fbpx
ಸಮಾಚಾರ

ಡಿಸೆಂಬರ್ 22: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಡಿಸೆಂಬರ್ 22, 2021 ಬುಧವಾರ
ವರ್ಷ : 1943 ಪ್ಲಾವ
ತಿಂಗಳು : ಮಾರ್ದಶಿರ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ತೃತೀಯಾ 4:51 pm
ನಕ್ಷತ್ರ : ಪುಷ್ಯ 12:45 am
ಯೋಗ : ಇಂದ್ರ 12:03 pm
ಕರಣ : ವಿಷ್ಟಿ 4:51 pm ಬಾವ 5:42 am

Time to be Avoided
ರಾಹುಕಾಲ : 12:18 pm – 1:42 pm
ಯಮಗಂಡ : 8:05 am – 9:29 am
ದುರ್ಮುಹುರ್ತ : 11:55 am – 12:40 pm
ವಿಷ : 7:11 am – 8:57 am
ಗುಳಿಕ : 10:54 am – 12:18 pm

Good Time to be Used
ಅಮೃತಕಾಲ : 5:43 pm – 7:29 pm

Other Data
ಸೂರ್ಯೋದಯ : 6:37 am
ಸುರ್ಯಾಸ್ತಮಯ : 5:59 pm
ರವಿರಾಶಿ : ಧನುಸ್
ಚಂದ್ರರಾಶಿ : ಕರ್ಕಾಟಕ

 

 

 

ಅತಿಯಾದ ಆತ್ಮವಿಶ್ವಾಸದಿಂದ ಸಾಗಿದಲ್ಲಿ ಅಧಃಪತನದ ಜೊತೆಗೆ ಅವಮಾನ ಮತ್ತು ನಗೆಪಾಟಲು ಅನುಭವಿಸಬೇಕಾಗುವುದು. ನೆರೆಹೊರೆಯವರು ಸಹಾಯ ಕೋರಿ ನಿಮ್ಮಲ್ಲಿಗೆ ಬರುವರು. ಸಾಧ್ಯವಾದಲ್ಲಿ ಅವರಿಗೆ ಸ್ಪಂದಿಸಿರಿ

 

ಸ್ವಂತವಾಗಿ ಆಲೋಚಿಸುವುದನ್ನು ಬಿಟ್ಟು ಮತ್ತೊಬ್ಬರ ಸಲಹೆ, ಸೂಚನೆ ಅವಲಂಬಿಸಿ ಕೆಲಸ ಮಾಡುವ ಸ್ವಭಾವವನ್ನು ಮೊದಲು ಬಿಡಿ. ಚಾಡಿ ಮಾತುಗಳನ್ನು ನಂಬಿ ಏನಾದರೂ ನಿರ್ಣಯ ತೆಗೆದುಕೊಂಡಲ್ಲಿ ಅನಾಹುತ ಆಗುವುದು. ಆಡುವ ಮಾತಿನಲ್ಲಿ ನಡೆ, ನುಡಿಗಳಲ್ಲಿ ಬದಲಾವಣೆ ತಂದುಕೊಳ್ಳಿರಿ.

 

ನೆರೆ ಹೊರೆಯವರೊಂದಿಗೆ ಹೊಂದಿಕೊಂಡು ಹೋಗುವುದು ಒಳ್ಳೆಯದು. ಸ್ನೇಹಿತರು ಸಹಾಯ ಕೋರಿ ಬರಲಿದ್ದು ಸಾಧ್ಯವಾದಷ್ಟು ಅವರಿಗೆ ಉಪಕರಿಸಿರಿ. ಅನವಶ್ಯಕ ಸಾಲಗಳಿಗೆ ಎಡೆಮಾಡಿಕೊಡಬೇಡಿ.

 

ಮನೆಯ ವಾತಾವರಣದಲ್ಲಿ ನಡೆಯುತ್ತಿರುವ ವಿಚಾರಗಳು ನಿಮ್ಮನ್ನು ಘಾಸಿ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ವೃಥಾ ಚಿಂತನೆ ಮಾಡುವುದರಿಂದ ಉಪಯೋಗವಿಲ್ಲ. ನಿಮ್ಮ ಹದಗೆಡುತ್ತಿರುವ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

 

 

ಶ್ರಮ ಜೀವಿಗಳಾದ ಹಾಗೂ ನಿಷ್ಠಾವಂತರಾದ ನಿಮಗೆ ಇಂದು ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುವುದು.ಹಿರಿಯರ ಅನುಭವದ ಮಾತು ಸಲಹೆಗಳು ನಿಮಗೆ ಉಪಯೋಗಕ್ಕೆ ಬರುವುದು.

 

 

ನಿಮ್ಮ ಪ್ರತಿಭೆ, ಶ್ರಮ ಮೊದಲಾದವುಗಳಿಂದ ಯಶಸ್ಸಿನ ಮೆಟ್ಟಿಲನ್ನು ಏರುತ್ತಿರುವ ನಿಮಗೆ ಅವರಿವರಿಂದ ಕುಹಕದ ಮಾತುಗಳು ಕೇಳಿ ಬರುವ ಸಾಧ್ಯತೆ ಇದೆ. ಬುದ್ಧಿವಂತರಾದ ನೀವು ಅದಕ್ಕೆ ಪ್ರಾಮುಖ್ಯತೆ ಕೊಡದೆ ನಿಮ್ಮ ಪಾಡಿಗೆ ನೀವಿರುವುದು ಉತ್ತಮ.

 

 

ಜೀವನದಲ್ಲಿ ಏನನ್ನಾದರೂ ಸಾಧಿಸಿಯೇ ತೀರಬೇಕೆಂಬ ನಿಮ್ಮ ಹಂಬಲಕ್ಕೆ ಬೆಂಬಲ ಸಿಗಲಿದೆ. ಇದರಿಂದ ನಿಮ್ಮ ಆತ್ಮಸ್ಥೈರ್ಯ ಹೆಚ್ಚಲಿದೆ. ಪ್ರತಿಯೊಂದು ಕೆಲಸದಲ್ಲೂ ಮುನ್ನುಗ್ಗುವಿರಿ. ನೀವಾಡಲಿರುವ ಮಾತುಗಳಿಗೆ ಬೆಲೆ ಬರುವುದು. ಮಾತಿನ ಮೋಡಿಯಿಂದ ಎಲ್ಲರನ್ನು ಕಟ್ಟಿ ಹಾಕುವ ಕಲೆ ಕರಗತವಾಗಲಿದೆ

 

 

ಯಾರು ಎಷ್ಟೇ ಹೇಳಿದರೂ ಅವರ ಮಾತಿಗೆ ಕಿವಿಗೊಡದ ನೀವು ಕೆಲವು ವಿಷಯಗಳನ್ನು ಕಾಲ ಮಿಂಚಿದ ಮೇಲೆ ಅರಿಯುವಿರಿ. ಮತ್ತೊಬ್ಬರೊಂದಿಗೆ ಮಾಡುವ ಕುತರ್ಕ ಮತ್ತು ವಿತಂಡ ವಾದಗಳಿಂದ ಅಪಖ್ಯಾತಿ ಪಡೆಯುವಿರಿ.

ಅರ್ಥವಿಲ್ಲದ ಅಥವಾ ವ್ಯರ್ಥವಾದ ತಿರುಗಾಟದಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ,ಮನೆಯ ಹಿರಿಯರ ಆರೋಗ್ಯದ ಕಡೆ ಗಮನವಿರಲಿ.

 

 

ದೈವಾನುಗ್ರಹ ವಿಶೇಷವಾಗಿ ನಿಮ್ಮ ಮೇಲಿದ್ದು ಅಂದುಕೊಂಡ ಕೆಲಸಗಳೆಲ್ಲವೂ ನಿರಾತಂಕವಾಗಿ ಪೂರ್ಣಗೊಳ್ಳಲಿದೆ. ಇಲ್ಲಿ ನಿಮ್ಮ ಜಾಣ್ಮೆ, ಶ್ರಮ ಮತ್ತು ಸಮಯ ಪ್ರಜ್ಞೆ ಕಾರಣವಾಗುವುದು. ಬಂಧುಗಳೊಂದಿಗಿದ್ದ ಭಿನ್ನಾಭಿಪ್ರಾಯ ದೂರವಾಗಿ ಬಾಂಧವ್ಯ ವೃದ್ಧಿಸಲಿದೆ.

 

ಇಂದು ಅನೇಕ ಗೊಂದಲಗಳು ಮೂಡಿ ಬರಲಿದ್ದು, ಅದನ್ನು ಶಾಂತ ಚಿತ್ತದಿಂದ ನಿಭಾಯಿಸಿರಿ. ಬಾಲ್ಯ ಸ್ನೇಹಿತರ ಭೇಟಿಯು ಮನಸ್ಸಿಗೆ ಮುದ ನೀಡುವುದು. ಆಂಜನೇಯ ದೇವಾಲಯ ದರ್ಶನ ಮಾಡಿರಿ.

 

ಮತ್ತೊಬ್ಬರ ನೆರವನ್ನು ನೆಚ್ಚಿಕೊಂಡು ಹೆಚ್ಚಿನ ಜವಾಬ್ದಾರಿ ಹೊರುವ ಹುಚ್ಚು ಸಾಹಸಕ್ಕೆ ಕೈ ಹಾಕಬೇಡಿ. ಇದರಿಂದ ಧನ, ಮಾನ ಅಥವಾ ಎರಡಕ್ಕೂ ಹಾನಿಯಾಗುವ ಸಂಭವವಿರುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top