fbpx
ಸಮಾಚಾರ

ಹೊಸ ವರ್ಷದ ಸಂಭ್ರಮ ಕಿತ್ತುಕೊಂಡ ಓಮ್ರಿಕಾನ್ ವೈರಸ್. ಸರ್ಕಾರದ ಗೈಡ್ ಲೈನ್ಸ್ನಲ್ಲಿ ಏನೇನಿದೆ?

ಕೊರೋನಾ ನಂತರ ರಾಜ್ಯದ ಜನರನ್ನು ಅತಿಯಾಗಿ ಹೆದರಿಸುತ್ತಿರೋದು ಮೂರನೇ ಅಲೆ ಎಂದೇ ಕರೆಸಿಕೊಳ್ಳುವ ಓಮ್ರಿಕಾನ್. ಇನ್ನೇನು ಲಾಕ್ ಡೌನ್ ಆಗಿಯೇ ಬಿಡುತ್ತದೆ. ಎಂದು ಯೋಚಿಸುವ ಹೊತ್ತಿಗಾಗಲೇ ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾಡುವುದಿಲ್ಲ. ಅಂತ ಘೋಷಿಸಿಯೇ ಬಿಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಹೊಸ ವರ್ಷದ ಸಂಭ್ರಮದಲ್ಲಿದ್ದ ರಾಜ್ಯದ ಜನರಿಗೆ ಸರ್ಕಾರ ಶಾಕ್ ಕೊಟ್ಟಿದೆ. ಅಂದ್ಹಾಗೆ ಸರ್ಕಾರ ಹೊಸ ವರ್ಷದ ಅದ್ದೂರಿ ಆಚರಣೆಗೆ ಕಡಿವಾಣ ಹಾಕಿ ಗೈಡ್ ಲೈನ್ ತಂದಿದೆ. ಬೆಳಗಾವಿ ಸದನದಲ್ಲಿ ಸಿಎಂ ಬೊಮ್ಮಾಯಿ ಮತ್ತು ಸಚಿವ ಸುಧಾಕರ್ ಈ ಘೋಷಣೆ ಹೊರಡಿಸಿ ಮಾರ್ಗಸೂಚಿಗಳನ್ನು ಹಾಕಿದ್ದಾರೆ. ಸರ್ಕಾರದ ಈ ಮಾರ್ಗಸೂಚಿಯಲ್ಲಿ ಏನೇನಿದೆ ನೋಡೋಣ ಬನ್ನಿ.

ಹೊಸ ಮಾರ್ಗಸೂಚಿಗಳು :
1. ಹೊಸ ಮರ್ಗಸೂಚಿಯನ್ನು ಡಿಸೆಂಬರ್ 30ರಿಂದ ಜನವರಿ 2ನೇ ತಾರೀಖಿನವರೆಗೆ ಹೊರಡಿಸಲಾಗಿದೆ.
2. ಬಹಿರಂಗ ಸಂಭ್ರಮಾಚರಣೆಗೆ ನಿರ್ಬಂಧ ಹೇರಲಾಗಿದೆ. ಮನೆಯಿಂದ ಹೊರಗಡೆ ಗುಂಪು ಗುಂಪಾಗಿ ಸೇರಿ ನ್ಯೂ ಇಯರ್ ಸೆಲೆಬ್ರೆಷನ್ ಮಾಡುವಂತಿಲ್ಲ.
3. 4 ದಿನಗಳು ಅಂದರೆ ಡಿ.3೦ರಿಂದ ಜ.2ರವರೆಗೆ ಡಿಜೆಗೆ ರಾಜ್ಯದ್ಯಾಂತ ಅವಕಾಶ ಇಲ್ಲ.
4. ಹೊಸ ವರ್ಷದ ಆಚರಣೆಗೆ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇಲ್ಲ.
5. ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ 5೦% ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು ಹೆಚ್ಚಿನ ಜನ ಸೇರುವಂತಿಲ್ಲ. ಹಾಗೂ ಸಿಬ್ಬಂದಿಗಳು ಎರಡು ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯ.
6. ಕ್ರಿಸ್‌ಮಸ್ ಆಚರಣೆಗೆ ಯಾವುದೇ ನಿಷೇಧ ಹೇರಲಾಗಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಕೆ. ಸುಧಾಕರ್ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರ ಸಲಹೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಓಮ್ರಿಕಾನ್ ಬೇರೆ ಬೇರೆ ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಹಾಗಾಗಿ ಹೆಚ್ಚಿನ ಜನ ಸೇರುವ ಹೊಸ ವರ್ಷದ ಆಚರಣೆಗೆ ನಿರ್ಬಂಧ ಹೇರಲಾಗಿದೆ ಎಂದರು.
ಓಮಿಕ್ರಾನ್ ಸೋಂಕಿನ ಲಕ್ಷಣಗಳೇನು?
ಗಂಟಲು ಕೆರೆತ, ವಿಪರೀತ ಸುಸ್ತು, ಲಘು ಜ್ವರ ಇವು ಈ ಓಮಿಕ್ರಾನ್‌ನ ಕೆಲವು ಲಕ್ಷಣಗಳಾಗಿವೆ. ಬೇರೆ ಬೇರೆ ದೇಶಗಲಲ್ಲಿ ವೇಗವಾಗಿ ಹರಡುತ್ತಿರುವ ಈ ವೈರಸ್ ಅನ್ನು ಕೊರೋನಾ ರೂಪಾಂತರಿ ವೈರಸ್ ಎಂದು ಕರೆಯಲಾಗುತ್ತದೆ.
ದೇಶದಲ್ಲಿ ಪತ್ತೆಯಾದ ಒಮಿಕ್ರಾನ್ ಕೊರೋನಾ ವೈರಸ್ ರೂಪಾಂತರದ ಒಟ್ಟು19 ಪ್ರಕರಣಗಳಲ್ಲಿ 16 ಪ್ರಕರಣಗಳು ಯಾವುದೇ ಓಮ್ರಿಕಾನ್ ಲಕ್ಷಣ ರಹಿತವಾಗಿವೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಮಂಗಳವಾರ ಹೇಳಿಕೆ ನೀಡಿದ್ದಾರೆ.
ಕೋವಿಡ್-19 ರೂಪಾಂತರ ಓಮಿಕ್ರಾನ್ ಸೋಂಕಿನ ಮುಖ್ಯ ಲಕ್ಷಣಗಳು:
1. ಗಂಟಲು ಕೆರೆತ
2. ಮೈ-ಕೈ ನೋವು, ತಲೆನೋವು, ಆಯಾಸ,
3. ಹೆಚ್ಚಿನ ತಾಪಮಾನ
4. ಹೊಸ, ನಿರಂತರ ಕೆಮ್ಮು
5. ನಿಮ್ಮ ವಾಸನೆ ಅಥವಾ ರುಚಿಯ ಗ್ರಹಿಕೆ ನಷ್ಟ
ಕೊರೊನಾ ಮೊದಲ ಬಲಿ ಕರ್ನಾಟಕ, ಕೇರಳದಲ್ಲಿ ದೇಶದ ಮೊದಲ ಕೊರೊನಾ ಸೋಂಕು ಪತ್ತೆಯಾದರೆ, ರಾಜ್ಯದ ಕಲಬುರಗಿಯ ವ್ಯಕ್ತಿ ದೇಶದಲ್ಲೇ ಕೊರೊನಾಗೆ ಬಲಿಯಾದ ಮೊದಲನೆಯವರಾಗಿದ್ದರು. ಕೊರೊನಾದ ಅಪಾಯಕಾರಿ ರೂಪಾಂತರವಾದ ಓಮಿಕ್ರಾನ್ ಕರ್ನಾಟಕದಲ್ಲೇ ಮೊದಲು ಪತ್ತೆಯಾಗಿ ಕನ್ನಡಿಗರಲ್ಲಿ ಆತಂಕ ಮೂಡಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top