fbpx
ಸಮಾಚಾರ

ಅಧಿಕಾರದ ನಶೆಯಲ್ಲಿದ್ದ ನಲಪಾಡ್‌ಗೆ ಪವರ್‌ಸ್ಟಾರ್ ಬುದ್ದಿ ಕಲಿಸಿದ್ದು ನೆನಪಿದ್ಯಾ

ದೊಡ್ಮನೆ ಹೆಸರು ಕೇಳಿ ಮತ್ತಿನಲ್ಲೂ ಇಂಗು ತಿಂದ ಮಂಗನoತಾದ ತಲಪಾಡ್ ಗ್ಯಾಂಗ್

ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ದೊಡ್ಮನೆ ಅಂದ್ರೆ ವಿಶೇಷ ಗೌರವ. ಆ ಗೌರವ ಬಂದಿರೋದು ಡಾ. ರಾಜ್‌ಕುಮಾರ್ ಅವರಿಂದ. ಅನೇಕರು ಇಂದು ಬೆಳೆಯಲು ದೊಡ್ಮನೆಯೇ ಪ್ರಮುಖ ಕಾರಣ. ಸಿನಿಮಾ ರಂಗದ ಹೊರತಾಗಿಯೂ ಅನೇಕ ಸಾಮಾಜಿಕ ಕಾರ್ಯಗಳಲ್ಲಿಯೂ ದೊಡ್ಮನೆ ಗುರುತಿಸಿಕೊಂಡಿದೆ. ಇತ್ತೀಚೆಗಷ್ಟೇ ದೊಡ್ಮನೆ ಹುಡುಗ ಕನ್ನಡಿಗರ ಪ್ರೀತಿಯ ಅಪ್ಪು ನಮ್ಮೆಲ್ಲರಿಂದ ದೂರವಾದಾಗ ದೊಡ್ಮನೆಯ ತೆರೆಯ ಹಿಂದಿನ ಸಹಾಯಗಳು ಅನೇಕರಿಗೆ ತಿಳಿದು ಬಂದಿದ್ದವು. ಸಿನಿಮಾ ರಂಗದಾಚೆಗೂ ದೊಡ್ಮನೆ ಹೀಗೆ ಮುಂದುವರೆಯಬೇಕೆoದು ಎಲ್ಲರ ಆಸೆ. ೨೦೧೮ರಲ್ಲಿ ಇದೇ ದೊಡ್ಮನೆಗೆ ಸಂಬoಧಿಸಿದ ನಡೆದ ಒಂದು ಘಟನೆ ಇವತ್ತು ಬಹಳ ಸದ್ದು ಮಾಡುತ್ತಿದೆ. ಹಾಗಾದರೆ ಆ ಘಟನೆ ಏನು? ದೊಡ್ಮನೆಯ ವ್ಯಕ್ತಿತ್ವದ ಪರಿಚಯ ಹೇಗಾಗುತ್ತೆ? ಎಲ್ಲಾ ಡೀಟೇಲ್ಸ್ಗಾಗಿ ಈ ಸ್ಟೋರಿ ನೋಡಿ.

 

೨೦೧೮ರಲ್ಲಿ ಯು.ಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಮತ್ತು ತಂಡದವರು ಬಂದಿದ್ದರು. ಇದೇ ಸಂದರ್ಭದಲ್ಲಿ ಸಿಂಗಾಪುರದಿoದ ಬಂದಿದ್ದ ಲೋಕನಾಥ್ ಅವರ ಪುತ್ರ ವಿದ್ವÀ್ವತ್ ಅವರೂ ಅದೇ ಪಬ್‌ಗೆ ಬಂದಿದ್ದರು. ಇದೇ ವೇಳೆ ಕಾರ್ ತಾಗಿದ್ದರೂ ವಿದ್ವತ್ ಕ್ಷಮೆ ಕೇಳಿಲ್ಲ ಅನ್ನುವ ವಿಚಾರಕ್ಕೆ ಹ್ಯಾರಿಸ್ ಪುತ್ರ ನಲಪಾಡ್ ಮತ್ತು ಸ್ನೇಹಿತರು ಗಲಭೆ ಎಬ್ಬಿಸಿದ್ದರು. ಇದಾದ ಬಳಿಕ ವಿದ್ವತ್ ಅವರ ಮೇಲೆ ಹಲ್ಲೆಯನ್ನೂ ನಡೆಸಲಾಗಿತ್ತು. ಇದಾದ ಬಳಿಕ ವಿದ್ವತ್ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಷ್ಟಕ್ಕೇ ಸುಮ್ಮನಾಗದ ತಲಪಾಡ್ ಗ್ಯಾಂಗ್ ಮಲ್ಯ ಆಸ್ಪತ್ರೆಗೂ ಇವರನ್ನು ಅರಸಿ ಬಂದು ಅಲ್ಲಿಯೂ ಗಲಭೆ ಎಬ್ಬಿಸಿದೆ. ಆಸ್ಪತ್ರೆಯಲ್ಲಿ ಇದನ್ನು ಪ್ರಶ್ನಿಸಿದ ವಿದ್ವತ್ ಅವರ ಅಣ್ಣ ಸಾತ್ವಿಕ್ ಜೊತೆಗೂ ಗಲಾಟೆ ನಡೆಯತ್ತೆ.

ಇದರ ಬಗ್ಗೆ ತಿಳಿದ ವಿದ್ವತ್ ಅವರ ಗೆಳೆಯ ದೊಡ್ಮನೆ ಹುಡುಗ ಗುರು ರಾಘವೇಂದ್ರ ತಮ್ಮ ಗೆಳೆಯನಿಗೆ ಸಮಸ್ಯೆಯಾಗಿದ್ದು ತಿಳಿದು ನಡುವೇ ಬರ್ತಾರೆ. ತಾವೇ ಮುಂದೆ ನಿಂತು ಸಮಸ್ಯೆ ಬಗೆಹರಿಸಲು ಮುಂದಾಗ್ತಾರೆ. ಆದರೆ ಮತ್ತಿನಲ್ಲಿದ್ದ ನಲಪಾಡ್ ಗ್ಯಾಂಗ್ ಗುರು ಮೇಲೆಯೂ ದೌಲತ್ತು ತೋರಿಸಲು ಮುಂದಾಗುತ್ತದೆ. ಅಷ್ಟು ಹೊತ್ತಿಗಾಗಲೇ ಯಾರೋ ಅಲ್ಲಿದ್ದವರು ಗುರು ದೊಡ್ಮನೆ ಹುಡ್ಗ ಅನ್ನೋ ವಿಚಾರವನ್ನು ನಲಪಾಡ್‌ಗೆ ಹೇಳಿದ್ರಂತೆ. ಕೂಡಲೆ ನಲಪಾಡ್ ಅಲ್ಲಿದ್ದವರನ್ನೆಲ್ಲ ಸುಮ್ಮನಾಗುವಂತೆ ಹೇಳಿ, ದೊಡ್ಮನೆ ಹುಡ್ಗನಿಗೆ ಏನೂ ಮಾಡಬೇಡಿ ಎಂದು ತನ್ನ ಗ್ಯಾಂಗ್‌ನವರಿಗೆ ಕೂಗಿ ಹೇಳಿದ್ರಂತೆ.

ಅಷ್ಟಕ್ಕೇ ಸುಮ್ಮನಾಗದ ನಲಪಾಡ್ ಗುರು ಅವರನ್ನು ಕರೆದು ನಿನ್ನ ಚಿಕ್ಕಪ್ಪ ಪುನೀತ್ ಬಳಿ ನನ್ನ ಬಗ್ಗೆ ಹೇಳು ಅಂದಿದ್ರAತೆ. ಇದನ್ನು ಗುರು ತಮ್ಮ ಫೇಸ್‌ಬುಕ್ ವಾಲ್ನಲ್ಲೂ ಬರೆದುಕೊಂಡಿದ್ದರು. ಮರುದಿವಸ ಅಪ್ಪು ಆಸ್ಪತ್ರೆಗೆ ಬಂದು ಇಲ್ಲಿ ಯಾರೂ ಯಾರಿಗಿಂತಲೂ ದೊಡ್ಡವರಲ್ಲ. ಮೇಲಿದ್ದವರು ದೊಡ್ಡವರು. ಮನುಷ್ಯತ್ವಕ್ಕಿಂತ ಮಿಗಿಲಾಗಿದ್ದು ಯಾವುದೂ ಇಲ್ಲ ಅಂತ ಮಾಧ್ಯಮದ ಮುಂದೆ ಹೇಳಿದ್ರಂತೆ. ಅಂದು ಪ್ರತ್ಯಕ್ಷದರ್ಶಿಗಳು ಹೇಳುವಂತೆ ತಲಪಾಡ್ ಗ್ಯಾಂಗ್ ಅಂದು ದೊಡ್ಮನೆ ಫ್ಯಾಮಿಲಿ ಬರದೇ ಹೋಗಿದ್ದರೆ ವಿದ್ವತ್ ಮತ್ತು ಸಾತ್ವಿಕ್ ಅವರಿಗೆ ಏನಾದರೂ ಮಾಡಿಯೇ ತೀರುತ್ತಿತ್ತು ಎನ್ನುತ್ತಾರೆ. ಅಷ್ಟೇ ಅಲ್ಲದೆ ನಶೆಯಲ್ಲಿದ್ದ ನಲಪಾಡ್ ಗ್ಯಾಂಗ್ ದೊಡ್ಮನೆ ಹೆಸರು ಕೇಳಿಯೇ ಅಂದು ಬೆಚ್ಚಿ ಬಿದ್ದಿತ್ತು. ಅಷ್ಟೇ ಅಲ್ಲದೆ ಎಷ್ಟೇ ಕಷ್ಟ ಬಂದರೂ ನಂಬಿದವರನ್ನು ಕೈ ಬಿಡಲಾರೆವು ಎಂಬುದನ್ನು ದೊಡ್ಮನೆ ಫ್ಯಾಮಿಲಿ ನಿರೂಪಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top