fbpx
ಸಮಾಚಾರ

ಮತಾಂತರ ನಿಷೇಧ ಕಾಯ್ದೆ: ವೀರೇಂದ್ರ ಹೆಗ್ಗಡೆ ಹೆಸರನ್ನು ಎಳೆದು ತಂದ ಡಿಕೆಶಿ, ಧರ್ಮಸ್ಥಳ ಧರ್ಮಾಧಿಕಾರಿಯ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಹೇಳಿದ್ದೇನು?

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ವಿವಾದಾತ್ಮಕ ಮತಾಂತರ ನಿಷೇಧ ಕಾಯ್ದೆ ಬಗ್ಗೆ ನಾಗರೀಕ ವಲಯದಲ್ಲಿ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ. ಅತ್ತ ಮತಾಂತರ ತಡೆ ಮಸೂದೆಯನ್ನು ರಾಜ್ಯ ಸರಕಾರ ತರಾತುರಿಯಲ್ಲಿ ಮಂಡಿಸಿದರೇ ಇತ್ತ ವಿರೋಧ ಪಕ್ಷಗಳು ಇದಕ್ಕೆ ಭಾರೀ ವಿರೋಧವನ್ನು ವ್ಯಕ್ತ ಪಡಿಸಿ ಸಭಾತ್ಯಾಗ ಮಾಡಿದವು.. ವಿರೋಧ ಪಕ್ಷದ ನಾಯಕರು ಈ ಮಸೂದೆಯನ್ನು ಸಂವಿಧಾನ ವಿರೋಧಿ ಮಸೂದೆ ಎಂದು ವಾದಿಸುತ್ತಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೆಸರನ್ನು ಎಳೆದು ತಂದಿದ್ದಾರೆ. ಹಾಗಾದ್ರೆ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಡಿಕೆ ಶಿವಕುಮಾರ ಅವರು ಹೇಳಿದ್ದೇನು ಅಂತೀರಾ? ಮುಂದೆ ಓದಿ

ಕಾಯ್ದೆಯ ಬಗ್ಗೆ ವಿರೋಧ ವ್ಯಕ್ತಪಡಿಸಿ ಮಾಧ್ಯಮದವರ ಜೊತೆ ಮಾತನಾಡಿದ ಡಿಕೆ ಶಿವಕುಮಾರ್ “ನಮ್ಮ ನಂಬಿಕೆಯ ಧರ್ಮಸ್ಥಳದ ಮಂಜುನಾಥ ದೇವಸ್ಥಾನವನ್ನು ನಡೆಸುತ್ತಿರುವವರು ಜೈನ ಧರ್ಮದವರು. ಜೈನ ಧರ್ಮದವರಾದ ವೀರೇಂದ್ರ ಹೆಗ್ಗಡೆಯವರು ಅಲ್ಲಿನ ಧರ್ಮಾಧಿಕಾರಿಗಳು. ಅವರು ಮಂಜುನಾಥಸ್ವಾಮಿಯ ಧರ್ಮಾಧಿಕಾರಿಗಳು. ಅವರು ಎಂದಾದರೂ ಜೈನ ಧರ್ಮಕ್ಕೆ ಮತಾಂತರಗೊಳ್ಳಿ ಎಂದು ಜನರಿಗೆ ಹೇಳಿದ್ದಾರಾ ಅಥವಾ ಅವರು ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದಾರಾ? ಸತ್ಯ ಎಂದರೆ ಅದು ಮಂಜುನಾಥ, ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಏನಾದರೂ ಬದಲಾವಣೆ ತರಲು ಮುಂದಾದರಾ? “ಎಂದು ಸರಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top