fbpx
ಸಮಾಚಾರ

ರಚಿತಾ ರಾಮ್ ಹಠಾತ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಆಯಾಸದಿಂದ ಬಳಲುತ್ತಿದ್ದ ನಟಿ ರಚಿತಾ ರಾಮ್ ಆಸ್ಪತ್ರೆಗೆ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದಿದ್ದರು. ಶೀತ ಹಾಗೂ ಜ್ವರ ಕಾಡುತ್ತಿದ್ದರಿಂದ ಕೂಡಲೆ ಆಸ್ಪತ್ರೆಗೆ ನಟಿ ರಚಿತಾ ರಾಮ್ ಭೇಟಿ ನೀಡಿದ್ದರು. ಇದೀಗ ಕೊಂಚ ಸುಧಾರಿಸಿಕೊಂಡಿರುವ ನಟಿ ರಚಿತಾ ರಾಮ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಚಿತಾ ರಾಮ್ ಈ ಹಿಂದೆ ಮಂಗಳೂರಿಗೆ ಹೋಗಿ ಬಂದಿದ್ದರು. ಎರಡು ದಿನಗಳ ಹಿಂದಷ್ಟೆ ಏಕ್ ಲವ್ ಯಾ ಸಿನಿಮಾದ ಪ್ರಚಾರಕ್ಕೆಂದು ಶಿವಮೊಗ್ಗಕ್ಕೆ ಹೋಗಿದ್ದರು. ಜೋಗಿ ಪ್ರೇಮ್ ನಿರ್ದೇಶನದ ಈ ಸಿನಿಮಾ ಜನವರಿ 21ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಹೀಗಾಗಿ ನಿರ್ದೇಶಕ ಪ್ರೇಮ್ ಭರ್ಜರಿ ಪ್ರಚಾರವನ್ನು ಆರಂಭಿಸಿದ್ದಾರೆ. ಇತ್ತೀಚೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಏಕ್ ಲವ್ ಯಾ ತಂಡದೊಂದಿಗೆ ಶಿವಮೊಗ್ಗಕ್ಕೆ ತೆರಳಿದ್ದರು. ಅಲ್ಲಿಂದ ವಾಪಾಸ್ ಆಗುತ್ತಿದ್ದಂತೆ ರಚಿತಾ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಚಿಕಿತ್ಸೆ ನೀಡಿದ್ದು, ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಕಳೆದ ಕೆಲ ದಿನಗಳಿಂದ ರಚಿತಾ ರಾಮ್ ನಾನ್ ಸ್ಟಾಪ್ ಶೂಟಿಂಗ್ ಮಾಡುತ್ತಿದ್ದಾರೆ. ಇದರ ಜೊತೆನೇ ಸಿನಿಮಾಗಳ ಪ್ರಚಾರದಲ್ಲಿಯೂ ತೊಡಗುತ್ತಿದ್ದಾರೆ. ಹೀಗಾಗಿ ಅತಿಯಾದ ಒತ್ತಡದಿಂದ ಆಯಾಸಕ್ಕೆ ಒಳಗಾಗಿದ್ದರು. ಆಯಾಸದ ನಡುವೆಯೇ ರಚಿತಾ ‘ಏಕ್ ಲವ್ ಯಾ’ ಸಿನಿಮಾದ ಪ್ರಚಾರಕ್ಕೆ ಶಿವಮೊಗ್ಗಕ್ಕೆ ಹೋಗಿದ್ದರು ಎನ್ನಲಾಗಿದೆ. ಹೀಗಾಗಿ ವಾಪಾಸ್ ಬೆಂಗಳೂರಿಗೆ ಮರಳುತ್ತಿದ್ದಂತೆ ಅತಿಯಾದ ಜ್ವರ ಹಾಗೂ ಶೀತದಿಂದ ಬಳಲುತ್ತಿದ್ದರು. ಹೀಗಾಗಿ ಕೂಡಲೇ ರಚಿತಾ ರಾಮ್‌ರನ್ನುಆಸ್ಪತ್ರೆಗೆ ದಾಖಲಿಸಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top