fbpx
ಐಪಿಎಲ್

ಐಪಿಎಲ್ ಬಿಡ್ಡಿಂಗ್ ಯಾವಾಗ ಎನ್ನುವ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಕೊನೆಗೂ ಒಂದು ಡೇಟ್ ಫಿಕ್ಸ್ ಆಯ್ತು

ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿರುವ ಐಪಿಎಲ್ ಬಿಡ್ಡಿಂಗ್ ಯಾವಾಗ ಎನ್ನುವ ಪ್ರಶ್ನೆಗೆ ಕೊನೆಗೂ ಪೂರ್ಣ ವಿರಾಮ ಬಿದ್ದಿದೆ. ಅದೂ ಈ ಬಾರಿ ಬೆಂಗಳೂರಿನಲ್ಲೇ ನಡೆಯಲಿದೆ ಎನ್ನುವ ಮಾಹಿತಿಯನ್ನು ಬಿಸಿಸಿಐ ಅಧಿಕಾರಿಯೊಬ್ಬರು ಹೊರ ಹಾಕಿದ್ದಾರೆ. ಈ ಸಲ ಫೆಬ್ರವರಿ 7 ಮತ್ತು 8 ರಂದು ಈ ಮಹಾ ಹರಾಜು ಪ್ರಕ್ರಿಯೆ ನಡೆಯಲಿದೆ. ಕೊರೋನ ಅಡ್ಡಿಗಳು ಇಲ್ಲವಾಗಿದ್ದಲ್ಲಿ ಇಷ್ಟೊತ್ತಿಗಾಗಲೇ ಹರಾಜು ಪ್ರಕ್ರಿಯೆ ನಡೆದಿರಬೇಕಿತ್ತು. ಆದರೆ ಅವೆಲ್ಲವೂ ಪೂರ್ವ ನಿರ್ಧರಿತ ಆಲೋಚನೆಗಳನ್ನು ತಲೆಕೆಳಗಾಗಿಸಿತ್ತು. ಇದರಿಂದಾಗಿ ಬಿಸಿಸಿಐ ಕಳೆದ ಒಂದಿಷ್ಟು ದಿನಗಳಿಂದ ಈ ಪ್ರಕ್ರಿಯೆಯನ್ನು ಮುಂದುವರೆಸುತ್ತಾ ಬಂದಿತ್ತು. ಅಂತು ಕೊನೆಗೆ ಒಂದು ದಿನಾಂಕವನ್ನು ಅದು ಬಿಡುಗಡೆಗೊಳಿಸಿದೆ.

ಕೊರೋನಾ ಸ್ಥಿತಿ ನಿಯಂತ್ರಣದಲ್ಲಿದ್ದರೆ ಈ ಬೃಹತ್ ಹರಾಜು ಪ್ರಕ್ರಿಯೆಯನ್ನು ಭಾರತದಲ್ಲಿಯೇ ನಡೆಸಲಾಗುವುದು. ಎಪ್ರಿಲ್ 7 ಮತ್ತು ೮ರಂದು ನಡೆಯಲಿರುವ ಈ ಹರಾಜು ಪ್ರಕ್ರಿಯೆಯನ್ನು ಬೆಂಗಳೂರಿನಲ್ಲೇ ನಡೆಸಬೇಕೆಂದು ನಿರ್ಧರಿಸಿದ್ದೇವೆ ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವರ್ಷದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸಂಜೀವ್ ಗೋಯೆಂಕಾ ಮಾಲಿಕತ್ವದ ಲಕ್ನೋ ಮತ್ತು ವೆಂಚರ್ ಕ್ಯಾಪಿಟಲ್ ಸಿವಿಸಿ ಮಾಲಿಕತ್ವದ ಅಹಮದಾಬಾದ್ ತಂಡಗಳು ಹೊಸದಾಗಿ ಆಟಗಾರರನ್ನು ಸೇರಿಸಿಕೊಳ್ಳಲಿದೆ. ಇದೂ ಕೂಡ ಒಂದಿಷ್ಟು ಕುತೂಹಲಕ್ಕೆ ಎಡೆ ಮಾಡಿ ಕೊಟ್ಟಿದೆ.ಅಹಮದಾಬಾದ್ ತಂಡವನ್ನು ಖರೀದಿಸಿರುವ ವೆಂಚರ್ ಕ್ಯಾಪಿಟಲ್ ಸಿವಿಸಿ ಕಂಪೆನಿಯು ಹಲವಾರು ಬೆಟ್ಟಿಂಗ್ ಕಂಪನಿಗಳ ಜೊತೆ ತನ್ನ ಷೇರುಗಳನ್ನು ಹಂಚಿಕೊAಡಿರುವ ಆರೋಪ ಕೇಳಿ ಬಂದಿತ್ತು. ಬಿಸಿಸಿಐ ಇದರ ಬಗ್ಗೆ ತನಿಖೆಗೆ ಆದೇಶಿಸಿರುವ ಬಗ್ಗೆಯೂ ವರದಿಯಾಗಿದೆ. ಹೊಸ ಫ್ರಾಂಚೈಸಿಗಳು 33ಕೋಟಿ ವೆಚ್ಚದಲ್ಲಿ ತಮಗೆ ಬೇಕಾದ ಮೂವರು ಆಟಗಾರರನ್ನು ಖರೀದಿಸುವ ಆಯ್ಕೆ ಇದೆ. ಮೊದಲ ಆದ್ಯತೆ ಪಡೆದ ಆಟಗಾರ ೧೫ಕೋಟಿ ಪಡೆದುಕೊಂಡರೆ ಎರಡನೆಯ ಆದ್ಯತೆಯ ಆಟಗಾರ 11 ಕೋಟಿ ಹಾಗೂ ಮೂರನೆಯ ಆದ್ಯತೆಯ ಆಟಗಾರ 7 ಕೋಟಿಗಳನ್ನು ಪಡೆದುಕೊಳ್ಳಲಿದ್ದಾನೆ. ಈ ಮೂವರ ಪೈಕಿ ಇಬ್ಬರು ಭಾರತೀಯರಾಗಬೇಕಾಗಿರುವುದು ಕಡ್ಡಾಯ. ಯಾವ್ಯಾವ ಆಟಗಾರರು ಎಷ್ಟಕ್ಕೆ ಮಾರಾಟವಾಗುತ್ತಾರೆ ಎಂಬುದನ್ನು ಬಿಡ್ಡಿಂಗ್ ನಿರ್ಧರಿಸಬೇಕಷ್ಟೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top