fbpx
ಸಮಾಚಾರ

‘ಸೆಕೆಂಡ್ ಹ್ಯಾಂಡ್ ಐಟಂ ‘ಎಂದು ಅವಮಾನಿಸಿದ ಕಿಡಿಗೇಡಿಗೆ ಖಡಕ್ ಉತ್ತರ ನೀಡಿದ ನಟಿ ಸಮಂತಾ

ಸಿನಿಮಾ ನಟಿಯರ ಪಾಲಿಗೆ ಸಾಮಾಜಿಕ ಜಾಲತಾಣಗಳು ಕಿರಿಕಿರಿಯಾಗುತ್ತಿವೆಯಾ? ಇತ್ತೀಚೆಗೆ ನಡೆಯುತ್ತಿರೋ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಈ ಪ್ರಶ್ನೆಗೆ ಹೌದು ಎಂಬ ಉತ್ತರವೇ ಪಕ್ಕಾ ಆಗುವಂತಿದೆ. ನಟಿಯರ ದೈನಂದಿನ ಸಣ್ಣ ಪುಟ್ಟ ವಿಚಾರವನ್ನೆತ್ತಿಕೊಂಡು ಅವರ ಬಗ್ಗೆ ಕೊಳಕು ಕಾರುತ್ತಾ ವಿಕೃತಾನಂದ ಪಡೆಯಲೆಂದೇ ಹೊಂಚಿಕೂತ ಕಿಡಿಗೇಡಿಗಳ ಹಿಂಡೊಂದು ಆನ್ಲೈನ್ ನಲ್ಲಿ ಜಮಾಗೊಂಡಿದೆ.

 

 

ಸಾಮಾನ್ಯವಾಗಿ ಸಿನಿಮಾ ತಾರೆಯರು ತಮ್ಮ ಕ್ಶಣ ಕ್ಷಣದ ಮಾಹಿತಿಗಳನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವುದರ ಮೂಲಕ ತಮ್ಮ ಫಾಲೋಯರ್ಸ್ ಗಳ ಜೊತೆಯಲ್ಲಿ ಸದಾ ಸಂಪರ್ಕದಲ್ಲಿರಲು ಬಯಸುತ್ತಾರೆ. ಅದೇ ರೀತಿ ನಟಿ ಸಮಂತಾ ಕೂಡ ಸಕ್ರಿಯರಾಗಿರುತ್ತಾರೆ.. ಸಮಂತಾ ವಿಚ್ಛೇದನ ಪಡೆದ ನಂತರ ಅವರ ಬಗ್ಗೆ ಅನೇಕ ರೂಮರ್, ಗಾಸಿಪ್ ಗಳು ಹರಿದಾಡಿದ್ದವು. ಆದರೆ, ಕಿಡಿಗೇಡಿಗಳು ಮಾತ್ರ ಸಮಂತಾಳನ್ನು ಟೀಕೆ ಮಾಡುವುದನ್ನು ನಿಲ್ಲಿಸಿಲ್ಲ. ವ್ಯಕ್ತಿಯೊಬ್ಬ ಟ್ವಿಟರ್‌ನಲ್ಲಿ ಸಮಂತಾಗೆ ಟೀಕೆ ಮಾಡಿದ್ದಾನೆ. ಆ ಟೀಕೆಗೆ ಕ್ಯೂಟ್ ನಟಿ ಸರಿಯಾಗೇ ಉತ್ತರ ನೀಡಿದ್ದಾರೆ.

ನೆಟ್ಟಿಗ ಹೇಳಿದ್ದೇನು? ಸಮಂತಾ ಉತ್ತರ ಏನಾಗಿತ್ತು?
. ಟ್ವಿಟರ್‌ನಲ್ಲಿ ಕಮರಲ್ಲಿ ದುಕಾನ್ದಾರ್ ಎಂಬ ವ್ಯಕ್ತಿ ‘ಸಮಂತಾ ಪಾಳುಬಿದ್ದ ವಿಚ್ಛೇದಿತ ಸೆಕೆಂಡ್ ಹ್ಯಾಂಡ್ ಐಟಂ. ಸಂಭಾವಿತ ವ್ಯಕ್ತಿಯಿಂದ ತೆರಿಗೆ ಮುಕ್ತ 50 ಕೋಟಿ ಹಣವನ್ನು ಲೂಟಿ ಮಾಡಿರುವವಳು’ ಎಂದು ಕಮೆಂಟ್ ಮಾಡಿದ್ದ. ಸಾಲದ್ದಕ್ಕೆ ಸಮಂತಾಗೆ ಟ್ಯಾಗ್ ಕೂಡ ಮಾಡಿದ್ದನು. ಇದಕ್ಕೆ ಸಮಂತಾ ಕೂಡ ಸುಮ್ಮನೆ ಕೂತಿಲ್ಲ. ಅವಮಾನ ಮಾಡಿದ ವ್ಯಕ್ತಿಗೆ ಸರಿಯಾದ ಪ್ರತಿಕ್ರಿಯೆ ನೀಡಿದ್ದು, “ನಿಮ್ಮ ಆತ್ಮಕ್ಕೆ ಆ ದೇವರು ಒಳ್ಳೆಯದು ಮಾಡಲಿ” ಎಂದು ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top