ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯನ್ನತ ವಿಜಯ ಎಂದೇ ಹೆಸರುವಾಸಿಯಾಗಿರುವ 1983ರ ವಿಶ್ವಕಪ್ ಟೀಮ್ ಇಂಡಿಯಾ ಗೆಲುವಿನ ರೋಚಕತೇ ಕುರಿತಾದ ಸಿನಿಮಾ ’83’. ಮೊದಲ ಬಾರಿಗೆ ವಿಶ್ವಕಪ್ ಎತ್ತಿಹಿಡಿದ ರೋಚಕ ಘಟನೆ ಕುರಿತಾದ ಸಿನಿಮಾ ‘83’ 2020ರಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಕೋವಿಡ್-19 ಭೀತಿ ಹಾಗೂ ಲಾಕ್ಡೌನ್ನಿಂದಾಗಿ ‘83’ ಸಿನಿಮಾ 2020ರಲ್ಲಿ ರಿಲೀಸ್ ಆಗಲಿಲ್ಲ. ಎಲ್ಲಾ ಅಡತಡೆಗಳ ಮದ್ಯೆ ಕೊನೆಗೂ ಇಂದು ಸಿನಿಮಾ ಬಿಡುಗಡೆಗೊಂಡಿದೆ.
Kanhaiya Kumar protest #Boycott83 in front of Depression queen
Do you remember any last time Deepika Padukone visited Indian Soldiers. She said her father was from army when she was caught in DRUG CASE#BoycottBollywood pic.twitter.com/i7U7LZtSjw
— Nitika Singh🦋🇮🇳 (@itsNitikaSingh) December 24, 2021
ಇಂಥಾ 83 ಚಿತ್ರವನ್ನು ಕಣ್ಣುತುಂಬಿಕೊಳ್ಳಲು ಕಾತುರರಿಂದ ಕಾಯುತ್ತಿರುವ ಅನೇಕ ಸಿನಿಪ್ರಿಯರ ಮದ್ಯೆ ಕೆಲವು ಕೇಳಸಿಲ್ಲದೇ ಕಿಡಿಗೇಡಿಗಳು ಸಿನಿಮಾ ವಿರುದ್ಧ ನೆಗಿಟಿವ್ ಪ್ರಚಾರಕ್ಕಿಳಿದಿದ್ದಾರೆ. ‘83’ ಸಿನಿಮಾವನ್ನು ಬಹಿಷ್ಕರಿಸುವಂತೆ ಒಂದಷ್ಟು ಜನರು ಅಭಿಯಾನ ನಡೆಸುತ್ತಿದ್ದಾರೆ. #Boycott83 ಹ್ಯಾಶ್ ಟ್ಯಾಗ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರವನ್ನು ವಿರೋಧಿಸಲಾಗುತ್ತಿದೆ.
ಈ ಸಿನಿಮಾದಲ್ಲಿ ಕಪಿಲ್ ದೇವ್ ಪತ್ನಿಯ ಪಾತ್ರವನ್ನು ದೀಪಿಕಾ ಪಡುಕೋಣೆ ನಿಭಾಯಿಸಿದ್ದಾರೆ. ಪ್ರತಿ ಬಾರಿ ಅವರ ಸಿನಿಮಾಗಳು ರಿಲೀಸ್ ಆದಾಗ ಒಂದಷ್ಟು ಜನರು ಕಿಡಿಕಾರುತ್ತಾರೆ. ಈ ಹಿಂದೆ ಅವರು ಜೆಎನ್ಯು ಕ್ಯಾಂಪಸ್ಗೆ ಭೇಟಿ ನೀಡಿದ್ದೇ ಅದಕ್ಕೆ ಕಾರಣ. ಈಗ ಮತ್ತೆ ಜೆಎನ್ಯು ವಿಚಾರವನ್ನು ಎಳೆದುತಂದು ‘83’ ಸಿನಿಮಾ ಬಹಿಷ್ಕರಿಸುವಂತೆ ಕೆಲವರು ಅಭಿಯಾನ ಮಾಡುತ್ತಿದ್ದಾರೆ.
How much awareness you can create for #Boycott83 ? #BoycottBollywood pic.twitter.com/hgvzPWmzBy
— Nitika Singh🦋🇮🇳 (@itsNitikaSingh) December 18, 2021
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
