fbpx
ಕ್ರಿಕೆಟ್

ಆ್ಯಶಸ್ ಸರಣಿಯಲ್ಲಿ ಇಂಗ್ಲೆಡ್ ಸೋತರೂ ಪೆಟ್ಟು ತಿಂದಿದ್ದು ಭಾರತ.

ಇತ್ತೀಚೆಗಷ್ಟೆ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಸೋಲನುಭವಿಸಿತು. ಆದರೆ ಇಲ್ಲಿ ನಿಜವಾಗಿಯೂ ಪೆಟ್ಟು ಬಿದ್ದಿದ್ದು ಭಾರತಕ್ಕೆ. ಇಂಗ್ಲೆಂಡ್ ಹೀನಾಯವಾಗಿ ಸೋತಿದ್ದು ಭಾರತವನ್ನು ಅಂಕಪಟ್ಟಿಯಲ್ಲಿ ಕುಸಿಯುವಂತೆ ಮಾಡಿದೆ.

ಆ್ಯಶಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 275ರನ್ ಗಳ ಬೃಹತ್ ಜಯ ದಾಖಲಿಸಿದೆ. ಆಸ್ಟ್ರೇಲಿಯಾಕ್ಕೆ ೪೮೬ ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 192 ರನ್‌ಗಳಿಗೆ ಆಲೌಟ್ ಆಯಿತು ಮತ್ತು ಆತಿಥೇಯರು ಸರಣಿಯಲ್ಲಿ   2-0 ಮುನ್ನಡೆ ಸಾಧಿಸಿದರು. ಅಡಿಲೇಡ್‌ನಲ್ಲಿ ಆಸ್ಟ್ರೇಲಿಯದ ಗೆಲುವು ಆಶಸ್ ಸರಣಿಯಿಂದ ಲಾಭ ಪಡೆದಿದೆ ಮಾತ್ರವಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಸುಧಾರಿಸಿದೆ. ಆ್ಯಶಸ್ ಸರಣಿಯ ಎರಡನೇ ಟೆಸ್ಟ್ ಅಂತ್ಯದ ವೇಳೆಗೆ, ಆಸ್ಟ್ರೇಲಿಯಾ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ತಲುಪಿತು. ಆಸ್ಟ್ರೇಲಿಯಾ 2 ಟೆಸ್ಟ್ಗಳಲ್ಲಿನ ಗೆಲುವಿನೊಂದಿಗೆ ಈಗ 24ಅಂಕಗಳನ್ನು ಹೊಂದಿದೆ ಮತ್ತು ಅದರ ಪಿ.ಸಿ.ಟಿ ಶೇಕಡಾವಾರು100 ಆಗಿದೆ. ಶ್ರೀಲಂಕಾ 24 ಅಂಕಗಳು ಮತ್ತು 100 ಶೇಕಡಾ ಪಿ.ಸಿ.ಟಿ ಯೊಂದಿಗೆ ಮೊದಲ ಸ್ಥಾನದಲ್ಲಿದೆ.

ಆದರೀಗ ಆಸ್ಟ್ರೇಲಿಯಾ ಗೆಲುವಿನೊಂದಿಗೆ ಟೀಂ ಇಂಡಿಯಾ ದೊಡ್ಡ ಮಟ್ಟದ ನಷ್ಟ ಅನುಭವಿಸಿದೆ. 58 .2ಪಿ.ಸಿ.ಟಿಯೊಂದಿಗೆ ಭಾರತ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಮತ್ತೊಂದೆಡೆ ಪಾಕ್ 75 ಪಿಸಿಟಿ ಅಂಕದೊಂದಿಗೆ  ಮೂನೇ ಸ್ಥಾನದಲ್ಲಿದೆ. ಇನ್ನು ಈ ವಿಶ್ವ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಇಂಗ್ಲೆಂಡ್ ಸ್ಥಿತಿ ಇನ್ನಷ್ಟು ಚಿಂತಾಜನಕವಾಗತೊಡಗಿದೆ. 8 ಅಂಕಗಳನ್ನು ಹೊಂದಿರುವ ಇಂಗ್ಲೆಂಡ್ ಶೇಕಡಾ ಪಿಸಿಟಿ 8 .33 ಪಡೆದುಕೊಂಡಿದೆ. ಈ ಮೂಲಕ ಸದ್ಯ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ 7ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಭಾರತಕ್ಕಿರುವ ಒಂದೇ ಒಂದು ದಾರಿ ಎಂದರೆ ದ. ಆಫ್ರಿಕಾ ಪ್ರವಾಸದಲ್ಲಿ ಪ್ರತೀ ಪಂದ್ಯಗಳನ್ನು ಭಾರತ ಗೆಲ್ಲಲೇ ಬೇಕಿದೆ. ಆಗಷ್ಟೇ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಸ್ಥಾನಮಾನ ಮೇಲೇರಲಿದೆ. ವಿರಾಟ್ ಮತ್ತು ತಂಡ ಅದರಲ್ಲಿ ಯಶಸ್ವಿಯಾಗಬಹುದೇ ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top