fbpx
ಸಮಾಚಾರ

“ನಾನು ತಪ್ಪು ಮಾಡಿಲ್ಲ: ನನ್ನ ಮಗುವಿಗೆ ತಂದೆ ಇದ್ದಾರೆ” ಸಂಸದೆ ನುಸ್ರತ್ ಜಹಾನ್‌ ನೋವಿನ ಮಾತು

ಟಿಎಂಸಿ ಪಕ್ಷದ ಸಂಸದೆ ನಟಿ ನುಸ್ರತ್ ಜಹಾನ್ ಅವರು ಮಗುವಿಗೆ ಜನ್ಮ ನೀಡಿದ ವಿಚಾರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಯೂಟ್ಯೂಬ್‌ ಚಾನೆಲ್ ವೊಂದರ ಕಾರ್ಯಕ್ರಮದಲ್ಲಿ ಸಂದರ್ಶನ ನೀಡಿದ್ದ ನುಶ್ರುತ್ ಈ ಕುರಿತು ಪ್ರತಿಕ್ರಿಯಿಸಿದ್ದು ‘ನನ್ನ ಮಗ ಯಶಾನ್‌ಗೆ ತಂದೆ ಇದ್ದಾರೆ’ ಎಂದು ನೋವಿನ ಮಾತುಗಳನ್ನಾಡಿದ್ದಾರೆ.

‘ತಾಯಿಯಾಗುವ ನನ್ನ ನಿರ್ಧಾರವು ನನ್ನ ಸ್ವಬುದ್ಧಿಯಿಂದ ಕೂಡಿದೆ. ಈ ಬಗ್ಗೆ ನನಗೆ ಹೆಮ್ಮೆಯೂ ಇದೆ. ನಾನು ತಪ್ಪು ಮಾಡಿಲ್ಲ ನನ್ನ ಮಗುವಿಗೆ ತಂದೆ ಇದ್ದಾರೆ’ ಎಂದು ನುಸ್ರತ್‌ ತಿಳಿಸಿದ್ದಾರೆ. ಸೆ. 26 ರಂದು ನುಸ್ರತ್ ಜಹಾನ್ ಕೋಲ್ಕತ್ತದ ಭಾಗೀರಥಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

ನುಸ್ರತ್ ಮಗುವಿನ ಜನನದ ಮಾಹಿತಿಯಲ್ಲಿ ಮಗುವಿನ ಹೆಸರು ಯಶಾನ್ ಹಾಗೂ ತಂದೆ ಹೆಸರು ದೇಬಾಸಿಸ್ ದಾಸ್‌ ಗುಪ್ತಾ (ಯಶ್‌ ದಾಸ್‌ ಗುಪ್ತಾ) ಎಂದು ಉಲ್ಲೇಖಿಸಿರುವುದು ತಿಳಿದು ಬಂದಿತ್ತು. ನುಸ್ರತ್ ಅವರು ನಟ ಯಶ್ ದಾಸ್‌ ಗುಪ್ತಾ ಜೊತೆ ಲಿವ್ ಇನ್– ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ.

2019ರಲ್ಲಿ ಟರ್ಕಿಯಲ್ಲಿ ಉದ್ಯಮಿ ನಿಖಿಲ್ ಜೈನ್ ಅವರೊಂದಿಗೆ ನುಸ್ರತ್‌ ಜಹಾನ್‌ ವಿವಾಹವಾಗಿದ್ದರು. ಅದರ ಮದುವೆ ಮಾಡಿಕೊಂಡ ಕೆಲವೇ ದಿನಗಳಲ್ಲಿ ಇಬ್ಬರ ಸಂಸಾರದಲ್ಲಿ ಕಲಹವೇ ಎದ್ದಿತ್ತು. ನಂತರ ದಂಪತಿಗಳು ಬೇರೆ ಬೇರೆಯಾಗಿದ್ದರು. ವಿಚ್ಛೇದನದ ನಂತರ ನುಶ್ರುತ್ ನಟ ಯಶ್ ದಾಸ್ ಗುಪ್ತ ಜೊತೆ ಲಿವಿಂಗ್ ರಿಲೇಷನ್ ನಲ್ಲಿ ಇದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top