fbpx
ಸಮಾಚಾರ

ಎಲ್ಲಿಂದ ಬರುತ್ತಿದೆ ದೇಶದೊಳಗೆ ಈ ಪರಿಯ ಸ್ಪೋಟಕ? ಜಮ್ಮುವಿನಲ್ಲಿ ಪತ್ತೆಯಾದ ಸೋಟಕ ನಿಷ್ಕ್ರಿಯಗೊಳಿಸಿ ಅನಾಹುತ ತಪ್ಪಿಸಿದ ಭದ್ರತಾ ಸಿಬ್ಬಂದಿ

ದೇಶದಲ್ಲಿ ಆಗಾಗ ಸ್ಪೋಟಕಗಳು ಪತ್ತೆಯಾಗುವ ಅಪರೂಪದ ಘಟನೆ ನಡೆಯುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಒಂದಿಷ್ಟು ಸಾಮಾನ್ಯ ಅನ್ನುವಂತಾಗುತ್ತಿದೆ. ಎರಡು ದಿನಗಳ ಹಿಂದಷ್ಟೇ ಛತ್ತೀಸ್ ಗಢದಲ್ಲಿ ನಕ್ಸಲರು ಐಇಡಿ ಸ್ಪೋಟಿಸಿದ್ದರು. ಈಗ ಜಮ್ಮುವಿನಲ್ಲಿ ಸ್ಪೋಟಕ ಪತ್ತೆಯಾಗಿ ಆತಂಕ ಹೆಚ್ಚಿಸಿದೆ.

ಏನಿದು ಘಟನೆ ?
ಜಮ್ಮು ಮತ್ತು ಕಾಶ್ಮೀರದ ವಾನ್‌ಪೋರಾದ ಶ್ರೀನಗರ ರಸ್ತೆಯಲ್ಲಿ ಇರಿಸಲಾಗಿದ್ದ ಸುಮಾರು ೫ ಕೆಜಿ ತೂಕದ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಯನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿ ನಾಶಪಡಿಸಿದ್ದಾರೆಂದು ವರದಿಯಾಗಿದೆ. ಇದರಿಂದಾಗಿ ಭಾರೀ ದುರಂತವೊoದು ತಪ್ಪಿದೆ. ಗುಪ್ತಚರ ಮಾಹಿತಿಯನ್ವಯ ಭಯೋತ್ಪಾದಕರು ರಸ್ತೆಯಲ್ಲಿ ಐಇಡಿ ಅಳವಡಿಸಿದ್ದಾರೆ ಎನ್ನುವ ಮಾಹಿತಿ ಬಂದಿತ್ತು. ಈ ಮಾಹಿತಿಯನ್ವಯ ಅರಸಿ ಹೋದ ಪುಲ್ವಾಮಾ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು.ಬಳಿಕ ಬಾಂಬ್ ಪತ್ತೆಯಾಯ್ತು. ಬಳಿಕ ಅದನ್ನು ನಿಯಂತ್ರಿತ ಸ್ಫೋಟದ ಮೂಲಕ ಸ್ಥಳದಲ್ಲೇ ನಾಶಪಡಿಸಲಾಯಿತು.

“ಐಇಡಿ ಸುಮಾರು ೫ ಕೆಜಿ ತೂಕವಿತ್ತು ಮತ್ತು ಕಂಟೈನರ್‌ನಲ್ಲಿ ಜೋಡಿಸಲಾಗಿತ್ತು. ಪೊಲೀಸ್ ಮತ್ತು ಸೇನೆಯ ಬಾಂಬ್ ನಿಷ್ಕ್ರಿಯ ತಂಡವು ನಿಯಂತ್ರಿತ ಸ್ಫೋಟದ ಮೂಲಕ ಸ್ಥಳದಲ್ಲೇ ಐಇಡಿಯನ್ನು ನಾಶಪಡಿಸಿತು ಎಂದು ಭದ್ರತಾ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತದಲ್ಲಿ ಬಾಂಬ್ ಅಥವಾ ಸ್ಪೋಟಕಗಳನ್ನು ಎಲ್ಲೆಂದರಲ್ಲಿ ಹೇಗ್ಹೇಗೋ ಬಳಸುವಂತಿಲ್ಲ. ಆದರೂ ಇಷ್ಟು ಪ್ರಮಾಣದ ಸ್ಪೋಟಕಗಳು ಯಾವ ಕಳ್ಳ ಮಾರ್ಗ ಅರಸಿ ಬರುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಬಹಳ ದಿನಗಳ ಹಿಂದೆ ಕಾಶ್ಮೀರದ ಮನೆಗಳಲ್ಲಿ ಉಗ್ರರು ಅವಿತು ಕುಳಿತುಕೊಳ್ಳುತ್ತಾರೆಂಬ ಸುದ್ದಿ ಓಡಾಡುತ್ತಲಿತ್ತು. ಈಗ ಆ ಸಂಗತಿ ನಿಜವಾಗಿರಬಹುದೇ? ಎಂಬ ಅನುಮಾನ ಕಾಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top