fbpx
ಸಮಾಚಾರ

ಡಿಸೆಂಬರ್ 24: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಡಿಸೆಂಬರ್ 24, 2021 ಶುಕ್ರವಾರ
ವರ್ಷ : 1943 ಪ್ಲಾವ
ತಿಂಗಳು : ಮಾರ್ದಶಿರ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಪಂಚಮೀ 7:34 pm
ನಕ್ಷತ್ರ : ಮಖ 4:09 am
ಯೋಗ : ವಿಷ್ಕಂಭ 12:00 pm
ಕರಣ : ಕುಲವ 7:04 am ತೈತುಲ 7:34 pm

Time to be Avoided
ರಾಹುಕಾಲ : 10:55 am – 12:19 pm
ಯಮಗಂಡ : 3:07 pm – 4:32 pm
ದುರ್ಮುಹುರ್ತ : 8:56 am – 9:41 am, 12:41 pm – 1:26 pm
ವಿಷ : 3:25 pm – 5:07 pm
ಗುಳಿಕ : 8:06 am – 9:30 am

Good Time to be Used
ಅಮೃತಕಾಲ : 1:37 am – 3:18 am
ಅಭಿಜಿತ್ : 11:56 am – 12:41 pm

Other Data
ಸೂರ್ಯೋದಯ : 6:38 am
ಸುರ್ಯಾಸ್ತಮಯ : 6:00 pm
ರವಿರಾಶಿ : ಧನುಸ್
ಚಂದ್ರರಾಶಿ : ಸಿಂಹ

 

 

ಮೇಷ (Mesha)

ನಿಮ್ಮ ನೇರ ನುಡಿಗಳಿಂದ ಎದುರಾಳಿಯನ್ನು ಗೆಲ್ಲುವಿರಿ. ನಿಮ್ಮ ವ್ಯವಹಾರಿಕ ಜ್ಞಾನವು ನಿಮಗೆ ಉನ್ನತ ಸ್ಥಾನಮಾನವನ್ನು ಕೊಡುವುದು. ಮನಸ್ಸು ಅಧ್ಯಾತ್ಮದತ್ತ ವಾಲುವುದು. ಇದರಿಂದ ಮಾನಸಿಕ ನೆಮ್ಮದಿ ದೊರೆಯುವುದು.

 

 

ವೃಷಭ (Vrushabha)

ನಾವು ಎಷ್ಟೇ ಬುದ್ಧಿವಂತರಿದ್ದರೂ ಕೆಲವೊಮ್ಮೆ ಪರರ ಹಿತನುಡಿಗಳನ್ನು ಆಲಿಸಬೇಕಾಗುವುದು. ಇಂದು ನೀವು ಕೂಡ ಪರರ ಹಿತನುಡಿಗಳಿಗೆ ಸ್ಪಂದಿಸಿದಲ್ಲಿ ಒಳಿತಾಗುವುದು. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

 

ಮಿಥುನ (Mithuna)

ಮನೆಯಲ್ಲಿ ಸಣ್ಣಪುಟ್ಟ ಅಂತಃಕಲಹಗಳು ಸರ್ವೇಸಾಮಾನ್ಯ. ಅದಕ್ಕೂ ಮನೆಯ ವಾಸ್ತುವಿಗೂ ಸಂಬಂಧವಿಲ್ಲ. ಅನಗತ್ಯವಾಗಿ ವಾಸ್ತುವೆಂಬ ಪೆಡಂಭೂತವನ್ನು ಮನಸ್ಸಿನಲ್ಲಿ ತರಬೇಡಿ. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಆಗ ಎಲ್ಲಾ ದೇವತೆಗಳು ನಿಮ್ಮ ಕೋರಿಕೆಯನ್ನು ಈಡೇರಿಸುವರು.

 

ಕರ್ಕ (Karka)

ವಿವಾಹಯೋಗ್ಯರಿಗೆ ಗುರುಬಲ ಕೂಡಿಬಂದಿದ್ದು, ಮನೆಯಲ್ಲಿ ವಿವಾಹದ ಬಗ್ಗೆ ಮಾತುಕತೆ ನಡೆಯಲಿವೆ. ಅದರಲ್ಲಿ ಮಹತ್ತರ ಘಟ್ಟ ತಲುಪುವಿರಿ. ಮನಸ್ಸಿಗೆ ನೆಮ್ಮದಿ ಉಂಟಾಗುವುದು.

 

ಸಿಂಹ (Simha)

ಮಂಗಳಕಾರ್ಯಗಳಿಗೆ ಅಡೆತಡೆ ಉಂಟಾಗುವ ಸಾಧ್ಯತೆ. ವಿಘ್ನನಾಶಕ ಗಣಪತಿಯ ಸ್ತೋತ್ರವನ್ನು ಪಠಿಸುವುದು ಒಳ್ಳೆಯದು. ಹಿರಿಯರೊಬ್ಬರ ಸಕಾಲಿಕ ಮಧ್ಯಪ್ರವೇಶದಿಂದ ಕಾರ್ಯವು ಸುಲಲಿತವಾಗುವುದು.

ಕನ್ಯಾರಾಶಿ (Kanya)

ಇಂದು ಶುಭವಾರ್ತೆ ನಿರೀಕ್ಷಿಸಬಹುದು. ಆರೋಗ್ಯ ಉತ್ತಮ. ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು ಮನೆಗೆ ಅಲಂಕಾರ ವಸ್ತುಗಳ ಖರೀದಿ ಮಾಡುವಿರಿ.

 

ತುಲಾ (Tula)

ಹಮ್ಮಿಕೊಂಡ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವವು. ಕುಲದೇವರ ಆರಾಧನೆಯಿಂದ ಒಳಿತಾಗುವುದು. ವಿನಯಶಾಲಿಯೇ ವಿಜಯಶಾಲಿ ಎಂಬಂತೆ ಇಂದು ಆದಷ್ಟು ತಾಳ್ಮೆಯಿಂದ ವ್ಯವಹರಿಸಿ.

 

ವೃಶ್ಚಿಕ (Vrushchika)

ವಾಹನ, ನಿವೇಶನ ಖರೀದಿಸುವವರಿಗೆ ಸಕಾಲ. ವ್ಯವಹಾರದಲ್ಲಿ ಪಾರದರ್ಶಕತೆಯಿರಲಿ. ಪತ್ರ ವ್ಯವಹಾರಗಳನ್ನು ಕಾನೂನು ರೀತ್ಯ ತಪಾಸಣೆಗೆ ಒಳಪಡಿಸುವುದು ಒಳ್ಳೆಯದು. ಇಲ್ಲದಿದ್ದರೆ ಮೋಸ ಹೋಗುವ ಸಂದರ್ಭವಿರುತ್ತದೆ.

 

ಧನು ರಾಶಿ (Dhanu)

ನಿಮ್ಮ ಗಮನಕ್ಕೆ ಬಾರದೆ ಕೆಲವು ಘಟನೆಗಳು ನಿಮ್ಮ ಮನೆಯಲ್ಲಿ ಜರುಗುತ್ತಿರುವುದು ನಿಮಗೆ ಬೇಸರವನ್ನುಂಟು ಮಾಡುವುದು. ಈ ಬಗ್ಗೆ ನಂತರ ವಿಷಯ ತಿಳಿದು ನಿಮಗೆ ಸಮಾಧಾನವಾಗುವುದು.

 

ಮಕರ (Makara)

ಪ್ರಯಾಣದ ಆಯಾಸಕ್ಕೆ ವಿಶ್ರಾಂತಿ ಅಗತ್ಯ. ನಿಮ್ಮ ಸ್ನೇಹಿತರ ಸಂಸಾರವನ್ನು ಸರಿಪಡಿಸಿದ್ದಕ್ಕೆ ಪ್ರಶಂಸೆಗಳು ದೊರೆಯಲಿವೆ. ಆರ್ಥಿಕ ಮುಗ್ಗಟ್ಟು ಕಡಿಮೆಯಾಗುವುದು. ಮನಸ್ಸಿನ ಶಾಂತಿಗಾಗಿ ಕುಲದೇವತಾ ಪ್ರಾರ್ಥನೆ ಮಾಡಿ.

 

ಕುಂಭರಾಶಿ (Kumbha)

 

ದೂರದ ಊರಿನಿಂದ ಬರುವ ವಾರ್ತೆ ನಿಮ್ಮ ಮುಖದಲ್ಲಿ ಮಂದಹಾಸ ಮೂಡಿಸುವುದು. ಬಾಲ್ಯದಲ್ಲಿ ಕಳೆದ ಹಳೆಯ ನೆನಪುಗಳು ಮರುಕಳಿಸುವವು. ಸ್ನೇಹಿತರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಿ. ಮನಸ್ಸು ಹಗುರಾಗುವುದು.

 

ಮೀನರಾಶಿ (Meena)

ನಿಮಗೆ ಬರುವ ಸಲಹೆ ಸಹಕಾರಗಳನ್ನು ಸ್ವೀಕರಿಸಿ. ಆದರೆ ಪ್ರತ್ಯುತ್ತರವಾಗಿ ನೀವು ನಿಮ್ಮ ವಿಚಾರಧಾರೆಗಳನ್ನು ಹರಿಯಬಿಡದಿರಿ. ಕೆಲವೊಮ್ಮೆ ಇದರಿಂದ ಅಪಾರ್ಥಕ್ಕೆ ಎಡೆಮಾಡಿಕೊಡುವ ಸಂಧರ್ಭವಿರುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top