fbpx
ಸಮಾಚಾರ

ಕೊಟ್ಟ ಮಾತಿನಂತೆ ನಡೆದುಕೊಂಡ ಅದಿತಿ ಪ್ರಭುದೇವ: ರೈತ ಹುಡುಗನನ್ನೇ ಮದುವೆ ಮಾಡಿಕೊಳ್ಳುತ್ತಿದ್ದಾರೆ ನಟಿ

ಸ್ಯಾಂಡಲ್ ವುಡ್ ಸುಂದರಿ ಅದಿತಿ ಪ್ರಭುದೇವ ಅವರು ಸೈಲೆಂಟ್​ ಆಗಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಅವರು ಹುಡಗನೊಬ್ಬನ ಜತೆ ಇರುವ ಫೋಟೋ ಹಾಕಿದ್ದಾರೆ. ಈ ಫೋಟೋದಲ್ಲಿ ಉಂಗುರ ಹೈಲೈಟ್​ ಆಗಿದೆ. ಅವರಿಗೆ ಎಲ್ಲರೂ ಶುಭಾಶಯ ಹೇಳುತ್ತಿದ್ದಾರೆ.

`ಒಂದು ಕನಸಿನಂತೆ ಈ ಕನಸು ನನಸಾಯಿತು’ ಎಂದು ಅದಿತಿ ತಮ್ಮ ಫೋಟೋದೊಂದಿಗೆ ಬರೆದುಕೊಂಡಿದ್ದಾರೆ. ಅದಿತಿ ಈ ರೀತಿ ಫೋಟೋ, ಕ್ಯಾಪ್ಷನ್ ಹಾಕುತ್ತಿದ್ದಂತೆಯೇ ಅಭಿಮಾನಿಗಳು ಲವ್ ಸಿಂಬಲ್, ಶುಭಾಶಯಗಳು, ಸೂಪರ್ ಜೋಡಿ, ನಿಮ್ಮನ್ನ ಮದುವೆಯಾಗುವ ಹುಡುಗನಾ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

ಹುಡುಗ ಯಾರು?
ವರದಿಗಳ ಪ್ರಕಾರ, ನಟಿ ಅದಿತಿ ಪ್ರಭುದೇವ ನಿಶ್ಚಿತಾರ್ಥ ಮಾಡಿಕೊಂಡಿರುವ ಹುಡುಗನ ಹೆಸರು ಯಶಸ್. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಅದಿತಿ ಪ್ರಭುದೇವ ಹಾಗೂ ಯಶಸ್ ಇದೀಗ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಅದಿತಿ ಪ್ರಭುದೇವ ಮದುವೆಯಾಗಲಿರುವ ಹುಡುಗ ಯಶಸ್ ಮೂಲತಃ ಚಿಕ್ಕಮಗಳೂರಿನವರು. ಯಶಸ್ ಕಾಫಿ ತೋಟದ ಮಾಲೀಕರೂ ಹೌದು. ರೈತರ ಕುಟುಂಬದಲ್ಲಿ ಬೆಳೆದಿರುವ ಯಶಸ್ ಅವರ ಜೊತೆ ಅದಿತಿ ಪ್ರಭುದೇವ ಸಪ್ತಪದಿ ತುಳಿಯಲಿದ್ದಾರೆ ಎಂದು ವರದಿಯಾಗಿದೆ.

ನಾನು ಮದುವೆಯಾದರೆ ರೈತ ಹುಡುಗನನ್ನೇ ಮದುವೆಯಾಗುತ್ತೇನೆ ಎಂದು ಸಿನಿಮಾವೊಂದರ ಕಾರ್ಯಕ್ರಮವೊಂದರಲ್ಲಿ ಅದಿತಿ ಹೇಳಿಕೊಂಡಿದ್ದರು. ಈಗ ಅಂದು ಹೇಳಿದಂತೆಯೇ ರೈತ ಯುವಕನ ಕೈಹಿಡಿಯುತ್ತಿದ್ದಾರೆ ಅದಿತಿ ಪ್ರಭುದೇವ.

ಮದುವೆ ಆಗೋ ಹುಡುಗ ರೈತ ಅಂದ್ರೆ ಮೂಗು ಮುರಿಯುತ್ತಾ ತಾಂತ್ರಿಕ ಕೃತಕ ಜೀವನ ಬಯಸುತ್ತಿರುವಾಗ, ಒಬ್ಬ ಹೀರೋಯಿನ್ ಆದ್ರೂ ರೈತನನ್ನು ಮದುವೆಯಾಗುತ್ತಿರುವುದು ನಿಜಕ್ಕೂ ಎಲ್ಲರು ಮೆಚ್ಚಲೇ ಬೇಕಾದ ವಿಚಾರ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top