಷರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

೦೨. ಬಿಲ್ ಗೇಟ್ಸ್
ಅಮೆರಿಕದ ಉದ್ಯಮಿಯಾಗಿರುವ ಬಿಲ್ ಗೇಟ್ಸ್ ಸಾಫ್ಟ್ ವೇರ್ ಡೆವಲಪರ್, ಹೂಡಿಕೆದಾರ ಹಾಗೂ ಲೇಖಕ. ಬಾಲ್ಯದ ಗೆಳೆಯ ಪಾಪ್ ಅಲೆನ್ ಜೊತೆ ಸೇರಿ ಮೈಕ್ರೊಸಾಪ್ಟ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ವಿಶ್ವದ ಪ್ರಸಿದ್ದ ಪುರುಷರಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

೦೧. ಬರಾಕ್ ಒಬಾಮಾ
ಅಮೆರಿಕದ ೪೪ನೇ ಅಧ್ಯಕ್ಷ ಹಾಗೂ ಈಗ ಪ್ರಸ್ತುತ ಮಾಜಿ ಅಧ್ಯಕ್ಷರಾಗಿರುವ ಬರಾಕ್ ಒಬಾಮಾ ಒಬಾಮಾ ಅವರು ವಿಶ್ವದ ಅತ್ಯಂತ ಉನ್ನತ ಜನಪ್ರಿಯ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇವರ ನಂತರ ಡೊನಾಲ್ಡ್ ಟ್ರಂಪ್ ಅಧಿಕಾರವನ್ನು ವಹಿಸಿಕೊಂಡಿದ್ದರು.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top