fbpx
ಸಮಾಚಾರ

10 ದಿನ ನಗುವಂತಿಲ್ಲ, ಕುಡಿಯುವಂತಿಲ್ಲ! ಉತ್ತರ ಕೊರಿಯಾದಲ್ಲಿ ನಿಯಮ ಜಾರಿ

ಉತ್ತರ ಕೊರಿಯಾದ ಮಾಜಿ ನಾಯಕ ಕಿಮ್​ ಜಾಂಗ್ Il ಅವರ 10ನೇ ವರ್ಷದ ಮರಣ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ​ 10 ದಿನಗಳ ಕಾಲ ನಗುವುದನ್ನು ಕೊರಿಯಾದಲ್ಲಿ ಬ್ಯಾನ್​ ಮಾಡಲಾಗಿದೆ. ಶೋಕಾಚರಣೆಯ ದಿನಗಳಲ್ಲಿ ಕುಟುಂಬದ ಯಾರಾದರೂ ಸದಸ್ಯರು ಮೃತಪಟ್ಟರೆ ಜೋರಾಗಿ ಅಳುವಂತೆಯೂ ಇಲ್ಲ. ಶೋಕಾಚರಣೆ ದಿನಗಳು ಕಳೆದ ಬಳಿಕವಷ್ಟೇ ಮೃತದೇಹವನ್ನು ಹೊರತೆಗೆಯಲು ಅನುಮತಿ ಇದೆ. ಹುಟ್ಟುಹಬ್ಬ ಆಚರಿಸುವಂತೆಯೂ ಇಲ್ಲ.

ಶೋಕಾಚರಣೆ ಮುಗಿದ ಬಳಿಕವೇ ಅಂತಿಮ ವಿಧಿವಿಧಾನಗಳನ್ನು ಮಾಡಬೇಕಿದೆ. ಒಂದು ವೇಳೆ ಇದನ್ನು ಉಲ್ಲಂಘಿಸಿದವರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾ ಸರ್ಕಾರ ಸೂಚಿಸಿದೆ. ಕಿಮ್ ಜಾಂಗ್ ಇಲ್ 2011ರ ಡಿಸೆಂಬರ್ 17ರಂದು ತಮ್ಮ 69ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಅವಧಿಯಲ್ಲಿ ಯಾರಾದರೂ ಜನ್ಮದಿನ ಆಚರಿಸಿಕೊಳ್ಳುವುದು ಇರಲಿ, ಯಾವುದೇ ವ್ಯಕ್ತಿ ಮೃತಪಟ್ಟರೆ ಅವರ ಅಂತ್ಯಸಂಸ್ಕಾರ ನಡೆಸಲೂ ಅನುಮತಿ ನೀಡುವುದಿಲ್ಲ. ಅತಿ ಹತ್ತಿರದ ಸಂಬಂಧಿಕರು ಮೃತಪಟ್ಟಾಗ ಜೋರಾಗಿ ಅಳುವಂತೆ ಕೂಡ ಇಲ್ಲ ಎಂದು ತಿಳಿಸಿದ್ದಾರೆ. ತಂದೆಯ ನಿಧನದ ಬಳಿಕ ಪ್ರತಿ ವರ್ಷವೂ ಕಿಮ್ ಜಾಂಗ್ ಉನ್ ಅವರ ಸ್ಮಾರಕಕ್ಕೆ ವಂದನೆ ಸಲ್ಲಿಸುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top