fbpx
ಸಮಾಚಾರ

ಸಂಬಂಧಗಳ ಬಗ್ಗೆ ಗೂಗಲ್ನಲ್ಲಿ ಜನ ಹುಡುಕಾಡಿದ ಪ್ರಶ್ನೆಗಳನ್ನು ಕೇಳಿ ತಲೆ ಸುತ್ತು ಬರಬಹುದು.

2022 ಸಮೀಪಿಸುತ್ತಿರುವ ಹೊತ್ತಿನಲ್ಲೇ 2021ರಲ್ಲಿ ನಾವು ಮಾಡಿದ ಅನೇಕ ಕೆಲಸಗಳನ್ನು ಮೆಲುಕು ಹಾಕುವ ಸಮಯ ಬಂದಿದೆ. ಹಾಗೆಯೇ 2021ರಲ್ಲಿ ಗೂಗಲ್‌ನಲ್ಲಿ ಕೇಳಲಾದ ಅತೀ ಹೆಚ್ಚು ಪ್ರಶ್ನೆಗಳು ಯಾವುದು ಎಂಬ ಮಾಹಿತಿಯನ್ನು ಗೂಗಲ್ ಹೊರಹಾಕಿದ್ದು ಅದರಲ್ಲೂ ರಸಿಕ ಮನಸ್ಸುಗಳು ಯಾವ್ಯಾವ ತರಹ ಪ್ರಶ್ನೆ ಕೇಳುತ್ತದೆ ಎಂಬುದನ್ನು ಈ ಸ್ಟೋರಿಯಲ್ಲಿ ನೋಡೋಣ. ಅನೇಕರು ಗಂಡ ಹೆಂಡತಿ ನಡುವೆ ಬಂದೊದಗಿದ ಸಣ್ಣಪುಟ್ಟ ಸಮಸ್ಯೆಗಲಿಗೂ ಗೂಗಲ್ ಮೊರೆ ಹೋಗಿದ್ದಾರೆ. ಪತಿ ಪತ್ನಿ ನಡುವೆ ಜಗಳವಾದಾಗ ಮುಂದೇನು ಮಾಡುವುದು ಎಂಬ ಪ್ರಶ್ನೆಯನ್ನು ಗೂಗಲ್ ಬಳಿಯೇ ಜನ ಕೇಳಿದ್ದು ಸದ್ಯ ಗೂಗಲ್ ಮಹಾಶಯನ ಬಲಿ ಜನ 2021ರಲ್ಲಿ ಜನ ಕೇಳಿದ ಪ್ರಶ್ನೆಯ ಸಕತ್ ಟ್ರೆಂಡಿಂಗ್ ಪ್ರಶ್ನೆಗಳಲ್ಲೊಂದು. ಕೋವಿಡ್ ಸಂದರ್ಭದಲ್ಲಿ ಅನೇಕರು ಪತಿ-ಪತ್ನಿ ಹೊಂದಾಣಿಕೆ ಇರುವುದು ಹೇಗೆ ಎಂಬ ಪ್ರಶ್ನೆ ಎತ್ತಿದ್ದಾರೆ.

ಅತ್ಯುತ್ತಮವಾದ ಡೇಟಿಂಗ್ ಅಪ್ಲಿಕೇಶನ್ ಯಾವುದು?
ಈ ಪ್ರಶ್ನೆಯೂ ಅನೇಕರು ಹುಡುಕಾಡಿದ್ದು 90ರ ದಶಕದ ಮತ್ತು 20ಕೆ ಮಕ್ಕಳು ಅನೇಕರು ಈ ವಿಚಾರವನ್ನು ಹುಡುಕಾಡಿದ್ದಾರೆ. ತಮಗೆ ಸರಿಯಾದ ಸಂಗಾತಿಗಳನ್ನು ಹುಡುಕಿಕೊಳ್ಳಲು ಸೈಟ್‌ಗಳನ್ನು ಬಳಸಲಾಗಿದ್ದು ಅನೇಕರು ತಮ್ಮ ಸಂಗಾತಿಗಳನ್ನು ಹುಡುಕಲು ಈ ಅಪ್ಲಿಕೇಶನ್‌ಗಳನ್ನು ಹುಡುಕಾಡಿದ್ದಾರೆ.

ಚುಂಬಿಸುವುದು ಹೇಗೆ?
ಅನೇಕರಿಗೆ ಈ ವಿಚಾರದ ಬಗ್ಗೆ ಗೊಂದಲವಿದ್ದು ಅನೇಕರು ಗೂಗಲ್‌ನಲ್ಲಿ ತಮ್ಮ ಸಂಗಾತಿಯನ್ನು ಚುಂಬಿಸುವುದು ಹೇಗೆ ಎಂಬುದನ್ನು ಹುಡುಕಾಡಿದ್ದಾರೆ. ತಮ್ಮ ಸಂಗಾತಿಯನ್ನು ಹೇಗೆ ಚುಂಬಿಸಬೇಕೆಂಬುದರ ಜೊತೆಗೆ ಚುಂಬಿಸಲು ಪ್ರಾರಂಭಿಸುವುದು ಹೇಗೆ? ಸಲಹೆಗಳಿಂದ ಹಿಡಿದು ತಂತ್ರಗಳವರೆಗೆ ಎಲ್ಲವನ್ನೂ ಗೂಗಲ್‌ನಲ್ಲಿ ಕೇಳಲಾಗಿದೆ.

ಅವಳು ಅಥವಾ ಅವನು ನನ್ನನ್ನು ಇಷ್ಟಪಡುತ್ತಾರೆಯೇ?
ಅವಳು ಅಥವಾ ಅವನು ನನ್ನನ್ನು ಇಷ್ಟಪಡುತ್ತಾರೆಂದು ತಿಳಿದುಕೊಳ್ಳುವುದು ಹೇಗೆ? ಅವರು ಇಷ್ಟಪಡುವಂತೆ ಮಾಡುವುದು ಹೇಗೆ ಈ ತರಹದ ಒನ್ ವೇ ಲವ್ ಸ್ಟೋರಿಯ ಪ್ರಶ್ನೆಗಳು ಗೂಗಲ್ ಸರ್ಚ್ನಲ್ಲಿ ಟಾಪ್ ಲಿಸ್ಟö್ನಲ್ಲಿದೆ.

ದೂರದ ಸಂಬಂಧಗಳು:
ಹೊಸ ಸಂಬಂಧಗಳನ್ನು ಸೃಷ್ಟಿಸಿಕೊಳ್ಳುವುದರ ಜೊತೆಗೆ ಈಗಾಗಲೇ ಇರುವ ಸಂಬಂಧಗಳನ್ನು ಉಳಿಸಿಕೊಳ್ಳುವುದರ ಬಗ್ಗೆಯೂ ಅನೇಕರು ಪ್ರಶ್ನೆ ಎತ್ತಿದ್ದಾರೆ. ಈಗಾಗಲೆ ಇರುವ ಗೆಳೆಯರು, ದೂರದಲ್ಲಿರುವ ನೆಂಟರು ಹಾಗೂ ಇತರರ ಜೊತೆ ಸಂಬಂಧಗಳನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದರ ಬಗ್ಗೆ ಇಲ್ಲಿ ಪ್ರಶ್ನೆ ಕೇಳಲಾಗಿದೆ. ಈ ರೀತಿ ಜನ ಸಂಬಂಧಗಳ ಕುರಿತು ನಿರ್ಜೀವಿ ಗೂಗಲ್ ಬಳಿ ಕೇಳಿ ಉತ್ತರ ಪಡೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top