fbpx
ಸಮಾಚಾರ

ಪುನೀತ್ ಹೆಸರಿಟ್ಟಿದ್ದ ಬಡಾವಣೆ ನಾಮಫಲಕ ರಾತ್ರೋರಾತ್ರಿ ಧ್ವಂಸ: ಕಾರಣವೇನು?

ದಿವಂಗತ ನಟ ಪುನೀತ್​ ರಾಜ್ ​ಕುಮಾರ್​ ಅವರ ನೆನಪಿಗಾಗಿ ಅವರ ಹೆಸರಿಟ್ಟಿದ್ದ ಬಡಾವಣೆ ನಾಮಫಲಕವನ್ನು ಜೆಸಿಬಿಯಿಂದ ರಾತ್ರೋ ರಾತ್ರಿ ಧ್ವಂಸ ಮಾಡಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ದೇಶಿಹಳ್ಳಿ ಗ್ರಾಮದಲ್ಲಿ ನಡೆದಿದೆ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಮಾಜಿ ಪುರಸಭಾ ಸದಸ್ಯ ಮುರಗಯ್ಯ ಎಂಬುವರು ಬಡಾವಣೆಯನ್ನು ನಿರ್ಮಾಣ ಮಾಡಿದ್ದರು. ಆದರೆ ಅದಕ್ಕೆ ಈವರೆಗೂ ಯಾವುದೇ ಹೆಸರು ಇಟ್ಟಿರಲಿಲ್ಲ. ಪುನೀತ್ ನಿಧನದ ಬಳಿಕ ಬಡಾವಣೆ ನಿವಾಸಿಗಳೆಲ್ಲಾ ಒಮ್ಮತದ ತೀರ್ಮಾನಕ್ಕೆ ಬಂದು ಬಡಾವಣೆಗೆ ಪುನೀತ್ ರಾಜ್ ಕುಮಾರ್ ಅವರ ಹೆಸರು ಇಡಲು ಅನುಮತಿ ಕೋರಿದ್ದರು. ನಂತರ ಪಂಚಾಯತಿ ಅಧಿಕಾರಿಗಳ ಮೌಖಿಕ ಒಪ್ಪಿಗೆ ಹಾಗೂ ಆಶ್ವಾಸನೆ ಮೇರೆಗೆ ನಾಮಫಲಕ ಅಳವಡಿಸಿದ್ದರು.

ಆದರೆ ಭಾನುವಾರ ರಾತ್ರಿ ಬಡಾವಣೆ ನಿರ್ಮಾಣ ಮಾಡಿದ್ದ ಮಾಜಿ ಪುರಸಭೆ ಸದಸ್ಯ ಮುರಗಯ್ಯ ಜೆಸಿಬಿ ಕಳುಹಿಸಿ ಬೋರ್ಡ್ ಧ್ವಂಸ ಮಾಡಿ ತೆರವು ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯ ತಿಳಿದ ಬಡಾವಣೆ ನಿವಾಸಿಗಳು ರಾತ್ರಿಯೇ ನಾಮಫಲಕವನ್ನು ತೆರೆವು ಮಾಡದಂತೆ ಪ್ರತಿರೋಧ ಒಡ್ಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಬಂಗಾರಪೇಟೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಜೆಸಿಬಿ ಹಾಗೂ ಚಾಲಕನನ್ನು ವಶಕ್ಕೆ ಪಡೆದು, ರಾತ್ರೋರಾತ್ರಿ ತೆರವು ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಬಡಾವಣೆ ನಿವಾಸಿಗಳು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲು ಮಾಡಿ, ವಿಚಾರಣೆ ನಡೆಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top