fbpx
ಸಮಾಚಾರ

ವರ್ಷದ 365 ದಿನವೂ 24 ಗಂಟೆ ಕಾರ್ಯ ನಿರ್ವಹಿಸುತ್ತಿದೆ ಈ ಸರ್ಕಾರೀ ಕಚೇರಿ

ಸರ್ಕಾರೀ ಇಲಾಖೆಯ ಕಚೇರಿಗಳು ಅಂದ್ರೆ ಅವು ಒಂದು ರೀತಿಯ ಅವ್ಯವಸ್ಥೆಯ ಆಗರ, ಸೋಂಬೇರಿಗಳ ಕೊಂಪೆ, ಲಂಚಕೋರರ ಆಸ್ಥಾನ ಎಂಬ ಇತ್ಯಾದಿ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿವೆ. ಹಾಗೆ ಸರ್ಕಾರೀ ಕಚೇರಿಗಳು ಯಾವುದೇ ಕೆಲ್ಸಗಳು ತ್ವರಿತಗತಿಯಲ್ಲಿ ನಡೆಯೋಲ್ಲ, ಅಲ್ಲಿನ ಸಿಬ್ಬಂದಿಗಳಿಗೆ ಸಮಯಪ್ರಜ್ಞೆ ಇರೋದಿಲ್ಲ, ಕೆಲಸದ ವೇಳೆಯಲ್ಲಿ ಹರಟೆ ಹೊಡೆದು ಕಾಲ ಕಳೆಯುತ್ತಾರೆ, ಶ್ರದ್ದೆಯಿಂದ ಕೆಲಸ ಮಾಡುವುದಿಲ್ಲ ಎಂಬ ಸಾಮಾನ್ಯ ಆರೋಪಗಳು ಕೂಡ ಸರ್ಕಾರೀ ಕಚೇರಿಗಳ ಮೇಲೆ ಇವೆ. ಆದರೆ ಇಲ್ಲೊಂದು ಸರ್ಕಾರೀ ಕಚೇರಿ ಇವೆಲ್ಲಾ ಆರೋಪಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದೆ,. ಹೌದು, ವರ್ಷದ 365 ದಿನವೂ 24 ಗಂಟೆ ಕಾರ್ಯ ನಿರ್ವಹಿಸುವ ಮೂಲಕ ಈ ಕಚೇರಿಗೆ ನಾಗರಿಕರಲ್ಲಿ ಮೆಚ್ಚುಗೆ ಗಳಿಸಿದೆ.

ಸಾರ್ವಜನಿಕರಲ್ಲಿ ಈ ಪರಿ ಪ್ರಶಂಸೆ ಗಿಟ್ಟಿಸಿಕೊಂಡಿರುವುದು ‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ’ ಕಚೇರಿಯ ಪಬ್ಲಿಕ್ ಕಾಲ್ ಸೆಂಟರ್. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಇಟ್ಟುಕೊಂಡು ನಿರ್ವಹಿಸುತ್ತಿರುವ ‘ಅಲ್ಪಸಂಖ್ಯಾತರ ಕಲ್ಯಾಣ’ ಇಲಾಖೆಯ ಕಚೇರಿ ಸಿಎಂ ಘನತೆಯನ್ನು ಹೆಚ್ಚು ಮಾಡುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭಾನುವಾರ, ಸಾರ್ವಜನಿಕ ರಜಾದಿನ ಹೇಗೆ ಯಾವುದೇ ವಿಶೇಷವಿದ್ದರೂ ಕೆಲಸ ನಿಲ್ಲದ ರೀತಿಯಲ್ಲಿ ಯೋಜನೆ ರೂಪಿಸಿ ಪ್ರತಿ ದಿನವೂ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿದೆ.

ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಕಾರ್ಯದರ್ಶಿ ಐಎಎಸ್ ಅಧಿಕಾರಿ ಮಣಿವಣ್ಣನ್ ಮತ್ತು ಇಲಾಖೆಯ ನಿರ್ದೇಶಕರಾದ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ’ಯ ಕಾರ್ಯವೈಖರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆನ್ನೆ (ಭಾನುವಾರ) ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸಾಮಾನ್ಯ ಕನ್ನಡಿಗ ಸಂಘಟನೆ ಮಾಡಿದ್ದ ಒಂದು ಟ್ವೀಟ್ ಗೆ ತಕ್ಷಣವೇ ಪ್ರತಿಕ್ರಿಯಿಸುವ ಮೂಲಕ ‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ’ ನೆಟ್ಟಿಗರ ಮನಗೆದ್ದಿದೆ.

 

 

ಸಮಾನ್ಯ ಕನ್ನಡಿಗ ಟ್ವೀಟ್ ನಲ್ಲಿ ಏನಿತ್ತು?
ಬೆಳಗಾವಿ ಜೈನ ಬಸದಿ ಮುಂದೆ ಇರುವ ಪವಿತ್ರ ಸಹಸ್ರಕೂಟ ಬಗ್ಗೆ ಇಲಾಖೆ ತೋರುತ್ತಿರುವ ನಿರ್ಲಕ್ಷತೆಯ ಬಗ್ಗೆ ಸಾಮಾನ್ಯ ಕನ್ನಡಿಗ ಸಂಘಟನೆ ಟ್ವೀಟ್ ಮಾಡಿತ್ತು.. ಜೈನ ಬಸದಿ ಮುಂದೆ ಇರುವ ಪವಿತ್ರ ಸಹಸ್ರಕೂಟದ ಫೋಟೋವನ್ನು ಹಂಚಿಕೊಂಡು ಅಧಿಕಾರಿಗಳ ಗಮನ ಸೆಳೆಯುವ ಕೆಲಸ ಮಾಡಿತ್ತು. “ಇದು ಬೆಳಗಾವಿ ಕೋಟೆಯ ಆವರಣದಲ್ಲಿ ಇರುವ ಬಸದಿ ಮುಂದೆ ಇರುವ ಸಹಸ್ರಕೂಟ ಜಿನಬಿಂಬ. ಅದನ್ನು ನೆಲದ ಮೇಲೆ ಇಟ್ಟಿದ್ದಾರೆ. ಅಲ್ಲಿಗೆ ಬರುವ ಪ್ರವಾಸಿಗರು ಅದರ ಪಕ್ಕದಲ್ಲಿ ಕುಳಿತು ಹರಟೆ ಹೊಡೆಯುತ್ತ ಕೆಲವೊಮ್ಮೆಅಲ್ಲಿ ಉಗಳುತ್ತಾರೆ. ಅದನ್ನು ಒಂದು ಕಲಾಕೃತಿ ಎಂಬಂತೆ ವರ್ತಿಸುತ್ತಾರೆ. ಜೈನ ಸಮುದಾಯದ ಅನೇಕರು ಭೇಟಿ ನೀಡಿದರೂ ಅದರತ್ತ ಗಮನ ಹರಿಸದ ಮತ್ತು ಅದನ್ನು ಒಂದು ಪೀಠದಮೇಲೆ ಇಡಬೇಕೆಂಬುದು ಸಂಬಂಧಪಟ್ಟ ಇಲಾಖೆಗೆ ತಿಳಿಸದೆ ಸರಿಯಾದ ಕ್ರಮ ತೆಗೆದುಕೊಳ್ಳದೆ ಇರುವುದು ಸರಿಯಿಲ್ಲ” ಎಂದು ಆ ಪೋಸ್ಟರ್ ಮೇಲೆ ಬರೆದಿತ್ತು.

ಜೈನ ಬಸದಿ ಮುಂದೆ ಇರುವ ಪವಿತ್ರ ಸಹಸ್ರಕೂಟದ ಅವಸ್ಥೆಯ ಬಗ್ಗೆ ಫೋಟೋ ಸಮೇತ ಟ್ವೀಟ್ ಮಾಡಿದ್ದ ಸಾಮಾನ್ಯ ಕನ್ನಡಿಗ ಸಂಘಟನೆ “ಭಾರತೀಯ ಪುರಾತತ್ವ ಇಲಾಖೆ ಮತ್ತು ಭೂ ಸೇನೆ ಸೇನಾನೆಲೆ ಸರಹದ್ದಿನಲ್ಲಿ ಇರುವ ಬೆಳಗಾವಿ ಜೈನ ಬಸದಿಯಲ್ಲಿ ಹಿರಿಯರ ಸಲಹೆ ಪಡೆದು ಸಂಬಂಧ ಪಟ್ಟ ಇಲಾಖೆಗೆ ಒಂದು ಕಟ್ಟೆಯನ್ನು ಕಟ್ಟಿ ಅದರ ಮೇಲೆ ಈ ಜಿನಬಿಂಬ ಇಡುವಂತೆ ವ್ಯವಸ್ಥೆ ಮಾಡಲು ಅನುಮತಿ ನೀಡಿ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿತ್ತು. ಟ್ವೀಟ್ ನಲ್ಲಿ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಅವರನ್ನು ಟ್ಯಾಗ್ ಮಾಡಲಾಗಿತ್ತು..

 

 

ಇಲಾಖೆಯ ಪ್ರತಿಕ್ರಿಯೆ:
ಸಾಮಾನ್ಯ ಕನ್ನಡಿಗ ಸಂಘಟನೆ ಈ ಟ್ವೀಟ್ ಆಡಿದ ಕೆಲವೇ ಹೊತ್ತುಗಳಲ್ಲಿ ‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ’ಯ ಕಾರ್ಯದರ್ಶಿ ಮಣಿವಣ್ಣನ್ ಅವರು ಸ್ಪಂದಿಸಿದ್ದಾರೆ. ಜೊತೆಗೆ ಈ ಬಗ್ಗೆ ಕೊಡಲೇ ಗಮನಹರಿಸುವಂತೆ ಇಲಾಖೆಯ ಸಿಬ್ಬಂದಿಗೆ ನಿರ್ದೇಶಿಸಿದ್ದಾರೆ. “ದಯವಿಟ್ಟು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶಕರನ್ನು ಕೋರುತ್ತೇನೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಈ ಬಗ್ಗೆ ಕೈಗೊಂಡ ಕ್ರಮದ ವರದಿಯನ್ನು ಕಳುಹಿಸಿ. ” ಎಂದು ಮಣಿವಣ್ಣನ್ ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ’ಯ ಅಧಿಕೃತ ಟ್ವಿಟರ್ ಖಾತೆಯನ್ನು ಉಲ್ಲೇಖಿಸಿಸಿದ್ದರು.

ಮಣಿವಣ್ಣನ್ ಅವರ ನಿರ್ದೇಶನಕ್ಕೆ ‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ’ಯ ಅಧಿಕೃತ ಟ್ವಿಟರ್ ಖಾತೆಯು ಸಹ ಬಹುಬೇಗನೆ ಪ್ರತಿಕ್ರಿಯೆ ನೀಡಿದೆ. “ಗಮನಿಸಿದ್ದೇವೆ ಸರ್. ನಿಮ್ಮ ನಿರ್ದೇಶನವನ್ನು ನಾವು ಅನುಸರಿಸುತ್ತೇವೆ.’ ಎಂದು ಪ್ರತಿಕ್ರಿಯೆ ನೀಡಿದೆ. ಕ್ರಿಸ್ ಮಸ್ ರಜೆ, ಭಾನುವಾರ ಇದ್ದರೂ ವಿಶ್ರಮಿಸದೇ ಕರ್ತವ್ಯ ಪ್ರಜ್ಞೆ ಮೆರಿದಿರುವುದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಸರ್ಕಾರೀ ಕಚೇರಿಗಳು ಕೆಲಸವೇ ಮಾಡೋಲ್ಲ ಎಂದು ಮೂಗು ಮುರಿಯುವವರು ಕೂಡ ಶ್ಲಾಘಿಸುವ ಹಾಗೆ ‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ’ ಕಾರ್ಯ ನಿರ್ವಹಿಸುತ್ತಿರುವ ಈ ಕಚೇರಿ ಕಾರ್ಯ ನಿರ್ವಹಣೆಯ ಬೆಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top