fbpx
ಸಮಾಚಾರ

2021 ರಲ್ಲಿ ವಿಶ್ವದಲ್ಲಿ ಅತ್ಯಂತ ಮೆಚ್ಚುಗೆ ಪಡೆದ ಮಹಿಳೆಯರು.

2021ರಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಮೆಚ್ಚುಗೆ ಪಡೆದ ಮಹಿಳೆರು ಯಾರ‍್ಯಾರು?

 

 

೨೦. ಜಸಿಂದಾ ಅರ್ಡೆರ್ನ್
೨೦೧೭ರಿಂದ ಲೇಬರ್ ಪಕ್ಷದ ನಾಯಕಿಯಾಗಿದ್ದಾರೆ. ನ್ಯೂಜಿಲೆಂಡ್‌ನ ನಲವತ್ತ ನೇ ಪ್ರಧಾನ ಮಂತ್ರಿಯೂ ಹೌದು.

೧೯. ಯಾಂಗ್ ಮಿ
ಟ್ಯಾಂಗ್ ಮಿಂಗ್ ಹುವಾಂಗ್ ಅವರೊಂದಿಗೆ ಟಿವಿ ನಟನೆಗೆ ಪಾದಾರ್ಪಣೆ ಮಾಡಿದವರು. ನಂತರ ಚೀನಾದ ಪ್ರಮುಖ ಟಿವಿ ಸರಣಿ ಕಾರ್ಯಕ್ರಮಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ.

೧೮. ಲಿಯು ಝಿಪಿ
ಇವರು ಚೈನೀಸ್ ಅಮೆರಿಕನ್ ನಟಿ, ಗಾಯಕಿ ಹಾಗೂ ರೂಪದರ್ಶಿ ಪೋರ್ಬ್ಸ ಚೀನಾ ಸೆಲೆಬ್ರಿಟಿ ನೂರರ ಪಟ್ಟಿಯಲ್ಲಿ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ. ಇವರನ್ನು ಚೀನಾದಲ್ಲಿ ಫೇರಿ ಸಿಸ್ಟರ್ ಎಂದು ವ್ಯಾಪಕವಾಗಿ ಕರೆಯಲಾಗುತ್ತದೆ.

೧೭. ಲೀಸಾ
ಲಾಲಿಸ ಮನೋಬಲ ಲಿಸಾ ಎಂದೇ ಖ್ಯಾತಿಯಾದವರು. ದಕ್ಷಿಣ ಕೊರಿಯಾ ಮೂಲದ ರಾಪರ್ ಹಾಗೂ ಗಾಯಕಿ, ನರ್ತಕಿ ೨೦೨೧ರಲ್ಲಿ ಸಿಂಗಲ್ ಆಲ್ಬಂನೊAದಿಗೆ ಪಾದಾರ್ಪಣೆ ಮಾಡಿದವರು.

೧೬. ಮೆಲಾನಿಯಾ ಟ್ರಂಪ್
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರು ಕೂಡ ೨೦೨೧ರ ಮಹಿಳೆಯರಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸ್ಲೋವಿಯನ್-ಅಮೆರಿಕನ್ ಮಾಜಿ ಮಾಡೆಲ್ ಮತ್ತು ಉದ್ಯಮಿ ಪಟ್ಟಿಯಲ್ಲಿ ೧೬ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

೧೫. ಗ್ರೇಟ್ ಥೇನ್ ಬರ್ಗ್
ಇವರೊಬ್ಬ ಪರಿಸರ ಕಾರ್ಯಕರ್ತೆ. ಹವಾಮಾನ ಬದಲಾವಣೆ ತಗ್ಗಿಸುವಿಕೆಗಾಗಿ ಅನೇಕ ಕ್ರಮಗಳನ್ನು ಕೈಕೊಂಡು ವಿಶ್ವದ ನಾಯಕರುಗಳಿಗೆ ಸವಾಲು ಹಾಕಿದವರು.

೧೪. ಸುಧಾಮೂರ್ತಿ
ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷರು. ಇನ್ಫೋಸಿಸ್‌ನ ಸಹ ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಅವರನ್ನು ವಿವಾಹವಾಗಿದ್ದಾರೆ. ಅನೇಕ ಸಾಮಾಜಿಕ ಚಟುವಟಿಕೆಗಳಿಂದ ಗುರುತಿಸಿಕೊಂಡಿದ್ದಾರೆ.

೧೩. ಐಶ್ವರ್ಯಾ ರೈ ಬಚ್ಚನ್
೨೦೧೯ರ ವಿಶ್ವಸುಂದರಿ ವಿಜೇತೆ ಐಶ್ವರ್ಯ ರೈ ಬಚ್ಚನ್ ಹಿಂದಿ ಹಾಗೂ ತಮಿಳು ಚಲನಚಿತ್ರಗಳಲ್ಲಿ ಹೆಸರುವಾಸಿಯಾದ ಭಾರತೀಯ ನಟಿ.

೧೨. ಹಿಲರಿ ಕ್ಲಿಂಟನ್
ಅಮೆರಿಕದ ರಾಜತಾಂತ್ರಿಕ ರಾಜಕಾರಣಿ ವಕೀಲ ಮತ್ತು ಬರಹಗಾರರು ಇವರು ೨೦೦೯ ರಿಂದ ೨೦೧೩ ರವರೆಗೆ ಅರವತ್ತೇಳನೆಯ ಯುನೈಟೆಡ್ ಸ್ಟೇಟ್ಸ್ ಸೆಕ್ರೆಟರಿ ಆಗಿ ಸೇವೆ ಸಲ್ಲಿಸಿದ್ದಾರೆ.

೧೧. ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್ ಅಮೇರಿಕನ್ ರಾಜಕಾರಣಿಯಾಗಿದ್ದು ಇವರು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಮೇರಿಕಾ ಇತಿಹಾಸದಲ್ಲಿ ಅತ್ಯುನ್ನತ ಶ್ರೇಣಿಯ ಮಹಿಳಾ ಅಧಿಕಾರಿಯಾಗಿದ್ದಾರೆ.

೧೦. ಪ್ರಿಯಾಂಕ ಚೋಪ್ರ
ವಿಶ್ವ ಸುಂದರಿ ಪ್ರಿಯಾಂಕ ಚೋಪ್ರ ಭಾರತೀಯ ನಟಿ ರೂಪದರ್ಶಿ ಚಲನಚಿತ್ರ ನಿರ್ಮಾಪಕಿ ಹಾಗೂ ಗಾಯಕಿ ವಿಶ್ವದ ಅತ್ಯಂತ ಪ್ರಶಂಸನೀಯ ಮಹಿಳೆಯರಲ್ಲಿ ಒಬ್ಬರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಅತ್ಯಂತ ಜನಪ್ರಿಯ ಮನರಂಜನಾ ನಟರಲ್ಲಿ ಒಬ್ಬರು.

೦೯. ಮಲಾಲ ಯೂಸಫ್ ಜೈ 
ಮಲಾಲಾ ಎಂದು ಉಲ್ಲೇಖಿಸಲ್ಪಡುವ ಮಲಾಲಾ ಯೂಸುಫ್ ಜೈ ಮಹಿಳಾ ಶಿಕ್ಷಣಕ್ಕಾಗಿ ಹೋರಾಡುತ್ತಿದ್ದ ಪಾಕಿಸ್ತಾನಿ ಹೋರಾಟಗಾರ್ತಿ. ವಿಶ್ವದ ಅತ್ಯಂತ ಕಿರಿಯ ನೊಬೆಲ್ ಪ್ರಶಸ್ತಿ ವಿಜೇತ ಕೂಡಾ ಹೌದು.

೦೮. ಏಂಜೆಲಾ ಮರ್ಕೆಲ್
ಜರ್ಮನಿಯ ರಾಜಕಾರಣಿ ಮತ್ತು ವಿಜ್ಞಾನಿ. ೨೦೦೫ರಿಂದ ೨೦೨೧ ರವರೆಗೆ ಜರ್ಮನಿಯ ಮೊದಲ ಮಹಿಳಾ ಚಾನ್ಸಲರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ೨೦೦೨ ರಿಂದ ೨೦೦೫ರವರೆಗೆ ವಿರೋಧಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

೦೭. ಟೇಲರ್ ಸ್ವಿಫ್ಟ್
ಅಮೆರಿಕದ ಗಾಯಕ ಮತ್ತು ಗೀತೆ ರಚನೆಕಾರ್ತಿ ಟೇಲರ್ ಸ್ವಿಫ್ಟ್ ವಿಶ್ವದ ಏಳನೆಯ ಅತ್ಯುನ್ನತ ಮಹಿಳಾ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

೦೬. ಎಮ್ಮಾ ವ್ಯಾಟ್ಸನ್
ಎಮ್ಮಾ ವ್ಯಾಟ್ಸನ್ ಸಾಮಾಜಿಕ ಕಾರ್ಯಕರ್ತೆ ಮತ್ತು ಇಂಗ್ಲಿಷ್‌ನ ನಟಿ ಅನೇಕ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿ ಅದರಲ್ಲಿ ಪಾತ್ರಗಳನ್ನು ಮಾಡಿ ಜನಮನ ಸೆಳೆದಿದ್ದಾರೆ

೦೫. ಸ್ಕಾರ್ಲೆಟ್ ಜೊಹಾನ್ಸನ್ : ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು ವಿಶ್ವದ ಐದನೇ ಅತ್ಯಂತ ಪ್ರಭಾವಿ ಮಹಿಳೆ.

೦೪. ಓಪ್ರಾ ವಿನ್ ಫ್ರೇ
ಅಮೇರಿಕದ ಶೋ ಹೋಸ್ಟ್ ಮತ್ತು ಟೆಲಿವಿಷನ್ ನಿರ್ಮಾಪಕಿ, ನಟಿ ಹಾಗೂ ಲೇಖಕಿ ಆಕೆಯ ಟಾಕ್ ಶೋ ದಿ ಓಪ್ರಾ ವಿನ್ ಫ್ರೇ ಶೋ ಗೆ ಹೆಸರುವಾಸಿಯಾಗಿದೆ. ಇತಿಹಾಸದಲ್ಲೇ ಅತ್ಯಂತ ಹೆಚ್ಚು ರೇಟಿಂಗ್ ಪಡೆದ ದೂರದರ್ಶನ ಕಾರ್ಯಕ್ರಮ ಇವರದಾಗಿದೆ.

೦೩. ರಾಣಿ ಎಲಿಜಬೆತ್-೧೧
ಯುನೈಟೆಡ್ ಕಿಂಗ್ಡಮ್‌ನ ೧೪ ಕಾಮನ್‌ವೆಲ್ತ್ ಕ್ಷೇತ್ರಗಳ ರಾಣಿ. ಈಕೆಯ ತಂದೆ ೧೯೩೬ರರಲ್ಲಿ ತನ್ನ ಸಹೋದರ ಕಿಂಗ್ ಎಡ್ವರ್ಡ್-೮ರ ಪದತ್ಯಾಗದ ನಂತರ ಸಿಂಹಾಸನವನ್ನು ಏರಿದ್ದು ಎಲಿಜಬೆತ್ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಿದ್ದಾರೆ.

೦೨. ಏಂಜಲೀನಾ ಜೋಲಿ
ಅಮೆರಿಕದ ನಟಿ ಚಲನಚಿತ್ರ ನಿರ್ಮಾಪಕಿ. ಅಕಾಡೆಮಿ ಪ್ರಶಸ್ತಿ ಹಾಗೂ ೩ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಒಳಗೊಂಡAತೆ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ. ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ

೦೧. ಮಿಚೆಲ್ ಒಬಾಮಾ
೨೦೨೧ರ ಅತ್ಯಂತ ಪ್ರಶಂಸನೀಯ ಮಹಿಳೆ ಮಿಚೆಲ್ ಒಬಾಮಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ನಿ. ೨೦೦೯ರಿಂದ ೨೦೧೭ರವರೆಗೆ ಯುನೈಟೆಡ್ ಸ್ಟೇಟ್ಸ್ನ ಪ್ರಥಮ ಮಹಿಳೆ ಸೇವೆ ಸಲ್ಲಿಸಿದ ಅಮೇರಿಕನ್ ವಕೀಲ ಮತ್ತು ಲೇಖಕಿ. ಈ ಸ್ಥಾನದಲ್ಲಿ ಸೇವೆ ಸಲ್ಲಿಸಿದ ಮೊದಲ ಆಫ್ರಿಕನ್ ಅಮೆರಿಕನ್ ಮಹಿಳೆಯೂ ಹೌದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top