fbpx
ಸಮಾಚಾರ

“ನಮ್ಮ ಬಾವುಟ ಸುಟ್ಟರೆ ತಾಯಿಯನ್ನೇ ಸುಟ್ಟ ಹಾಗೆ,ಕನ್ನಡ ಭಾಷೆಗಾಗಿ ನಾನು ಪ್ರಾಣ ಕೊಡಲೂ ಸಿದ್ಧ” ಶಿವಣ್ಣ ಗುಡುಗು

ಭಾಷೆಗಾಗಿ ನಾನು ಪ್ರಾಣ ಕೊಡೋದಕ್ಕೂ ಸಿದ್ಧ. ಭಾಷೆಯನ್ನು ಅಗೌರವಿಸುವಂತಹ ಕೆಲಸ ಮಾಡಬೇಡಿ ಎಂದು ಚಿತ್ರನಟ ಶಿವರಾಜ್‌ ಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ‘ಬಡವ ರಾಸ್ಕಲ್‌’ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ ಅನೇಕ ತಾರೆಯರ ಭಾಷಾಭಿಮಾನಕ್ಕೆ ಸಾಕ್ಷಿಯಾಯಿತು. ಈ ವೇಳೆ ಮಾತನಾಡಿದ ಶಿವಣ್ಣ ಆಕ್ರೋಶವಾಗಿಯೇ ಕನ್ನಡದ ಪರವಾಗಿ ಮಾತನಾಡಿದರು.

‘ಕನ್ನಡವನ್ನು ಇಷ್ಟು ಕೀಳಾಗಿ ನೋಡೋದಾ? ಕನ್ನಡ ಬಾವುಟ ಸುಟ್ಟರೆ ಕನ್ನಡದ ತಾಯಿಯನ್ನೇ ಸುಟ್ಟಂತೆ ಅಲ್ವಾ? ಅಂಥವರನ್ನು ಬಿಟ್ಟು ಬಿಡುತ್ತೇವಾ? ತಾಯಿಗೆ ಏನಾದ್ರೂ ತೊಂದರೆ ಆದರೆ ಸುಮ್ಮನೆ ಇರುತ್ತೇವಾ? ಭಾರತೀಯರಾದ ನಮಗೆಲ್ಲರಿಗೂ ನಮ್ಮ-ನಮ್ಮ ಭಾಷೆ ಮುಖ್ಯ. ಆಯಾ ರಾಜ್ಯದ ಭಾಷೆ ಮತ್ತು ಸಂಸ್ಕೃತಿಗೆ ಮರ್ಯಾದೆ ಕೊಡಬೇಕು. ಬೇರೆಯವರ ಬಾವುಟವನ್ನು ಸುಡುವಂತಹ ಕೃತ್ಯ ಯಾರಿಂದಲೂ ಆಗ ಬಾರದು’ ಎಂದು ಶಿವಣ್ಣ ಹೇಳಿದರು.

‘ಸುಮ್ಮನಿದ್ದೇವೆ ಎಂದ್ರೆ ಶಕ್ರಿ ಇಲ್ಲ ಅಂತ ಅಲ್ಲ..’
‘ನಮ್ಮ ಮೇಲೆ ದಬ್ಬಾಳಿಕೆ ಮಾಡಬೇಡಿ. ನಾವು ಸುಮ್ಮನಿದ್ದೇವೆ ಎಂದರೆ ನಮಗೆ ಶಕ್ತಿ ಇಲ್ಲ ಅಂತ ಅಂದುಕೊಳ್ಳಬಾರದು. ಮನುಷ್ಯನಿಗೆ ಕೋಪ ಬಂದರೆ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತದೆ. ಸರ್ಕಾರದವರು ಇದಕ್ಕಾಗಿ ಫೈಟ್​ ಮಾಡಬೇಕು. ವೋಟಿಂಗ್​ ರಾಜಕಾರಣಕ್ಕಾಗಿ ಅವರು ಸುಮ್ಮನಾಗಬಾರದು. ‘ನಮ್ಮ ಭಾಷೆಗೆ ನಾನು ಪ್ರಾಣ ಕೊಡೋಕೂ ಸಿದ್ಧನಿದ್ದೇನೆ. ನನಗೆ 59 ವರ್ಷ ಆಯ್ತು. 60 ವರ್ಷ ನನ್ನನ್ನು ಬೆಳೆಸಿದ್ದೀರಿ. ಈಗ ಭಾಷೆಗಾಗಿಯೇ ಪ್ರಾಣ ಹೋಗಬೇಕು ಎಂದರೆ ಹೋಗಲಿ ಬಿಡಿ ಎಂದು ಖಡಕ್​ ಆಗಿ ಹೇಳಿಕೆ ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ನೆರೆದಿದ್ದ ಜನ ಶಿವಣ್ಣ ಮಾತು ಕೇಳಿ ಬಹುಪರಾಕ್​ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top