fbpx
ಸಮಾಚಾರ

ಅಪ್ಪು ನೆನಪಿನಲ್ಲಿ ದೇವರಿಗೆ ಸಂದೇಶ ಬರೆದ ಈ ಹಳ್ಳಿಯ ಜನ

ಕನ್ನಡದ ಮನೆಮಗನಂತಿದ್ದ ದೊಡ್ಮನೆ ಹುಡ್ಗ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿದ್ದರೂ ಅವರ ನೆನಪು ಮಾತ್ರ ಇನ್ನೂ ಶಾಶ್ವತ. ಅವರ ನೆನಪಿನಲ್ಲಿ ಅನೇಕರು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಚಿತ್ರರಂಗದಿoದಾಚೆಗೂ ಅಪ್ಪು ಕಾಡುವುದು ಅವರು ಮಾಡುತ್ತಿದ್ದ ಬೇರೆ ಬೇರೆ ಸಾಮಾಜಿಕ ಕಾರ್ಯಗಳಿಂದ. ಅವರ ಇಚ್ಚಾಶಕ್ತಿಯಿಂದ,. ಅವರ ಸ್ವಚ್ಚ ಮನಸ್ಸಿನಿಂದ ಹೀಗೆ ಎಲ್ಲರಿಗೂ ಹತ್ತಿರವಾಗಿದ್ದ ಅಪ್ಪು ಸಡನ್ ಆಗಿ ನಮ್ಮೆಲ್ಲರಿಂದ ದೂರವಾಗಿಬಿಟ್ಟಾಗ ಅನೇಕರು ಮಮ್ಮಲ ಮರುಗಿದ್ದು ಸುಳ್ಳಲ್ಲ. ಅವರ ಅಗಲಿಕೆಯ ನೋವು ಮರೆಯಲು ಅನೇಕರು ಅಪ್ಪು ಮಾಡುತ್ತಿದ್ದ ಕೆಲಸಗಳನ್ನು ಮುಂದುವರೆಸಿಕೊoಡು ಹೋಗುವ ಭರವಸೆ ನೀಡಿ ಅಪ್ಪು ನೆನಪು ಹಸಿರಾಗಿರುವಂತೆ ನೋಡಿಕೊಂಡರು. ಒಂದಿಷ್ಟು ಜನ ಕ್ಯಾಂಟೀನ್ ಶುರು ಮಾಡಿದ್ರೆ ಅನೇಕರು ತಮ್ಮ ಮನೆಗೆ ಅಪ್ಪು ಹೆಸರಿಟ್ರು. ಇದೀಗ ಇಲ್ಲೊಂದು ಊರಿನ ಅಪ್ಪು ಅಭಿಮಾನಿಗಳು ವಿಶೇಷ ರೀತಿಯಲ್ಲಿ ಅಪ್ಪು ನೆನಪು ಮಾಡಿಕೊಂಡಿದ್ದಾರೆ.

ಪ್ರತೀ ದಿನ ಬೇರೆ ಬೇರೆ ರೀತಿಯಲ್ಲಿ ಅಪ್ಪು ನೆನಪು ಮಾಡಿಕೊಳ್ಳುವ ಅಪ್ಪು ಅಭಿಮಾನಿಗಳು ಇತ್ತೀಚೆಗೆ ವಿಜಯಪುರ ಜಿಲ್ಲೆಯಲ್ಲಿ ಹರಕೆ ತೀರಿಸುವ ಮೂಲಕ ಅಪ್ಪು ನೆನಪನ್ನು ಮತ್ತೆ ತರಿಸಿದರು. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮಂಗಳೂರಿನಲ್ಲಿ ನಡೆದ ಭೀಮಾಶಂಕರ ಮಹಾರಾಜರ ರಥೋತ್ಸವದ ವೇಳೆ ಫ್ಯಾನ್ಸ್ ಈ ವಿಶೇಷ ಹರಕೆ ಸಲ್ಲಿಸಿದ್ದಾರೆ. ಬಾಳೆಹಣ್ಣಿನಲ್ಲಿ ಮಿಸ್‌ಯೂ ಅಪ್ಪು. ಮತ್ತೆ ಹುಟ್ಟಿ ಬನ್ನಿ ಅಂತ ಬರೆದು ದೇವರ ರಥಕ್ಕೆ ಅರ್ಪಿಸಿದ್ದಾರೆ. ಆ ಮೂಲಕ ಅಪ್ಪು ಮೇಲಿನ ಅಭಿಮಾನವನ್ನು ಊರಿನ ಜನ ದೇವರಿಗೆ ತಲುಪಿಸಿದ್ದಾರೆ. ಅಭಿಮಾನಿಗಳ ಕೂಗು ದೇವರಿಗೆ ಹೀಗಾದರೂ ಕೇಳಿಸಿ ಅಪ್ಪು ಮರಲಿ ಬರಲಿ ಎಂಬುದೇ ನಮ್ಮ ಮತ್ತು ಕನ್ನಡಿಗರ ಆಶಯ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top