fbpx
ಸಮಾಚಾರ

ಶುದ್ದ ಚಿನ್ನ ಯಾವುದು ಅಂತ ಕನ್ಫ್ಯೂಷನ್ ಬೇಡ, ಈ ಅಪ್ಲಿಕೇಶನ್‌ನಲ್ಲಿ ಸಿಗಲಿದೆ ಹೈ ವಿಟ್ನೆಸ್

ಶುದ್ದ ಚಿನ್ನಗಳಿಗಾಗಿ ಭೇಟಿ ಕೊಡಿ ಎನ್ನುವ ಜಾಹೀರಾತು ನೋಡಿರುತ್ತೇವೆ. 916ಶುದ್ದ ಚಿನ್ನ ಅನ್ನುವುದೂ ನಮಗೆ ಗೊತ್ತಿದೆ. ಹೀಗಿದ್ದಾಗ ನಾವು ಚಿನ್ನದ ಅಂಗಡಿಗೆ ಭೇಟಿ ಕೊಟ್ಟಾಗ ಇದು ಅಸಲಿಯೋ ನಕಲಿಯೋ ಎಂದು ಕಂಡು ಹಿಡಿಯುವುದು ಬಹಳ ಕಷ್ಟ. ಅಕ್ಕ ಸಾಲಿಗರನ್ನು ಕರೆದೊಯ್ಯಬಹುದಾದರೂ ಸಣ್ಣ ಮಟ್ಟಿನ ಖರೀದಿಗೆ ಅದು ಅಸಾಧ್ಯದ ಮಾತು. ಹಾಗಾಗಿ ಅನೇಕರು ಈ ಶುದ್ದ ಅಶುದ್ದದ ನಡುವೆ ಸಮಸ್ಯೆ ಎದುರಿಸುತ್ತಿರುತ್ತಾರೆ.

ಲಕ್ಷಾಂತರ ರುಪಾಯಿ ಕೊಟ್ಟು ಖರೀದಿಸುವ ಚಿನ್ನದ ಅಸಲಿಯತ್ತೇನು ಎಂಬುದನ್ನು ಕಂಡು ಹಿಡಿಯಲು ಇದೀಗ ಸಾಫ್ಟವೇರ್ ಒಂದು ರೆಡಿಯಾಗಿದೆಯಂತೆ. ಇನ್ನು ಚಿನ್ನ ಖರೀದಿಗೆ ಗ್ರಾಹಕರು ಭಯ ಪಡುವ ಹಾಗಿಲ್ಲ. ಧೈರ್ಯವಾಗಿ ಆ್ಯಪ್ ನೋಡಿ ಅಸಲಿ ಚಿನ್ನ ಯಾವುದು ಅಂತ ಕಂಡು ಹಿಡಿದು ಚಿನ್ನ ಖರೀದಿಸಬಹುದಾಗಿದೆ. ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್‌ ( ಬಿ.ಐ.ಎಸ್) ಬಿಐಎಸ್ ಸ್ಟ್ಯಾಂಡರ್ಡ್ ಕೇರ್ ಅನ್ನುವ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಇದು ಹಾಲ್ಮಾರ್ಕಿಂಗ್ ಮತ್ತು ISI ಮಾರ್ಕ್ ಗಳನ್ನು ಗುರುತಿಸುವ ಅಪ್ಲಿಕೇಷನ್ ಗಳನ್ನು ಅಭಿವೃದ್ಧಿಪಡಿಸಿದೆ.

ಬಿಐಎಸ್ ಕೇರ್ ಆ್ಯಪ್ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಈ ಹೊಸ ಮಾಹಿತಿಯನ್ನು ಪರಿಚಯಿಸಿದೆ. ಇದಕ್ಕಾಗಿ ಆಭರಣದಲ್ಲಿರುವ HUDI ಸಂಖ್ಯೆಯನ್ನು ವೆರಿಫೈ HUDI ಮೂಲಕ ಪರಿಶೀಲಿಸಬಹುದು. ಜೊತೆಗೆ ISIನ ನಿಖರತೆಯನ್ನು ಪರಿಶೀಲಿಸಬಹುದು. R ಸಂಖ್ಯೆಯ ಮೂಲಕ ಎಲೆಕ್ಟ್ರಾನಿಕ್ ಐಟಂ ಅನ್ನು ಪರಿಶೀಲಿಸಬೇಕು. CRS ಅಡಿಯಲ್ಲಿ ಪರಿಶೀಲಿಸಬಹುದು. ಭಾರತೀಯ ಮಾನದಂಡ, ಪರವಾನಗಿ ಅಥವಾ ಲ್ಯಾಬ್ ಮಾಹಿತಿಗಾಗಿ ಪರಿಶೀಲನೆ ಅಗತ್ಯ. ಗ್ರಾಹಕರಿಗೆ ಉಪಕಾರವಾಗಿ ಉತ್ತಮ ಚಿನ್ನ ಖರೀದಿಸುವಂತಾಗಬೇಕು. ಮೋಸಗಾರರಿಂದ ಚಿನ್ನ ಖರೀದಿಸುವಂತಾಗಬಾರದು ಅನ್ನುವ ಕಾರಣಕ್ಕಾಗಿ ಈ ಅಪ್ಲಿಕೇಶನ್ ಹೊರತಂದಿದೆ. ಜೊತೆಗೆ ಇದರ ಮೂಲಕ ದೂರನ್ನೂ ನೀಡಬಹುದಾಗಿದೆ. ಗುಣಮಟ್ಟ ಮತ್ತು ಐಎಸ್ಐ ಮಾರ್ಕ್ ದುರ್ಬಳಕೆ ಕಂಡುಬಂದಲ್ಲಿ ಈ ಮೂಲಕ ದೂರು ಸಲ್ಲಿಸಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top