fbpx
ಸಮಾಚಾರ

ಬೆಳಗಾವಿ ವಿಷ್ಯದಲ್ಲಿ ರಾಜಕೀಯ ನೋಡುತ್ತಿದ್ದಾರೆ ರಾಜ್ಯದ ಸಂಸದರು

ಕರ್ನಾಟಕದ ಬೆಳಗಾಂ ಪ್ರಾಂತ್ಯದಲ್ಲಿ ಕಳೆದ ಕೆಲ ದಿನಗಳಿಂದ ವಿವಾದ ಭುಗಿಲೆದ್ದಿರುವುದು ನಿಮಗೆಲ್ಲಾ ತಿಳಿದೇ ಇದೆ. ನಾಡಿನ ಪ್ರಮುಖ ಚಿಂತಕರು, ಹೋರಾಟಗಾರರು ಆದ ಬಸವಣ್ಣ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಮಸಿ ಬಳಿದಿರುವ ಹಾಗೂ ವಿರೂಪಗೊಳಿಸಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರ  ಗಡಿ ಉದ್ವಿಗ್ನಗೊಂಡಿದೆ. ಆದರೆ ಈ ವಿಚಾರವಾಗಿ ಕರ್ನಾಟಕದ ಸಂಸದರ ಮೌನ ಮಾತ್ರ ನಿಜಕ್ಕೂ ತಲೆ ತಗ್ಗಿಸುವಂತಾಗಿದೆ.

ಪ್ರಸ್ತುತ ಕರ್ನಾಟಕದಲ್ಲಿ ೨೮ ಮಂದಿ ಲೋಕಸಭಾ ಸದಸ್ಯರು ಮತ್ತು 11 ಮಂದಿ ರಾಜ್ಯ ಸಭಾ ಸದಸ್ಯರು, ಮೂವರು ಸಚಿವರು, ಓರ್ವ ವಿಪಕ್ಷ ನಾಯಕರಿದ್ದರೂ, ಯಾರೊಬ್ಬರು ಈ ಗಡಿ ವಿವಾದವನ್ನು ಕೇಂದ್ರದ ಗಮನಕ್ಕೆ ತರುವಲ್ಲಿ ಸೋತಿದ್ದಾರೆ. ಕನ್ನಡ ಧ್ವಜ ಸುಟ್ಟಿದ್ದರೂ, ರಾಯಣ್ಣನ ಪ್ರತಿಮೆ ಹಾಳುಗೆಡವಿದ್ದರೂ ತಮಗೆ ಸಂಬಂಧನವೇ ಇಲ್ಲ ಎಂಬಂತೆ  ಸಂಸದರು ವರ್ತಿಸುತ್ತಿರುವುದು ನಿಜಕ್ಕೂ ಕನ್ನಡಿಗರಿಗೆ ಬೇಸರ ತರಿಸಿದೆ. ಇನ್ನು ಕರ್ನಾಟಕದ ಸಂಸದರು ಇಲ್ಲಿ ಮೌನ ತಾಳಿರುವುದು ನಿಜಕ್ಕೂ ಬೇಸರದ ಸಂಗತಿ ಒಂದಾದರೆ ರಾಜಕಾರಣವೇ ಇಲ್ಲಿ ಅವರಿಗೆ ಪ್ರಮುಖವಾದಂತಿದೆ. ಮರಾಠಿಗರೇ ಅಧಿಕವಾಗಿರುವ ಬೆಳಗಾವಿಯಲ್ಲಿ ಮರಾಠರನ್ನು ಎದುರು ಹಾಕಿಕೊಂಡರೆ ಎಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಹಿನ್ನಡೆಯಾಗಬಹುದೆಂದು ಸಂಸದರು ಯೊಚಿಸಿದಂತಿದೆ. ಅಲ್ಲದೆ ಕಾಂಗ್ರೆಸ್ ಶಿವಸೇನೆ ಮೈತ್ರಿಯಾಗಿರೋದ್ರಿಂದ ಎಂಇಎಸ್ ವಿರುದ್ದ ಮಾತನಾಡಿದ್ರೆ ಎಲ್ಲಿ ನಿಷ್ಟುರವಾಗುತ್ತೇವೆಂಬ ಭಯ ಅವರಿಗಿದೆ.

ಶಿವಸೇನೆಯ ಕಾರ್ಯಕರ್ತರು ಈಗಾಗಲೇ ಶಿವಾಜಿಯ ಪ್ರತಿಮೆಗೆ ಮಸಿ ಬಳಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಅಮಿತ್ ಶಾಗೆ ಮನವಿ ಮಾಡಿದ್ದಾರೆ. ಆದರೆ ರಾಜ್ಯದ ಸಂಸದರು ಮಾತ್ರ ಮೌನ ವಹಿಸಿ ಕುಳಿತಿರೋದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಭಾಷೆಯ ಬಗ್ಗೆ ಉದ್ದುದ್ದ ಲೈನ್ ಡೈಲಾಗ್ ಹೊಡೆಯೋ ಸಂಸದರನ್ನು ಈಗ ದುರ್ಭಿನು ಹಾಕಿ ಹುಡುಕಬೇಕಾದ ಅನಿವಾರ್ಯತೆ ಎದ್ದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top