fbpx
ಸಮಾಚಾರ

ಇಂದಿರಾ ಹೊಗಳಿ ಇಂದಿನ ಸುದ್ದಿಯಾದ ಬಿಜೆಪಿ ಶಾಸಕ.

ರಾಜಕೀಯದಲ್ಲಿ ಪಕ್ಷಗಳ ಮಧ್ಯೆ ಕೆಸರೆರಚಾಟಗಲು ಸಾಮಾನ್ಯ. ಅದರಲ್ಲೂ ಬೇರೆ ಪಕ್ಷದವರನ್ನು ಹೊಗಳುವುದು ಅಂದ್ರೆ ಅದು ಅಸಾಮಾನ್ಯ ಸಂಗತಿ. ಒಂದಿಷ್ಟು ಬೆರಳೆಣಿಕೆಯ ರಾಜಕೀಯ ನಾಯಕರು ಮಾತ್ರ ಹಾಗೆ ಬದಕಿದ್ದರು. ಅಂತಹ ಕೆಲವು ಅಪರೂಪದ ರಾಜಕಾರಣಿಗಳು ನಮ್ಮ ಕಣ್ಣ ಮುಂದಿದ್ದಾರೆ. ಈಗ ಅಂತಹದ್ದೇ ಒಂದು ವಿರೋಧ ಪಕ್ಷದ ನಾಯಕಿಯನ್ನು ಹೊಗಳಿ ಕರ್ನಾಟಕದ ಬಿಜೆಪಿ ನಾಯಕರೊಬ್ಬರು ಸುದ್ದಿಯಲ್ಲಿದ್ದಾರೆ.

ಇತ್ತೀಚೆಗೆ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಕರ್ನಾಟಕದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್ ನಾಯಕಿ ಇಂದಿರಾಗಾoಧಿ ಅವರನ್ನು ಹೊಗಳಿದ್ದಾರೆ . ಬಿಜೆಪಿಯ ಅಜಾತಶತ್ರು ಎಂದೇ ಹೆಸರಾದ ಅಟಲ್ ಬಿಹಾರಿ ವಾಜಪೇಯಿ ಅವರ ಸಂಸತ್ತು ಭಾಷಣದ ಒಂದಿಷ್ಟು ಸಾಲುಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು ವಾಜಪೇಯಿ ಅವರಿಂದಲೇ ಇಂದಿರಾ ಅವರು ದುರ್ಗಾ ಮಾತೆ ಎಂದು ಕರೆಸಿಕೊಂಡ ಶ್ರೇಷ್ಠ ನಾಯಕಿ. ರಾಜಕೀಯದ ಹೊರತಾಗಿ ನಾವವರನ್ನು ನೋಡಬೇಕು, ಒಳ್ಳೆಯ ಕೆಲಸ ಮಾಡಿದ್ದನ್ನು ಹೊಗಳುವುದೂ ಒಂದು ಕಲೆ ಎಂದು ಅವರು ಹೇಳಿದರು. ಈ ಮೂಲಕ ಯತ್ನಾಳ್ ಕಾಂಗ್ರೆಸ್ ನಾಯಕಿಯನ್ನು ಹೊಗಳಿ ಬಿಜೆಪಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೊದಲಿನಿಂದಲೂ ಯತ್ನಾಳ್ ಮೇಲೆ ಕಣ್ಣಿರಿಸಿರುವ ಹೈಕಮಾಂಡ್ ಈ ಬಿಜೆಪಿ ಶಾಸಕನ ಈ ನೇರ ಮಾತುಗಳಿಗೆ ಏನು ಹೇಳುತ್ತಾರೆ ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top