fbpx
ಸಮಾಚಾರ

ಧೋನಿಗೆ ಆದ ಗತಿ ರಾಹುಲ್‌ಗೂ ಆಗತ್ತಾ? ಪಂಜಾಬ್ ಕ್ಯಾಪ್ಟೆನ್ಸಿ ಬಿಟ್ಟು ತಪ್ಪು ಮಾಡಿದ್ರಾ ಕನ್ನಡಿಗ

ದುಬಾರಿ ಮಾದರಿಯ ಕ್ರಿಕೆಟ್ ಐಪಿಎಲ್ ದಿನೇ ದಿನೇ ಹೊಸ ಹೊಸ ಸುದ್ದಿಗಳಿಂದ ಅಭಿಮಾನಿಗಳ ಹೃದಯದಲ್ಲಿ ಕುತೂಹಲ ಕೆರಳಿಸುತ್ತಿದೆ. ಹರಾಜು ಪ್ರಕ್ರಿಯೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು ಎಲ್ಲರ ದೃಷ್ಟಿ ನೆಟ್ಟಿರುವುದು ಕನ್ನಡಿಗ ಕೆ.ಎಲ್ ರಾಹುಲ್ ಮೇಲೆ. ಪಂಜಾಬ್ ತಂಡ ಉಳಿಸಿಕೊಳ್ಳುತ್ತೇವೆ ಎಂದ ಮೇಲೂ ಹರಾಜಾಗಲು ಒಪ್ಪಿದ್ದ ರಾಹುಲ್ ಇದೀಗ ಲಖನೌ ಫ್ರಾಂಚೈಸಿ ಸೇರೋದು ಬಹುತೇಕ ಖಚಿತವಾಗಿದೆ. ರಾಹುಲ್ ಲಕ್ನೋ ತಂಡದ ನಾಯಕನಾಗಿ ಆಡೋದು ಅಫೀಶಿಯಲ್ ಆಗಿ ಇನ್ನಷ್ಟೇ ಹೊರಬೀಳಬೇಕಾಗಿದ್ದು ಅದಷ್ಟೇ ಬಾಕಿ ಇದೆ. ಆದರೆ ಪಂಜಾಬ್ ತಂಡದಲ್ಲಿ ಇದ್ದಂತೆ ಸ್ವತಂತ್ರವಾಗಿ ಇರುವುದಕ್ಕೆ ಸಾಧ್ಯವಿಲ್ಲ. ಕಾರಣ ಲಕ್ನೋ ತಂಡದ ಫ್ರಾಂಚೈಸಿ ಮಾಲಿಕ ಸಂಜೀವ್ ಗೋಯೆಂಕಾ.
ಅಂದು ಧೋನಿಯನ್ನೇ ನಾಯಕ ಸ್ಥಾನದಿಂದ ಇಳಿಸಿದ್ರು.

ಪುಣೆ ಸೂಪರ್ ಜೈಂಟ್ಸ್ ತಂಡದ ಮಾಲಿಕರಾಗಿದ್ದ ಗೋಯೆಂಕಾ ಅಲ್ಲಿ ಕೆಲ ಪಂದ್ಯಗಳನ್ನು ಧೋನಿ ಸೋತಿದ್ದಕ್ಕಾಗಿ ಮೋಸ್ಟ್ ಸಕ್ಸಸ್‌ಫುಲ್ ಕ್ಯಾಪ್ಟನ್ ಹಣೆ ಪಟ್ಟಿ ಹೊಂದಿದ್ದ ಅವರನ್ನೇ ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದ್ದರು. 2016ರಲ್ಲಿ ಧೋನಿ ಇದರಿಂದಾಗಿ ಸ್ಟೀವ್ ಸ್ಮಿತ್‌ಗೆ ನಾಯಕತ್ವ ಬಿಟ್ಟುಕೊಡಬೇಕಾಯಿತು. ಇನ್ನು ಷರತ್ತುಗಳನ್ನು ವಿಧಿಸುವುದರಲ್ಲಿಯೂ ಗೋಯೆಂಕಾ ನಂಬರ್ ಒನ್ ಆಗಿದ್ದು ತಂಡದ ಎಲ್ಲಾ ರೀತಿಯ ಸೋಲುಗಳಿಗೂ ನಾಯಕನನ್ನೇ ಹೊಣೆಯಾಗಿಸುತ್ತಾರೆ. ಇದರಿಂದಾಗಿ ರಾಹುಲ್ ಎಚ್ಚರದಿಂದ ಇರುವ ಅಗತ್ಯವಿದೆ. ರಾಹುಲ್ ಎರಡು ವರ್ಷಗಳ ಕಾಲ ಪಂಜಾಬ್ ತಂಡದ ಪರವಾಗಿ ಆಡಿದ್ದು ಅಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಅವರಿಗೆ ಶ್ರೀರಕ್ಷೆಯಾಗಿದ್ದರು. ಲಕ್ನೋ ತಂಡದ ಕೋಚ್ ಆಗಿ ಆಂಡಿ ಫ್ಲವರ್ ಹಾಗೂ ಮೆಂಟರ್ ಆಗಿ ಗೌತಮ್ ಗಂಭೀರ್ ಅವರು ಈಗಾಗಲೇ ಆಯ್ಕೆಯಾಗಿದ್ದು ರಾಹುಲ್ ಜವಾಬ್ದಾರಿಯಿಂದ ಹೆಜ್ಜೆ ಇಡುವ ಅಗತ್ಯವಿದೆ. 4 ಐಪಿಎಲ್ ಟ್ರೋಫಿ, ೩ ಐಸಿಸ್ ಟ್ರೋಫಿ ಗೆಲ್ಲಿಸಿದ್ದ ಧೋನಿಯಂತಹ ದಿಗ್ಗಜರಿಗೇ ಕೊಕ್ ಕೊಟ್ಟ ಗೋಯೆಂಕಾ ರಾಹುಲ್ ಬಗ್ಗೆ ಮೃಧು ಧೋರಣೆ ತಾಳ್ತಾರಾ? ಮನೆಯಂತಿದ್ದ ಪಂಜಾಬ್ ಬಿಟ್ಟು ಬಂದು ರಾಹುಲ್ ತಪ್ಪು ಮಾಡಿದ್ರಾ ಇವೆಲ್ಲಾ ಕ್ರಿಕೆಟ್ ಜಗತ್ತಿನಲ್ಲಿ ಸದ್ಯ ಏಳುತ್ತಿರುವ ಪ್ರಶ್ನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top