“ಮನೆ ಕಟ್ಟಿ ನೋಡು, ಒಂದು ಮದುವೆ ಮಾಡಿ ನೋಡು” ಅನ್ನುವ ಮಾತಿದೆ. ಮನೆ ಕಟ್ಟುವುದು ಎಷ್ಟು ತ್ರಾಸದಾಯಕ ಎಂಬುದನ್ನು ವಿವರಿಸುವ ನುಡಿಗಟ್ಟದು. ಸ್ವಂತ ಸೂರು ಕಟ್ಟುವ ಬಡವರ ಕನಸಿಗೆ ಇದೀಗ ಬಿ.ಜೆ.ಪಿ ಸರ್ಕಾರ ಕಲ್ಲು ಹಾಕಿದೆ. ಸ್ವಂತ ಮನೆ ಕಟ್ಟುವ ಅಸೆ ಹೊತ್ತು ಕಾದಿದ್ದ ಅದೆಷ್ಟೋ ಮಂದಿಯ ಕನಸಿಗೆ ಬಿಜೆಪಿ ಸರ್ಕಾರ ತಣ್ಣೀರೆರಚಿದೆ.
ಹೌದು ಮನೆಗಳ ಅನುದಾನಕ್ಕಾಗಿ ಕಾದು ಕುಳಿತಿದ್ದ ಅದರಲ್ಲೂ ಈ ಹಿಂದೆ ಗ್ರಾಮ ಪಂಚಾಯತ್ಗಳಿಗೆ ಮಂಜೂರಾಗಿದ್ದ 1.19 ಲಕ್ಷ ಮನೆಗಳ ಆದೇಶವನ್ನು ಸರ್ಕಾರ ಹಿಂಪಡೆದಿದೆ. 2018-19ರ ಸಾಲಿನಲ್ಲಿ ಪ್ರತೀ ಪಂಚಾಯತ್ಗೆ 2 ಮನೆ ಮಂಜೂರು ಮಾಡುವಂತೆ ಆದೇಶಿಸಿ ಮೈತ್ರಿ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಬಿಜೆಪಿ ಸರ್ಕಾರ ಈ ಯೋಜನೆಯನ್ನು ರದ್ದುಗೊಳಿಸಿ ಮನೆಯ ನಿರೀಕ್ಷೆಯಲ್ಲಿದ್ದ ರಾಜ್ಯದ ಜನರಿಗೆ ಶಾಕ್ ನೀಡಿದೆ.
ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ 2011ರ ಜನಗಣತಿಯನ್ನು ಪರಿಗಣನೆಗೆ ತೆಗೆದುಕೊಂಡು ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಬಳಿಕ ಈ ಪಟ್ಟಿಯನ್ನು ಅಂತಿಮಗೊಳಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಕೇಂದ್ರದಿAದ ಯಾವುದೇ ಅನುದಾನ ಬಂದಿಲ್ಲ. ಹಾಗಾಗಿ ಯೋಜನೆಯನ್ನು ಹಿಂಪಡೆಯಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
