fbpx
ಸಮಾಚಾರ

ಒಮ್ಮೆ ಮಾಡಿ ಸವಿದು ನೋಡಿ ಸೌತೆಕಾಯಿ ರೊಟ್ಟಿ

ಬಾಯಲ್ಲಿ ನೀರೂರಿಸುತ್ತೆ ಈ ಸೌತೆಕಾಯಿ ರೊಟ್ಟಿ ಚಳಿ ಇರುವುದರಿಂದ ಬಿಸಿಯಾ ಟೀ, ಕಾಫಿ ಜೊತೆಗೆ ಸೌತೆಕಾಯಿ ರೊಟ್ಟಿ ಮಾಡಿದರೆ ತುಂಬಾನೇ ರುಚಿಯಾಗಿರುತ್ತದೆ. ಸೌತೆಕಾಯಿ ರೊಟ್ಟಿ ಮಾಡುವ ಸರಳ ವಿಧಾನ ಈ ಕೆಳಗಿನಂತಿದೆ.

ಬೇಕಾಗುವ ಸಾಮಗ್ರಿಗಳು:
* ಸೌತೆಕಾಯಿ-2
* ತೆಂಗಿನಕಾಯಿ ತುರಿ-ಅರ್ಧ ಕಪ್
* ರವೆ- ಅರ್ಧ ಕಪ್
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಹಸಿಮೆಣಸಿನಕಾಯಿ-1
* ಅಡುಗೆ ಎಣ್ಣೆ- ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
* ಮೊದಲು ಒಂದು ಪಾತ್ರೆಯಲ್ಲಿ ತುರಿದ ಸೌತೆಕಾಯಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ, ಚೆನ್ನಾಗಿ ಕಲಸಿಕೊಳ್ಳಬೇಕು.
* ನಂತರ ಈ ಮಿಶ್ರಣಕ್ಕೆ ರವೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಸಾಲೆಯನ್ನು ರೊಟ್ಟಿಯ ಹದಕ್ಕೆ ಕಲಸಿಕೊಳ್ಳಿ.

* ನಂತರ ರೊಟ್ಟಿಯ ಬಾಣಲೆಗೆ ಸ್ವಲ್ಪ ಅಡುಗೆ ಎಣ್ಣೆಯನ್ನು ಸವರಿ ತಯಾರಿಸಿಕೊಂಡಿರುವ ಹಿಟ್ಟನ್ನು ಒಂದು ಉಂಡೆಯನ್ನು ತೆಗೆದುಕೊಂಡು, ಮಸಾಲೆ ರೊಟ್ಟಿ ತಟ್ಟುವಂತೆ ತಟ್ಟಿ. ಅದರ ಮೆಲೆ ಸ್ವಲ್ಪ ಎಣ್ಣೆಯನ್ನು ಹಾಕಿ, ಚನ್ನಾಗಿ ಬೇಯಿಸಿದರೆ ಸೌತೆಕಾಯಿ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top