fbpx
ಸಮಾಚಾರ

ಕರ್ನಾಟಕ ಪ್ರತಿಭಾ ರತ್ನ ಗೌರವ ಸ್ವೀಕರಿಸಿದ ಅಖಿಲಾ ಶೆಟ್ಟಿ ಕೆಯ್ಯೂರು

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಕರ್ನಾಟಕ ಪ್ರತಿಭಾ ರತ್ನ ಗೌರವಕ್ಕೆ ಅಖಿಲಾ ಶೆಟ್ಟಿ ಕೆಯ್ಯೂರು ಭಾಜನರಾದರು. ಡಿಸೆಂಬರ್ ೧೮ ರಂದು ಶ್ರವಣಬೆಳಗೊಳದ ಜೈನ ಮಠದ ಆವರಣದ ತುಳುವ ವೇದಿಕೆಯಲ್ಲಿ ನಡೆದ ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು. ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿರುವ ಅಖಿಲಾ ಶೆಟ್ಟಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ ಭಾಷಣ,ಪ್ರಬಂಧ,ಕಥೆ ಹಾಗೂ ಕವನ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದಲ್ಲೂ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಬರಹಗಾರ್ತಿಯಾಗಿಯೂ ಗುರುತಿಸಿಕೊಂಡು ತಮ್ಮ ಬರಹಗಳ ಮೂಲಕ ಇದುವರೆಗೂ ಐವತ್ತಕ್ಕೂ ಹೆಚ್ಚು ಸಾಧಕರ ಪರಿಚಯ ಮಾಡಿರುತ್ತಾರೆ.

ಕನ್ನಡ ಕರಾವಳಿ ಸಮ್ಮಿಲನ ವೇದಿಕೆಯ ಅಧ್ಯಕ್ಷೆಯಾಗಿದ್ದು, ಸಿಕ್ಕಿದ್ದನ್ನು ಕಲಿಯೋಣ ತಂಡದ ಕಾರ್ಯದರ್ಶಿಯಾಗಿಯೂ ಜವಾಬ್ದಾರಿ ನಿರ್ವಹಿಸುತ್ತಾರೆ. ಇವರ ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಈ ಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಇವರು ಪುತ್ತೂರು ಕೆಯ್ಯೂರಿನ ದೇರ್ಲ ಜಯರಾಮ ಶೆಟ್ಟಿ ಹಾಗೂ ಇಂದಿರಾ.ಜೆ ಶೆಟ್ಟಿ ದಂಪತಿ ಪುತ್ರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top