fbpx
ಕ್ರಿಕೆಟ್

ತನ್ನ ಕಾಲಿಗೆ ತಾನೇ ಕೊಡಲಿಯೇಟು ಹಾಕಿಕೊಂಡ್ರಾ ಕೋಹ್ಲಿ?

ಇತ್ತೀಚೆಗಷ್ಟೇ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಕ್ರಿಕೆಟ್ ದಿಗ್ಗಜರ ಮೇಲೆ ನೇರವಾದ ಆರೋಪ ಮಾಡಿ ವಿವಾದದ ಸುಳಿಯಲ್ಲಿ ಸಿಕ್ಕಿ ಬಿದ್ದಿದ್ದರು. ಇದಕ್ಕೆ ಪ್ರತಿಕ್ರಿಯಿಸದ ಬಿಸಿಸಿಐ ಈ ವಿಚಾರವನ್ನು ಸೂಕ್ಷö್ಮವಾಗಿ ಹ್ಯಾಂಡಲ್ ಮಾಡಲು ನಿರ್ಧರಿಸಿದೆ. ಹಾಗಾಗಿ ಏನು ಪ್ರತಿಕ್ರಿಯಿಸದೆ ತಜ್ಞರ ಮೊರೆ ಹೋಗಿದೆ. ಹಾಗಾದರೆ ದಕ್ಷಿಣ ಆಫ್ರಿಕಾದಿಂದ ಮರಳಿದ ತಕ್ಷಣ ಕೋಹ್ಲಿಗೆ ಗ್ರಹಚಾರ ಕಾದಿದ್ಯಾ ಎಂಬಿತ್ಯಾದಿ ಊಹಾ ಪೋಹಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿದೆ. ಹಾಗಾದರೆ ಬಿಸಿಸಿಐ ತಜ್ಞರ ಮೊರೆ ಹೋಗಿದ್ಯಾಕೆ ಅನ್ನುವ ಪ್ರಶ್ನೆ ನಮಗೆ ಕಾಡುತ್ತದೆ. ವಿರಾಟ್ ಓರ್ವ ಸೂಪರ್‌ಸ್ಟಾರ್ ಪ್ಲೇಯರ್. ಹಾಗಾಗಿ ಅವರ ವಿರುದ್ದ ಏನಾದರೂ ಹೇಳಿಕೆಗಳನ್ನು ಕೊಟ್ಟರೆ ಅದು ವಿಕೋಪಕ್ಕೆ ಹೋಗುವ ಸಾಧ್ಯತೆಗಳಿವೆ. ಹಾಗಾಗಿ ಸದ್ಯ ತಜ್ಞರ ಸಲಹೆಯ ನಂತರ ಮುಂದುವರೆಯುವ ಬಯಕೆ ಬಿಸಿಸಿಐದು.

ಇನ್ನು ಕೋಹ್ಲಿ ಹೇಳಿಕೆಯಿಂದಾಗಿ ಬಿಸಿಸಿಐ ಅಧ್ಯಕ್ಷರ ಸ್ಥಾನಕ್ಕೆ ಧಕ್ಕೆ ಆಯ್ತಾ ಅನ್ನುವ ಪ್ರಶ್ನೆಗಳು ಏಳುತ್ತಿವೆ. ಅಧ್ಯಕ್ಷರು ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರಾ? ಅಥವಾ ಸಮರ್ಥಿಸಿಕೊಳ್ಳಲು ಹೊರಟಿದ್ದಾರಾ? ಎನ್ನುವ ಪ್ರಶ್ನೆಯೂ ನಮಗೆ ಕಾಡುತ್ತದೆ. ಬಿಸಿಸಿಐ ಕಾಂಟ್ರೆಕ್ಟೆಡ್ ಪ್ಲೇಯರ್ ಆಗಿರುವ ಕೋಹ್ಲಿ ನಿಯಮ ಮರೆತರಾ ಅನ್ನುವ ಪ್ರಶ್ನೆಯೂ ಇಲ್ಲಿ ಏಳುತ್ತದೆ. ಹೀಗಿರುವಾಗ ವಿವದಾತ್ಮಕ ಮತ್ತು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಾರದು ಅನ್ನುವ ನಿಯಮವಿದೆ. ಈ ನಿಯಮ ಮುರಿದಿರುವ ಕೋಹ್ಲಿ ವಿರುದ್ದ ಬಿಸಿಸಿಐ ದಿಗ್ಗಜರು ಗರಂ ಆಗಿದ್ದಾರೆ. ಈ ಹಿಂದೆ ಯಾವ ಕಪ್ತಾನನೂ ಈ ರೀತಿ ಹೇಳಿಕೆಗಳನ್ನು ನೀಡಿರಲಿಲ್ಲ.

ವಿರಾಟ್ ಸೌತ್ ಆಫ್ರಿಕಾ ಫ್ಲೆöÊಟ್ ಏರುತ್ತಿದ್ದಂತೆ ಬಿಸಿಸಿಐ ದಿಗ್ಗಜರು ಮೀಟಿಂಗ್ ನಡೆಸಿದ್ದು ಝೂಮ್ ಕಾಲ್ ಮೂಲಕ ನಡೆದ ಮೀಟಿಂಗ್‌ನಲ್ಲಿ ಅನೇಕ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ ಎನ್ನಲಾಗುತ್ತಿದೆ. ಇನ್ನು ಇದರಿಂದಾಗಿ ದಕ್ಷಿಣಾಫ್ರಿಕಾ ಸರಣಿಯ ಮೇಲೆ ಯಾವುದೇ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಲು ಬಿಸಿಸಿಐ ನಿರ್ಧರಿಸಿದೆ. ಅದಕ್ಕಾಗಿಯೇ ಬಿಸಿಸಿಐ ಈ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಿದೆ. ಇನ್ನು ಕೋಹ್ಲಿ ಸಾಕಷ್ಟು ಬಾರಿ ಮಾಧ್ಯಮಗಳಿಗೆ ಸವಾಲೆಸಿದಿದ್ದು ಅಲ್ಲಿ ಯಶಸ್ವಿಯಾದಂತೆ ಬಿಸಿಸಿಐ ಮುಂದೆಯೂ ಗೆಲ್ಲುತ್ತಾರಾ ಅಥವಾ ಬಿಸಿಸಿಐ ಕಡೆಯಿಂದ ಕೋಹ್ಲಿ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆಯಾ? ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top