fbpx
ಸಮಾಚಾರ

ಮತ್ತೊಂದು ಮಗುವಿಗೆ ತಂದೆಯಾದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಅವರು ತಂದೆಯಾಗಿದ್ದಾರೆ. ಪಠಾಣ್ ಅವರ ಪತ್ನಿ ಜಫಾ ಅವರು ಇಂದು ಮದ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದು ಸದ್ಯ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

 

 

ತಾವು ತಂದೆಯಾಗಿರುವ ವಿಚಾರವನ್ನು ಸ್ವತಃ ಇರ್ಫಾನ್ ಪಠಾಣ್ ಅವರೇ ತಿಳಿಸಿದ್ದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. “ಸಫಾ ಮತ್ತು ನಾನು ನಮ್ಮ ಗಂಡು ಮಗು ಸುಲೇಮಾನ್ ಖಾನ್ ಅವರನ್ನು ಸ್ವಾಗತಿಸುತ್ತೇವೆ. ಮಗು ಮತ್ತು ತಾಯಿ ಇಬ್ಬರೂ ಚೆನ್ನಾಗಿ ಮತ್ತು ಆರೋಗ್ಯವಾಗಿದ್ದಾರೆ. # ಆಶೀರ್ವಾದಗಳು” ಎಂದು ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ.

ಇರ್ಫಾನ್ ಪಠಾಣ್ ಅವರು 2016ರ ಫೆಬ್ರವರಿಯಲ್ಲಿ ಜಫಾ ಅವರನ್ನು ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದರು. ಇವರಿಬ್ಬರಿಗೆ ಈಗಾಗಲೇ ಇಮ್ರಾನ್ ಪಠಾಣ್ ಎಂಬ ಗಂಡು ಮಗು ಇದ್ದಾನೆ. ಈಗ ಈ ಪುಟ್ಟ ಕುಟುಂಬಕ್ಕೆ ಮತ್ತೊಂದು ಮಗು ಆಗಮನವಾಗಿರುವುದು ಪಠಾಣ್ ಕುಟುಂಬಕ್ಕೆ ಸಂತಸ ತಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top