fbpx
ಸಮಾಚಾರ

ಕೊಳಚೆ ನೀರಿನಲ್ಲಿ ಓಡುತ್ತದೆ ಕಾರ್: ನಿಮ್ಮ ಹತ್ತಿರದ ಮೋರಿ ನೀರಿಗೂ ಬರಲಿದೆ ಡಿಮ್ಯಾಂಡೋ ಡಿಮ್ಯಾಂಡ್

ಜೀವನ ಪಯಣದಲ್ಲಿ ಎಲ್ಲರೂ ತಲೆ ಕೆಡಿಸಿಕೊಳ್ಳುವ ಒಂದು ವಿಚಾರವೆಂದರೆ ಅದು ಇಂಧನ ಬೆಲೆ. ಯಾಕೆಂದರೆ ಇಂದು ಎಲ್ಲಾ ಸಾಗಣೆ ವೆಚ್ಚಗಳೂ ಇದನ್ನೇ ಅವಲಂಬಿಸಿದೆ. ಇಂಧನ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ವಿಜ್ಞಾನಿಗಳು ಅನೇಕ ಪ್ರಯತ್ನ ನಡೆಸಿದ್ದಾರಾದರೂ ಅವೆಲ್ಲಾ ಅಷ್ಟೊಂದು ಅಗ್ಗವೂ ಅಲ್ಲ ಮತ್ತು ಮೈಲೇಜ್ ಸಮಸ್ಯೆಯೂ ಕಾಡುತ್ತದೆ. ಇಂತಹದ್ದೇ ಒಂದು ಪ್ರಯತ್ನದಲ್ಲಿ ಕೊಳಚೆ ನೀರಿನಿಂದ ಕಾರು ಓಡಿಸಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.ರಸ್ತೆ ಬದಿಯಲ್ಲಿ ಗುರುತ್ವಾಕರ್ಷಣೆಯ ದಿಕ್ಕಿನಲ್ಲಿ ಚಲಿಸುವ ಕೊಳಚೆ ನೀರನ್ನು ಬಳಸಿಕೊಂಡು ಅದರ ವಿರುದ್ದ ದಿಕ್ಕಿನಲ್ಲಿ ಕಾರು ಓಡಿಸುವ ವಿಜ್ಞಾನಿಗಳ ಪ್ರಯತ್ನಕ್ಕೆ ಎಲ್ಲೆಡೆಯಿಂದ ಶಹಬ್ಬಾಸ್ ಗಿರಿ ಕೇಲಿ ಬರುತ್ತಿದೆ. ಹಾಗಾದರೆ ಈ ಕಾರಿನ ಕಾರ್ಯ ವೈಖರಿ ಹೇಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಈ ಪ್ರಯತ್ನ ನಡೆದಿದ್ದು ಬಾರ್ಸಿಲೋನ್ ನಗರದಲ್ಲಿ. ಇತ್ತೀಚೆಗಷ್ಟೆ ಅಲ್ಲಿ ಕೊಳಚೆ ನೀರಿನಿಂದ ಇಂಧನ ತಯಾರಿಸಿ ಅಲ್ಲಿನ ವಿಜ್ಞಾನಿಗಳು ಬಸ್ ಓಡಿಸಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗಷ್ಟೇ ಸಾರಿಗೆ ಸಚಿವ ಗಡ್ಕರಿ ಇದರ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ್ದರು. ಕೊಳಚೆ ನೀರಿನಿಂದ ಹೈಡ್ರೋಜನ್ ಉತ್ಪಾದನೆ ಮಾಡುವ ಹಲವಾರು ಪ್ರಯೋಗಗಳು, ಪ್ರಯತ್ನಗಳು ಇಲ್ಲಿಯವರೆಗೆ ನಡೆದಿದೆ, ನಡೆಯುತ್ತಿದೆ.ಕೊಳಚೆ ನೀರಿನಿಂದ ಎಲೆಕ್ಟ್ರೋಲೈಸಿಸ್ ಮೂಲಕ ಹೈಡ್ರೋಜನ್ ಉತ್ಪತಿ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನೀರಿಗೆ ವಿದ್ಯುತ್ ಹರಿಸಿ ಬೇರ್ಪಡಿಸಲಾಗುತ್ತದೆ. ಸದ್ಯ ಪಳೆಯುಳಿಕೆ ವಸ್ತುಗಳನ್ನು ಬಳಸಿ ಹೈಡ್ರೋಜನ್ ಉತ್ಪತಿ ಮಾಡಲಾಗುತ್ತಿದ್ದು ಆ ಪ್ರಕ್ರಿಯೆ ತುಂಬಾ ದುಬಾರಿಯೂ ಹೌದು. ಒಂದು ಕೆಜಿ ಹೈಡ್ರೋಜನ್ ತಯಾರಿಸಲು ಪಳೆಯುಳಿಕೆ ಬಳಸಿದರೆ ಎರಡು ಡಾಲರ್ ವೆಚ್ಚವಾದರೆ ಕೊಳಚೆ ನೀರು ಬಳಸಿ ತಯಾರಿಸಲು ೧೬ರಿಂದ ೧೮ ಡಾಲರ್ ವೆಚ್ಚವಾಗುತ್ತದೆ. ಮುಂದಿನ ದಿನಗಲಲ್ಲಿ ಇದರ ಬೆಲೆ ತಗ್ಗಿಸುವ ನಿರೀಕ್ಷೆ ಇದೆ.

ಕೊಳಚೆ ನೀರು ಸಂಸ್ಕರಣೆ ಸುಲಭವೇ?

ಬೇರೆ ಬೇರೆ ದೇಶಗಳಲ್ಲಿ ಈಗಾಗಲೇ ಕೊಳಚೆ ನೀರನ್ನು ಸಂಸ್ಕರಿಸುವಂತಹ ಘಟಕಗಳಿವೆ. ಈ ಘಟಕಗಳು ಕೊಳಚೆ ನೀರನ್ನು ಸಂಗ್ರಹಿಸಿ ಘನ ತ್ಯಾಜ್ಯವನ್ನು ಗೊಬ್ಬರ ಮತ್ತು ಇತರ ಉತ್ಪನ್ನ ಗಳಾಗಿ ಪರಿವರ್ತಿಸುತ್ತದೆ. ಅದು ಸಂಸ್ಕರಿಸಿದ ನೀರನ್ನು ಹೊರಗೆ ಬಿಡುತ್ತದೆ. ಈ ಘಟಕಗಳಲ್ಲಿ ಎಲೆಕ್ಟ್ರೋಲೈಸರ್‌ಗಳನ್ನು ಸ್ಥಾಪನೆ ಮಾಡಿದರೆ ಅದು ಬಹಳ ಸುಲಭವಾಗಬಹುದು ಮತ್ತು ಅದು ಅಷ್ಟೊಂದು ವೆಚ್ಚದಾಯಕವೂ ಆಗಿರಲಿಕ್ಕಿಲ್ಲ. ವಿದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಕೊಳಚೆ ನೀರನ್ನು ಸಂಸ್ಕರಣೆ ಮಾಡುವ ಘಟಕಗಳು ಕಡಿಮೆ. ಕೊಳಚೆ ನೀರನ್ನು ಹಾಗೇ ತೊರೆಗಳಿಗೆ ಬಿಡುತ್ತೇವೆ. ಹೀಗಾಗಿ ಕೊಳಚೆ ನೀರಿನಿಂದ ಹೈಡ್ರೋಜನ್ ಉತ್ಪಾದನೆ ಮಾಡುವುದು ಸಾಕಷ್ಟು ಖರ್ಚು ತರುವ ಕೆಲಸವಾಗಬಹುದು ಆದರೆ ಅಸಾಧ್ಯವೇನೂ ಅಲ್ಲ ಹೈಡ್ರೋಜನ್ ಉತ್ಪಾದನೆಯ ನೆಪದಲ್ಲಾದರೂ ಕೊಳಚೆ ನೀರನ್ನು ಸಂಸ್ಕರಿಸುವುದಕ್ಕೆ ಇದೊಂದು ಉತ್ತಮ ಅವಕಾಶ.

 

ಮಿಥೇನ್ ಉತ್ಪಾದನೆಗೂ ಅವಕಾಶ.

ಮಿಥೇನ್ ಉತ್ಪಾದನೆಗೆ ಅವಕಾಶವಿದೆ ಹೈಡ್ರೋಜನ್ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಇದೇ ನೀರಿನಿಂದ ಮೀತೆನ್ ಕೂಡ ಉತ್ಪಾದನೆ ಮಾಡಬಹುದು ಮಿಥುನ್ ಅನ್ನೋ ವಾಹನಗಳಿಗೆ ಇಂಧನವಾಗಿ ಬಳಸಬಹುದಾಗಿದೆ ಹೈಡ್ರೋಜನ್ ಉತ್ಪಾದನೆ ಮಾಡುವ ಘಟಕಗಳ ನಿರ್ವಹಣೆ ಕೂಡ ಇದರಿಂದ ಕಡಿಮೆ ವೆಚ್ಚದಾಯಕವಾದ ಹೈಡ್ರೋಜನ್ ವೆಚ್ಚದ ಮೇಲೂ ಇದು ಪರಿಣಾಮ ಬೀರಬಹುದು.

ಮೈಲೇಜ್ ಹೇಗಿದೆ?

ಪ್ರತಿಯೊಬ್ರಿಗೂ ಕಾರು ತೆಗೆದುಕೊಳ್ಳುವಾಗ ಇದೊಂದು ಪ್ರಶ್ನೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ನಮ್ಮ ಕಾರು ಎಷ್ಟು ಮೈಲೇಜ್ ಹೊಂದಿರುತ್ತೆ ಅಂತ. ಯಾಕೆಂದರೆ ಮೈಲೇಜು ಕಡಿಮೆಯಾದಷ್ಟು ಜೇಬಿಗೆ ಖರ್ಚು ಜಾಸ್ತಿ. ಸದ್ಯ ಪೆಟ್ರೋಲ್ ಡೀಸೆಲ್ ಕಾರಿನಷ್ಟೇ ಮೈಲೇಜನ್ನು ಇದು ಕೂಡ ಕೊಡುತ್ತದೆ. ೧ಕಿಲೋ ಹಯ್ಡ್ರೋಜನ್ ನಿಂದ ಕಾರು ಸಾಮಾನ್ಯವಾಗಿ 95-100 ಕಿಲೋಮೀಟರ್ ವರೆಗೆ ಓಡಬಹುದು. 3-4 ಕಿಲೋ ಹೈಡ್ರೋಜನ್ ತುಂಬಬಹುದಾದ ಟ್ಯಾಂಕು ಕಾರಿನಲ್ಲಿ ಇಟ್ಟುಕೊಂಡರೆ ಸಾಕಾಗುತ್ತದೆ. ಸದ್ಯಕ್ಕೆ ಪರಿಸರಸ್ನೇಹಿ ಹೈಡ್ರೋಜನ್ ಕಾರಿಗೆ ೧ಕಿಲೋಮೀಟರ್‌ಗೆ ಹನ್ನೆರಡಕ್ಕಿಂತ ಹೆಚ್ಚು ವೆಚ್ಚ ಮಾಡಬೇಕಾದೀತು. ಎಲೆಕ್ಟ್ರಾನಿಕ್ ಕಾರುಗಳಂತೆ ಹೈಡ್ರೊಜನ್ ಇಂಧನದ ಕುರಿತು ಹೆಚ್ಚು ಕಾರು ತಯಾರಿಕೆ ಕಂಪೆನಿಗಳಲ್ಲಿ ಆಸಕ್ತಿ ಮೂಡುತ್ತಿದೆ. ಮುಂದಿನ ದಿನಗಳಲ್ಲಿ ಇದರ ಬೆಲೆ ಕಡಿಮೆಯಾಗುತ್ತದೆ ಎಂಬುದನ್ನು ನಾವು ನಿರೀಕ್ಷಿಸಬಹುದಾಗಿದೆ.

ಕೊಳಚೆ ನೀರು ಕೊರತೆಯಾಗಬಹುದೇ?

ಒಂದು ವೇಳೆ ದೇಶದಲ್ಲಿ ಕೊಳಚೆ ನೀರಿನ ಮಟ್ಟ ಕಡಿಮೆಯಾಗಿ ಹೈಡ್ರೋಜನ್ ಉತ್ಪಾದನೆಯ ಬೇಡಿಕೆ ಹೆಚ್ಚಿದರೆ ಆಗ ಕೊಳಚೆ ನೀರಿನ ಪ್ರಮಾಣ ಕಡಿಮೆಯಾಗಬಹುದು ಎನ್ನುವ ಪ್ರಶ್ನೆಗಳು ಕೂಡ ಈಗ ಬರುತ್ತಿವೆ. ಇದರ ಪೂರೈಕೆ ಹೇಗೆ ಅನ್ನುವ ಪ್ರಶ್ನೆಗಳು ಎದ್ದಿವೆ. ನಾಳೆೆ ಎಲ್ಲರೂ ಕೂಡ ಕೊಳಚೆ ನೀರಿನಿಂದ ಉತ್ಪತ್ತಿಯಾದಂಥ ಹೈಡ್ರೋಜನ್ ಕಾರನ್ನೇ ಬಳಸಿದರೆ ಕೊಳಚೆ ನೀರಿಗೆ ಕೊರತೆಯಾಗಬಹುದು. ಏಕೆಂದರೆ ಅಷ್ಟರ ಮಟ್ಟಿಗೆ ಕೊಳಚೆ ನೀರು ನಮ್ಮಲ್ಲಿ ಉತ್ಪಾದನೆಯಾಗುತ್ತಿಲ್ಲ ಮತ್ತು ಅದರ ಸಂಗ್ರಹಣೆಯು ಇಲ್ಲ. ಇಂಧನದ ಬೇಡಿಕೆ ಹೆಚ್ಚಿದಂತೆ ಕೊಳಚೆ ನೀರನ್ನು ಉತ್ಪಾದನೆ ಹೆಚ್ಚುವುದೂ ಇಲ್ಲ. ಅದನ್ನು ಹೆಚ್ಚು ಮಾಡುವ ಅವಕಾಶವೂ ಇರುವುದಿಲ್ಲ. ಹೀಗಾಗಿ ದೀರ್ಘಾವಧಿಯಲ್ಲಿ ಮತ್ತು ಮುಂದಿನ ದಿನಗಳಲ್ಲಿ ಇದು ಉಪಯುಕ್ತ ವಿಧಾನವಲ್ಲ ಅನ್ನುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ.

ಹೈಬ್ರಿಡ್ ಬಗ್ಗೆ ಆಸಕ್ತಿ

ಕಾರುಗಳು ಮತ್ತು ಬಸ್‌ಗಳನ್ನು ಹೈಬ್ರಿಡ್ ಮಾಡಿದಾಗ ಅದರಲ್ಲಿ ಹೈಡ್ರೋಜನ್ ಮಿಥೇನ್ ಮತ್ತು ಪೆಟ್ರೋಲ್ ಮೂರನ್ನೂ ಬಳಸಬಹುದಾದಂಥ ಅವಕಾಶವಿರುತ್ತದೆ. ಇಂತಹ ಎಂಜಿನ್ ಗಳ ತಯಾರಿಕೆಯ ಬಗ್ಗೆಯೂ ಕೂಡ ವಾಹನ ತಯಾರಿಕಾ ಕಂಪೆನಿಗಳು ಇತ್ತೀಚೆಗೆ ಆಸಕ್ತಿ ತೋರುತ್ತಾ ಇದೆ. ಇದರಿಂದಾಗಿ ಒಂದರ ಬೆಲೆ ಏರಿದಾಗ ಇನ್ನೊಂದನ್ನು ಇಂಧನವನ್ನು ಬಳಸಬಹುದಾಗಿದೆ. ಆಗ ಸುಲಭವಾಗಿ ಯಾವುದು ಲಭ್ಯವಿದೆಯೋ ಅದನ್ನು ಬಳಸಬಹುದಾಗಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top