fbpx
ಸಮಾಚಾರ

ಠಾಣೆ ಮೆಟ್ಟಿಲೇರಿದ ‘ರೈಡರ್’ ಚಿತ್ರ ನಿರ್ಮಾಪಕ: ಅಂಥದ್ದೇನಾಯ್ತು?

ಕಳೆದ ವಾರವಷ್ಟೇ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿರುವ ನಿಖಿಲ್ ಕುಮಾರ್ ಅಭಿನಯದ ರೈಡರ್ ಚಿತ್ರವು ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೌಟುಂಬಿಕ ಕಥಾಹಂದರ ಹೊಂದಿರುವ ರೈಡರ್ ಚಿತ್ರವು ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿ ಯಾಗಿದ್ದು ಬಾಕ್ಸಾಫೀಸ್ ನಲ್ಲಿಯೂ ಸಹ ಕಮಲ್ ಮಾಡುತ್ತಿದೆ. ಈ ಮಧ್ಯೆ ರೈಡರ್ ಚಿತ್ರದ ನಿರ್ಮಾಪಕ ಲಹರಿ ವೇಲು ಅವರು ಸೈಬರ್ ಠಾಣಾ ಮೆಟ್ಟಿಲೇರಿ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದಾರೆ.. ಅಷ್ಟಕ್ಕೂ ದೂರು ನೀಡಲು ಕಾರಣವೇನು? ಅಂತದು ಏನಾಯ್ತು? ಮುಂದೆ ಓದಿ

ಇತ್ತೀಚಿನ ಚಿತ್ರಗಳಲ್ಲಿ ಹೊಸ ಚಿತ್ರಗಳಿಗೆ ಮಾರಕವಾಗಿ ಪರಿಣಮಿಸಿರುವ ಪೈರಸಿ ಭೂತವೇ ರೈಡರ್ ಚಿತ್ರವನ್ನೂ ಕಾಡಿದೆ. ಬಿಡುಗಡೆಯಾದ ಎರಡೇ ದಿನಕ್ಕೆ ರೈಡರ್ ಚಿತ್ರದ HD ಪ್ರಿಂಟ್ ಆನ್ಲೈನ್ನಲ್ಲಿ ಲೀಕ್ ಆಗಿದೆ. ತಮಿಳ್ ರಾಕರ್ಸ್ ನಂತಹ ಕುಖ್ಯಾತ ವೆಬ್ಸೈಟ್ಗಳು ಚಿತ್ರವನ್ನು ಅಪ್ಲೋಡ್ ಮಾಡಿವೆ. ತಮ್ಮ ‘ರೈಡರ್’ ಚಿತ್ರ ಪೈರಸಿ ಆದ ಹಿನ್ನೆಲೆಯಲ್ಲಿ ನಿರ್ಮಾಪಕ ಲಹರಿ ವೇಲು ಅವರು ಸೈಬರ್ ಕ್ರೈಮ್ ಠಾಣೆಗೆ ಭೇಟಿ ನೀಡಿ ಕಿಡಿಗೇಡಿಗಳ ವಿರುದ್ಧ ದೂರು ಸಲ್ಲಿಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಲಹರಿ ವೇಲು, ‘ಸಿನಿಮಾಗಳು ಪೈರಸಿಯಾದರೆ ಯಾರು ಕೂಡ ಚಿತ್ರಮಂದಿರಕ್ಕೆ ಬರುವುದಿಲ್ಲ. ಸಾಲ ಮಾಡಿ ಬಂಡವಾಳ ಹೂಡಿ ಸಿನಿಮಾ ಮಾಡಿದ ನಿರ್ಮಾಪಕರು ಬೀದಿಗೆ ಬರುತ್ತಾರೆ. ಈ ಹಿಂದೆ ನಾನು ಸಾಕಷ್ಟುಜನ ನಿರ್ಮಾಪಕರು ತೊಂದರೆ ಅನುಭವಿಸಿದ್ದನ್ನು ನೋಡಿದ್ದೇನೆ. ಕನ್ನಡ ಸಾಕಷ್ಟುಚಿತ್ರಗಳು ಪೈರಸಿಯಾಗಿ ನಿರ್ಮಾಪಕರು ನಷ್ಟಅನುಭವಿಸಿದ್ದಾರೆ. ಕಿಡಿಗೇಡಿಗಳು ರೈಡರ್‌ ಸಿನಿಮಾವನ್ನು ಪೈರೆಸಿ ಮಾಡಿ ಟೆಲಿಗ್ರಾಂ ಆ್ಯಪ್‌ಗೆ ಲಿಂಕ್‌ ಹಾಕಿದ್ದಾರೆ. ಈ ಸಂಬಂಧ ಉತ್ತರ ವಿಭಾಗ ಡಿಸಿಪಿ ವಿನಾಯಕ ಪಾಟೀಲ್ ಅವರಿಗೆ ದೂರು ನೀಡಿದ್ದೇನೆ. ಡಿಸಿಪಿ ಅವರು ಕಿಡಿಗೇಡಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ’ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top