ಕಿಚ್ಚ ಸುದೀಪ್ ಅವರು ಸಿನಿಮಾಗಳ ಹೊರತಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುವುದರಲ್ಲಿಯೂ ಹೆಸರಾದವರು. ಸಿನಿಮಾ ಕ್ಷೇತ್ರದ ನಟರು ಸೇರಿದಂತೆ ತಂತ್ರಜ್ಞರು ಸಂಕಷ್ಟದಲ್ಲಿದ್ದಾಗ ಅವರ ನೆರವಿಗೆ ಧಾವಿಸೋ ಕಿಚ್ಚ, ಅಭಿಮಾನಿಗಳು ಕಷ್ಟದಲ್ಲಿದ್ದಾಗಲೂ ಅವರ ಸಹಾಯಕ್ಕೆ ಬಂದು ನಿಲ್ಲುತ್ತಾರೆ. ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಸುದೀಪ್ ಅನೇಕ ಸಮಾಜಮುಖಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
“ನಮ್ಮನೆ ಮದುವೆ”
Watch full video : https://t.co/80s9G3W7OC
ಸಂಪರ್ಕಿಸಿ :
ಕೊನೆಯ ದಿನಾಂಕ : 02 ಜನೇವರಿ 2022
ಸಹಾಯವಾಣಿ ಸಂಖ್ಯೆ : 6360334455ಸದಾ ನಿಮ್ಮೊಂದಿಗೆ, #KSCS#ಮೊದಲು_ಮಾನವನಾಗು@KicchaSudeep @iampriya06 @Kitty_R7 #KicchaSudeep pic.twitter.com/QqvgAmzJ4T
— ಮೊದಲು ಮಾನವನಾಗು (KSCS) (@KSCS__Official) December 19, 2021
ಸುದೀಪ್ ಚಾರಿಟೇಬಲ್ ಸೊಸೈಟಿ ಆರಂಭಗೊಂಡು ಫೆಬ್ರವರಿಗೆ ಐದು ವರ್ಷಗಳು ಆಗುತ್ತಿದ್ದು ಐದನೇ ವರ್ಷ ಪೂರ್ಣಗೊಳಿಸಿದ್ದಕ್ಕೆ ಬಡವರಿಗೆ ಮದುವೆ ಮಾಡಿಸುವ ಪುಣ್ಯ ಕಾರ್ಯಕ್ಕೆ ಮುಂದಾಗಿದೆ. ಐದು ಜೋಡಿಗಳಿಗೆ ಸರಳವಾಗಿ ವಿವಾಹ ಮಾಡಲು ‘ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ’ ಯೋಜನೆ ರೂಪಿಸಿಕೊಂಡಿದ್ದು. ಆರ್ಥಿಕವಾಗಿ ಅಶಕ್ತರು ಸಾಮೂಹಿಕ ವಿವಾಹವಾಗಲು ಅರ್ಜಿ ಹಾಕಿಕೊಂಡಲ್ಲಿ, ನಿಯಮಗಳಿಗೆ ಅನ್ವಯವಾಗಿ ಅವರ ವಿವಾಹವನ್ನು ಫೆಬ್ರವರಿ ತಿಂಗಳಲ್ಲಿ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯು ನೆರವೇರಿಸುತ್ತದೆ.
ಆರ್ಥಿಕವಾಗಿ ಶಕ್ತಿಯಿಲ್ಲದ ಬಡವರು ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ಗೆ ಅರ್ಜಿ ಹಾಕಬೇಕು. ಜನವರಿ 2ರ ಒಳಗೆ ಅರ್ಜಿ ತಲುಪಬೇಕು. ನಂತರ ಅವುಗಳನ್ನು ಸೊಸೈಟಿಯವರು ಕಾನೂನು ರೀತ್ಯಾ ಪರಿಶೀಲಿಸಿ ಎಲ್ಲವೂ ಸರಿಯಿದ್ದರೆ ಮದುವೆ ಮಾಡಿಸುತ್ತಾರೆ. ಫೆಬ್ರವರಿ 14ರ ಪ್ರೇಮಿಗಳ ದಿನದಂದು ಮದುವೆ ನಡಯಲಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
