fbpx
ಸಮಾಚಾರ

ಏನಿದು ಮತಾಂತರ ನಿಷೇಧ ಕಾಯ್ದೆ? ಪ್ರತಿಪಕ್ಷಗಳ ವಿರೋಧದ ಹಿಂದಿದ್ಯಾ ಅಷ್ಟೊಂದು ಕಾಳಜಿ?

ಮತಾಂತರ ನಿಷೇಧ ಕಾಯ್ದೆ ಸದ್ಯ ರಾಜ್ಯದಲ್ಲಿ ಸುದ್ದಿ ಮಾಡುತ್ತಿರುವ ವಿಷಯ. ಭಾರೀ ವಿರೋಧಗಳ ನಡುವೆಯೂ ಬಿಜೆಪಿ ಸರ್ಕಾರ ಈ ಮಸೂದೆಯನ್ನು ಮಂಡಿಸಿದೆ. ೧೪ ಸೆಕ್ಷನ್‌ಗಳಿರುವ ಈ ವಿಧೇಯಕದ ಪ್ರಮುಖ ಅಂಶಗಳೇನು ಎಂಬುದನ್ನು ಈ ಲೇಕನದಲ್ಲಿ ಓದೋಣ.
ಕರ್ನಾಟಕ ವಿಧಾನಸಭೆಯಲ್ಲಿ ಮಂಗಳವಾರ ಆಡಳಿತಾರೂಢ ಬಿಜೆಪಿ ಸರ್ಕಾರವು ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ‍್ಯ ಹಕ್ಕು ರಕ್ಷಣಾ ವಿಧೇಯಕ-೨೦೨೧’ ಮಂಡಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ನೀಡಿದ್ದಾರೆ. ಅದರಂತೆ ವಿಧೇಯಕವನ್ನೂ ಬಿಜೆಪಿ ಸರ್ಕಾರ ಮಂಡಿಸಿದೆ. ಒಟ್ಟು ೧೪ ಸೆಕ್ಷನ್‌ಗಳಿರುವ ಈ ವಿಧೇಯಕವನ್ನು ಜನಸಾಮಾನ್ಯರ ಭಾಷೆಯಲ್ಲಿ ‘ಮತಾಂತರ ನಿಷೇಧ ಕಾಯ್ದೆ’ ಎಂದು ಕರೆಯಲಾಗಿದೆ. ಈ ಕಾಯ್ದೆಯ ಮುಖ್ಯ ಅಂಶಗಳು ಹೀಗಿವೆ:

೧) ಮತಾಂತರ ಆಗಬಯಸುವ ವ್ಯಕ್ತಿ ೬೦ ದಿನಗಳ ಮೊದಲು ಫಾರ್ಮ್ (೧) ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಬಳಿ ಮಾಹಿತಿ ನೀಡತಕ್ಕದ್ದು.
೨) ಮತಾಂತರ ಮಾಡಿಸುವ ವ್ಯಕ್ತಿಯೂ ಕೂಡ ಒಂದು ತಿಂಗಳ ಮೊದಲು ಈಗಾಗಲೇ ಫಾರ್ಮ್ (೨) ಅನ್ನು ಭರ್ತಿಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗೆ ಮಾಹಿತಿ ನೀಡತಕ್ಕದ್ದು
೩) ಮತಾಂತರವಾದ ಒಂದು ತಿಂಗಳ ಬಳಿಕ ಡಿಕ್ಲರೇಷನ್ ಫಾರ್ಮ್ ಅಥವಾ ಘೋಷಣಾಪತ್ರವನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಭರ್ತಿ ಮಾಡಿ ನೀಡತಕ್ಕದ್ದು
೪) ಡಿಕ್ಲರೇಷನ್ ಮಾಡಿದ ೨೧ ದಿನಗಳ ಬಳಿಕ ಮತಾಂತರ ಹೊಂದಿದ ವ್ಯಕ್ತಿ ಖುದ್ದು ಹಾಜರಾಗಿ ಗುರುತು ನೀಡತಕ್ಕದ್ದು
೫) ಈ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತಾಂತರೊತ್ತರ ಘಟನೆಯ ಸಂಪೂರ್ಣ ಘಟನೆಯನ್ನು ದಾಖಲಿಸತಕ್ಕದ್ದು
೬) ತಕರಾರುಗಳಿದ್ದಲ್ಲಿ ತಕರಾರು ಎತ್ತಿದ ವ್ಯಕ್ತಿ ಹಾಗೂ ತಕರಾರಿನ ಸ್ವರೂಪವನ್ನ ದಾಖಲಿಸತಕ್ಕದ್ದು
೭) ಮತಾಂತರ ಹೊಂದಿದವರಿಗೆ ಜಿಲ್ಲಾ ದಂಡಾಧಿಕಾರಿಗಳು ದೃಢೀಕರಿಸಿದ ಪ್ರತಿಗಳನ್ನು ನೀಡತಕ್ಕದ್ದು
೮) ತಕರಾರುಗಳಿದ್ದ ಪಕ್ಷದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಬAಧ ಪಟ್ಟ ಇಲಾಖೆಗಳಾದ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸೇರಿದಂತೆ ಇತರ ಸಂಬAಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡತಕ್ಕದ್ದು
೯) ಮ್ಯಾಜಿಸ್ಟ್ರೇಟ್‌ರಿಂದ ಮಾಹಿತಿ ಸ್ವಕರಿಸಿದ ಬಳಿಕ ಸಂಬAಧಪಟ್ಟ ಇಲಾಖೆ ಮತಾಂತರ ಹೊಂದಿದ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ಹಾಗೂ ಸರ್ಕಾರದಿಂದ ಸಿಗುವ ಆರ್ಥಿಕ ಲಾಭಗಳ ಬಗ್ಗೆ ಸೂಕ್ತ ಕ್ರಮವಹಿಸುವುದು
ಯಾವುದೆಲ್ಲಾ ಅಪರಾಧವಾಗುತ್ತದೆ.
೧) ತಪ್ಪು ನಿರೂಪಣೆ, ಮೋಸ, ಅನಗತ್ಯ ಒತ್ತಡ, ಬಲಾತ್ಕಾರ ಆಮಿಷ ಆಕರ್ಷಣೆಗಳ ಹಾಗೂ ಮದುವೆ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ
೨) ದೂರು ನೀಡಬಹುದಾದ ಅರ್ಹ ವ್ಯಕ್ತಿಗಳು : ನೊಂದ ಅಥವಾ ಪೀಡಿತ ವ್ಯಕ್ತಿ, ನೊಂದ ವ್ಯಕ್ತಿಯ ಸೋದರ, ಸೋದರಿ, ಪಾಲಕ ಪೊಷಕರು, ರಕ್ತ ಸಂಬAಧಿ ಅಥವಾ ದತ್ತು ಪಡೆದವರು
ಈ ಕಾಯ್ದೆಯ ಉಲ್ಲಂಘನೆ ಮಾಡಿದವರಿಗೆ ಶಿಕ್ಷೆಯ ಪ್ರಮಾಣ ಎಷ್ಟು?
೧) ನಿಯಮ ಬಾಹಿರವಾಗಿ ಮತಾಂತರ ಮಾಡಿದ್ದು ಸಾಬೀತಾದರೆ ೩ ರಿಂದ ೫ ವರ್ಷ ಶಿಕ್ಷೆ ಹಾಗೂ ೨೫ ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
೨) ವಯಸ್ಕರಲ್ಲದವರನ್ನು, ಮಹಿಳೆಯನ್ನು ಹಾಗೂ ಪರಿಶಿಷ್ಟ ವರ್ಗ ಅಥವಾ ಪಂಗಡದವರನ್ನ ನಿಯಮಬಾಹಿರವಾಗಿ ಮತಾಂತರ ಮಾಡಿದರೆ ೩ ರಿಂದ ೧೦ ವರ್ಷಗಳವರೆಗೆ ಶಿಕ್ಷೆ ಹಾಗೂ ೩೫ ಸಾವಿರ ರೂಪಾಯಿ ದಂಡ ಹಾಕಲಾಗುತ್ತದೆ.
ವಿಧೇಯಕದ ಬಗ್ಗೆ ಪ್ರತಿಪಕ್ಷ ಎತ್ತಿರುವ ತಗಾದೆಗಳೇನು?
೧) ಮತ್ತಿತರ ಸಂಸ್ಥೆಗಳು:
ವಿಧೇಯಕದ ಸೆಕ್ಷನ್ (೧) (ಜಿ) ಎಂಬಲ್ಲಿ ಶಿಕ್ಷಣ ಸಂಸ್ಥೆಗಳು, ಅನಾಥಾಶ್ರಮ, ವೃದ್ಧಾಶ್ರಮ, ಆಸ್ಪತ್ರೆ, ಧಾರ್ಮಿಕ ಮಿಷನರಿಗಳು, ಸರ್ಕಾರೇತರ ಸಂಸ್ಥೆಗಳು (ಎನ್.ಜಿ.ಓ) ಹಾಗೂ ಮತ್ತಿತರ ಸಂಸ್ಥೆಗಳು ಎಂದು ಉಲ್ಲೇಖಿಸಲಾಗಿದೆ. ಈ ಪೈಕಿ ಮತ್ತಿತರ ಸಂಸ್ಥೆಗಳ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಅಲ್ಲದೆ ಕೆಲವು ಧರ್ಮದಲ್ಲಿ ನೀರು ಕುಡಿಸಿದರೂ (ಹೋಲಿ ವಾಟರ್) ಮತಾಂತರವಾದAತೆ ಎಂಬ ನಂಬಿಕೆ ಇದೆ. ಇಂತಹ ನಂಬಿಕಗಳನ್ನೇ ಆಧಾರವಾಗಿಟ್ಟುಕೊಂಡು ಸಂಸ್ಥೆಗಳನ್ನ ಗುರಿಯಾಗಿಸಬಹುದು ಎಂಬ ಆತಂಕವನ್ನು ಪ್ರತಿಪಕ್ಷಗಳು ವ್ಯಕ್ತಪಡಿಸಿವೆ.
೨) ಸೆಕ್ಷನ್ ೩ರಲ್ಲಿ ಅಪರಾಧದ ವಿವರಣೆ:
ತಪ್ಪು ನಿರೂಪಣೆ, ಮೋಸ, ಅನಗತ್ಯ ಒತ್ತಡ, ಬಲಾತ್ಕಾರ ಆಮಿಷ ಆಕರ್ಷಣೆಗಳು ಹಾಗೂ ಮದುವೆ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ. ಇಲ್ಲಿ ಮದುವೆ ಎಂಬ ಪದ ಸೇರಿಸಿರುವುದಕ್ಕೆ ತೀವ್ರ ಅಕ್ಷೇಪಣೆ ಇದೆ. ಸಹಜ ವಿವಾಹವನ್ನೂ ಮತಾಂತರವೆAದು ಪರಿಗಣಿಸಿ ಶಿಕ್ಷಿಸಬಹುದಾಗಿದೆ. ಹೀಗಾಗಿ ಬಲವಂತದ ಮದುವೆಯಾಗಿದ್ದರೆ ಮಾತ್ರ ತಪ್ಪು. ಮದುವೆ ಎಂಬ ಪದ ಸೇರಿಸಿ ನಿರ್ದಿಷ್ಟ ಸಮುದಾಯವನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು ಆರೋಪ.

೩) ದೂರು ನೀಡುವವರ ವಿವರ:
ವಿಧೇಯಕದ ಸೆಕ್ಷನ್ ೪ರಡಿ ನೊಂದ ಅಥವಾ ಪೀಡಿತ ವ್ಯಕ್ತಿ, ನೊಂದ ವ್ಯಕ್ತಿಯ ಸೋದರ, ಸೋದರಿ, ಪಾಲಕ ಪೊಷಕರು, ರಕ್ತ ಸಂಬAಧಿ ಅಥವಾ ದತ್ತು ಪಡೆದವರು ದೂರು ನೀಡಬಹುದಾಗಿದೆ. ಅಂತರಧರ್ಮೀಯ ವಿವಾಹಗಳಲ್ಲಿ ಕೌಟುಂಬಿಕ ಅಸಮಾಧಾನ ಕೂಡ ದೂರಿಗೆ ಕಾರಣವಾಗಬಹುದು. ಗಂಡು ಹೆಣ್ಣಿಗೆ ಒಪ್ಪಿಗೆ ಇದ್ದರೂ ಕುಟುಂಬದ ಸದಸ್ಯರ ಆಕ್ಷೇಪ ಮತಾಂತರ ಆರೋಪಕ್ಕೆ ಕಾರಣವಾಗಬಹುದು. ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡವಬಹುದು ಎಂಬ ಆತಂಕ ಪ್ರತಿಪಕ್ಷಗಳದ್ದು.

೪) ನಿಯಮಬಾಹಿರ ಮತಾಂತರ
ವಿಧೇಯಕದ ಸೆಕ್ಷನ್ ೫ರಲ್ಲಿ ವಯಸ್ಕರಲ್ಲದವರನ್ನು, ಮಹಿಳೆಯನ್ನು ಹಾಗೂ ಪರಿಶಿಷ್ಟ ವರ್ಗ ಅಥವಾ ಪಂಗಡದವರನ್ನು ನಿಯಮಬಾಹಿರವಾಗಿ ಮತಾಂತರ ಮಾಡಿದರೆ ೩ರಿಂದ ೧೦ ವರ್ಷದವರೆಗೆ ಶಿಕ್ಷೆ ಹಾಗೂ ೩೫ ಸಾವಿರ ರೂಪಾಯಿ ದಂಡ ಎಂಬ ನಿಯಮವಿದೆ. ಇತರರನ್ನು ಮತಾಂತರ ಮಾಡಿದರೆ ಕೇವಲ ೫ ವರ್ಷದವರೆಗೆ ಶಿಕ್ಷೆ ವಿಧಿಸಲಾಗಿದೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳನ್ನೇ ಏಕೆ ಟಾರ್ಗೇಟ್ ಮಾಡಲಾಗುತ್ತಿದೆ ಎಂಬುದು ಪ್ರತಿಪಕ್ಷಗಳ ಪ್ರಶ್ನೆ. ಈ ವರ್ಗಗಳ ಪ್ರಬುದ್ಧತೆ, ಪ್ರಜ್ಞೆ ಮತ್ತು ವಿವೇಚನೆಯನ್ನು ಸರ್ಕಾರ ಪ್ರಶ್ನೆ ಮಾಡುತ್ತಿದೆಯೇ? ಈ ವರ್ಗದವರ ಶೈಕ್ಷಣಿಕ, ಸಾಮಾಜಿಕ ಸ್ಥಾನಮಾನವನ್ನು ಕಸಿದುಕೊಳ್ಳುವ ಹುನ್ನಾರವೇ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.

೫) ವಿಧೇಯಕದ ಸೆಕ್ಷನ್ ೮ (೧) ಹಾಗೂ (೨) ಅಡಿ ಮತಾಂತರ ಅಗಬಯಸುವ ವ್ಯಕ್ತಿಗಳು ೬೦ ದಿನಗಳ ಮೊದಲು ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗಳೆದುರು ಫಾರಂ ೧ ಭರ್ತಿ ಮಾಡಿ ಮಾಹಿತಿ ನೀಡಬೇಕಿದೆ. ಅದೇ ರೀತಿ ಮತಾಂತರ ಮಾಡಿಸುವ ವ್ಯಕ್ತಿಯೂ ಒಂದು ತಿಂಗಳು ಮೊದಲು ಫಾರ್ಮ್ ೨ ಅನ್ನು ಭರ್ತಿ ಮಾಡಿ ಮಾಹಿತಿ ನೀಡತಕ್ಕದ್ದು ಎಂಬ ನಿಯಮವಿದೆ. ಇಷ್ಟು ದೀರ್ಘ ಅವಧಿ ಏಕೆ ಎಂಬುದು ಪ್ರತಿಪಕ್ಷಗಳ ಪ್ರಶ್ನೆ.

೬) ಅರ್ಜಿ ಸಲ್ಲಿಸಿದ ಬಳಿಕ ಮತಾಂತರವಾದ ಕೆಲ ದಿನಗಳ ಬಳಿಕ ಗಂಡು ಹೆಣ್ಣಿನ ನಡುವೆ ಅಥವಾ ಕುಟುಂಬದ ನಡುವೆ ವೈಮನಸ್ಸು ಉಂಟಾಗಿ ದೂರು ನೀಡಿದರೆ ಕಾಯ್ದೆಯ ದುರುಪಯೋಗವಾಬಹುದು. ಅಲ್ಲದೇ ಮತಾಂತರ ಮಾಡಿಸಿದ ವ್ಯಕ್ತಿಗೂ ಸಹ ಸಮಸ್ಯೆ ಆಗಬಹುದು ಎಂಬುದು ಪ್ರತಿಪಕ್ಷಗಳ ಆತಂಕ.

ತಾAತ್ರಿಕ ತೊಡಕು ಮತ್ತು ಸಲಹೆ
ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳು ಕಾರ್ಯಾಂಗದ ಭಾಗವಾಗಿದ್ದು ಸರ್ಕಾರದ ಒತ್ತಡಕ್ಕೆ ಈಡಾಗಬಹುದು. ಹೀಗಾಗಿ ಕಾಯ್ದೆಯ ಸೂಕ್ತ ಜಾರಿಯಲ್ಲಿ ಲೋಪದೋಷಗಳಾಗಬಹುದು. ನಿಷ್ಪಕ್ಷಪಾತ ಧೋರಣೆ ಅನುಸರಿಸಲು ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳ ಬದಲು ಜಿಲ್ಲಾ ನ್ಯಾಯಲಯಗಳಲ್ಲೇ ಪ್ರತ್ಯೇಕ ಪೀಠ ರಚಿಸಬೇಕು ಎಂಬ ಸಲಹೆಯನ್ನು ಹಲವರು ನೀಡಿದ್ದಾರೆ.
ಒಟ್ಟಿನಲ್ಲಿ ಈ ಮತಾಂತರ ನಿಷೇಧ ಕಾಯ್ದೆಯ ದುರುಪಯೋಗವಾಗದಿರಲಿ ಎಂಬುದೇ ಎಲ್ಲರ ಆಶಯ ಮತ್ತು ಬೇಡಿಕೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top