fbpx
ಸಮಾಚಾರ

ಪುನೀತ್ ಜೊತೆ ನಟಿಸಿದ್ದ ನಟಿಗೆ ಕಿರುಕುಳ- ಆರೋಪಿ ಬಂಧನ

ಪುನೀತ್ ರಾಜಕುಮಾರ್ ಅವರ ಜೊತೆ ಪೃಥ್ವಿ, ಮಿಲನ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಪಾರ್ವತಿ ಅವರಿಗೆ ಕಿಡಿಗೇಡಿಯೊಬ್ಬ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಾರ್ವತಿ ಇತ್ತೀಚೆಗೆ ಅಭಿಮಾನಿಯೋರ್ವನ ಹುಚ್ಚಾಟಕ್ಕೆ ತುಂಬಾ ತಲೆಕೆಡಿಸಿಕೊಂಡಿದ್ದರು. ಅಲ್ಲದೇ ಈತನಿಂದ ಮುಕ್ತಿ ಪಡೆಯಲು ತೀರ್ಮಾನಿಸಿದ್ದ ಪಾರ್ವತಿ ತಿರುವೋತ್ ಪೋಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿ, ಈತನಿಂದ ಆಗುತ್ತಿದ್ದ ತೊಂದರೆಗಳ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿದ್ದರು. ಇದೀಗ ನಟಿಯ ದೂರಿನ ಅನ್ವಯ ಪಾರ್ವತಿ ತಿರುವೋತ್ ಹಿಂದೆ ಬಿದಿದ್ದ ಅಭಿಮಾನಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲ್ಲಂ ಮೂಲದ ಅಫ್ಸಲ್ (34) ಬಂಧಿತ ಆರೋಪಿ. ನಟಿಗೆ ನಿರಂತರ ಫೋನ್ ಕರೆಗಳ ಮೂಲಕ ಆರೋಪಿಯು ತೊಂದರೆಯನ್ನು ನೀಡುತ್ತಿದ್ದ. ಅಷ್ಟೇ ಅಲ್ಲದೆ ಈತ ಆಹಾರ ಪೊಟ್ಟಗಳನ್ನು ನೀಡಲು ಕೊಚ್ಚಿಯಲ್ಲಿರುವ ನಟಿ ಪಾರ್ವತಿ ನಿವಾಸಕ್ಕೆ ಆಗಾಗ ಬಂದು ಅಲ್ಲಿನ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿದ್ದ. ಕಳೆದ ಕೆಲವು ವರ್ಷಗಳಿಂದ ಫೋನ್ ಸಂದೇಶಗಳ ಮೂಲಕ ನಟಿಗೆ ತೊಂದರೆ ನೀಡುತ್ತಿದ್ದನು.

ಆರೋಪಿ ಎರಡೆರಡು ಬಾರಿ ಆಹಾರ ಪೊಟ್ಟಣಗಳನ್ನು ಹೊತ್ತು ನಟಿಯ ಮನೆಗೆ ಭೇಟಿ ನೀಡಿದ್ದ. ಅಂತಹವುಗಳಲ್ಲಿ ಆಸಕ್ತಿ ಇಲ್ಲ ಎಂದು ತಿಳಿಸಿದ್ದರೂ ಕೂಡ ಮತ್ತೆ ಮತ್ತೆ ಆಗಮಿಸುತ್ತಿದ್ದ. ಅಲ್ಲದೇ ಮನೆಯ ಸೆಕ್ಯುರಿಟಿಯವರೊಂದಿಗೆ ವಾಗ್ವಾದಕ್ಕೂ ಇಳಿದಿದ್ದ. ಪಾರ್ವತಿಗೆ ಕೆಲ ವರ್ಷಗಳಿಂದ ಸಂದೇಶಗಳ ಮೂಲಕ ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ ನಟಿ ಪೊಲೀಸ್ ದೂರು ದಾಖಲಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top