fbpx
ಸಮಾಚಾರ

ನಟಿ ರಶ್ಮಿಕಾಗೆ ಲೇಸರ್ ಚಿಕಿತ್ಸೆ: ನೋವು ತಡೆಯೋಕಾಗಲ್ಲ ಎಂದ ಕಿರಿಕ್ ಹುಡುಗಿ

ಸಿನಿಮಾ ನಟಿಯರು ತಮ್ಮ ಪ್ರತಿಭೆಗಿಂತ ಸೌಂದರ್ಯದ ಮೇಲೆ ಜಾಸ್ತಿ ಇಂಪಾರ್ಟೆನ್ಸ್ ಕೊಡ್ತಾರೆ ಎನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಅದಕ್ಕಾಗಿ ಅವರು ಪ್ಲಾಸ್ಟಿಕ್ ಸರ್ಜರಿ, ಲೇಸರ್ ಚಿಕಿತ್ಸೆ ಹೀಗೆ ಮುಂದಾದ ತಂತ್ರಜ್ಞಾನಗಳ ಮೊರೆ ಹೋಗುತ್ತಾರೆ. ಇದಕ್ಕಾಗಿ ದೊಡ್ಡ ಮೊತ್ತದ ಹಣ ಖರ್ಚು ಮಾಡುತ್ತಾರೆ.

ರಶ್ಮಿಕಾ ಮಂದಣ್ಣ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಹೀರೋಯಿನ್​ ಆದ ನಂತರದಲ್ಲಿ ತಮ್ಮ ಫಿಟ್​ನೆಸ್​ ಹಾಗೂ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಈ ಬಗ್ಗೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಂಗಳವಾರ ರಶ್ಮಿಕಾ ಮಂದಣ್ಣ ಲೇಸರ್ ಚಿಕಿತ್ಸೆಯ ನಂತರ ತಮ್ಮ ಕೈಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಮತ್ತು ಅವರು ನೋವಿನಿಂದ ಬಳಲುತ್ತಿದ್ದಾರೆ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅವರು ನಟರಾಗಲು ಬಯಸುವ ಜನರಿಗೆ ರಿಯಾಲಿಟಿ ಚೆಕ್ ನೀಡಿದರು ಹಾಗೂ ಸೂಕ್ಷ್ಮವಾಗಿ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ತಮ್ ಕೈ ಫೋಟೋವನ್ನು ಹಂಚಿಕೊಂಡು “ಯಾರಾದ್ದರು ಸಿನಿಮಾ ರಂಗದ ಒಳ್ಳೆಯ ಪಾರ್ಟ್​ ನೋಡಿ.. ತಾವು ಕೂಡ ಒಬ್ಬ ನಟ ಆಗಬೇಕು ಅಂದುಕೊಂಡಿದ್ದರೆ ಬೇಡ. ಇದರಲ್ಲಿ ಬಹಳ ವಿಚಾರಗಳಿವೆ. ಉದಾಹರಣೆಗೆ ನೀವು ಸಾಕಷ್ಟು ಬಾರಿ ಲೇಸರ್ ಪ್ರಕ್ರಿಯೆಗೆ ಒಳಪಡಬೇಕಾಗುತ್ತದೆ. ಇದು ಬಹಳ ನೋವುಂಟುಮಾಡುತ್ತದೆ’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top