fbpx
ಸಮಾಚಾರ

ಕಂಕಣ ಭಾಗ್ಯ ಕೂಡದ ಸಲ್ಲುವನ್ನು ಕಾಡಿದ ನಟಿ ಯಾರು ಗೊತ್ತಾ?

ಸಲ್ಮಾನ್ ಖಾನ್ ಯಾವಾಗ ಮದುವೆಯಾಗುತ್ತಾರೆ ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡಿಯೇ ಇರುತ್ತದೆ. ಇಂದಿಗೆ 56 ವರ್ಷ ತುಂಬಿರುವ ಸಲ್ಲು ತಮ್ಮ ಹುಟ್ಟು ಹಬ್ಬದ ಹಿಂದಿನ ದಿನವಷ್ಟೇ ಹಾವು ಕಡಿಸಿಕೊಂಡು ಸುದ್ದಿಯಾಗಿದ್ದರು. ಹಾವು ಕಡಿತದಿಂದ ಚೇತರಿಸಿಕೊಂಡಿದ್ದ ಸಲ್ಲು ತಡರಾತ್ರಿಯಿಂದಲೇ ಹುಟ್ಟು ಹಬ್ಬವನ್ನು ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಂಡು ಬರುತ್ತಿದ್ದಾರೆ. ಪ್ರತೀ ವರ್ಷದಂತೆ ಈ ಬಾರಿಯೂ ಅವರ ಅಭಿಮಾನಿಗಳು ಸಲ್ಲುಗೆ ಮದುವೆಯಾಗುವಂತೆ ಶುಭ ಹಾರೈಸಿದ್ದಾರೆ. 56 ವರ್ಷ ತುಂಬಿದ್ದರೂ ಸಲ್ಲುಗೆ ಕಂಕಣ ಭಾಗ್ಯ ಒದಗಿ ಬರದೇ ಇದ್ದುದು ನಿಜಕ್ಕೂ ಸಲ್ಲು ಯಾಕೆ ಮದುವೆಯಾಗಿಲ್ಲ ಎನ್ನುವುದು ಅಭಿಮಾನಿಗಳನ್ನು ಕಾಡುತ್ತಲೇ ಇದೆ.

ಅಂದ್ಹಾಗೆ ಸಲ್ಲು ಯಾಕೆ ಮದುವೆಯಾಗಿಲ್ಲ ಎಂಬುದಕ್ಕೆ ಈ ಸ್ಟೋರಿಯಲ್ಲಿ ನಿಮಗೆ ಉತ್ತರ ಸಿಗಲಿದೆ.

ಆಕೆಯಿಂದಾಗಿ ಸಿಂಗಲ್ ಆದ್ರಾ ಖಾನ್ ಸಾಹೇಬ್ರು :ನಾವು ಒಂದಿಷ್ಟು ಹಿಂದೆ ಹೋಗಿ 2014ರಲ್ಲಿ ಬಿಗ್‌ಬಾಸ್ ಕಾರ್ಯಕ್ರಮವೊಂದರಲ್ಲಿ ನಡೆದ ಮಾತುಕತೆಯನ್ನು ಇಲ್ಲಿ ನೆನೆಸಿಕೊಳ್ಳಬೇಕು. ಆ ವೇಳೆ ರೇಖಾ ಅವರು ತಮ್ಮ ಸೂಪರ್ ಸಾನಿ ಚಿತ್ರದ ಪ್ರಚಾರಕ್ಕಾಗಿ ಅಲ್ಲಿಗೆ ಬಂದಿದ್ದರು. ಇದೇ ಹೊತ್ತಿಗೆ ಸಲ್ಮಾನ್ ತಾನೇಕೆ ಮದುವೆಯಾಗಿಲ್ಲ ಅನ್ನುವ ವಿಚಾರದ ಬಗ್ಗೆ ಮಾತನಾಡಿದ್ದರು. ರೇಖಾರಿಂದ ಬಹಳಷ್ಟು ಪ್ರಭಾವಿತರಾಗಿದ್ದ ಸಲ್ಮಾನ್ ಅವರನ್ನು ಅನುಸರಿಸಲು ಶುರು ಮಾಡಿದ್ದರಂತೆ. ಸಲ್ಮಾನ್ ಮತ್ತು ರೇಖಾ ಮನೆ ಅಕ್ಕ ಪಕ್ಕದಲ್ಲೇ ಇದ್ದುದರಿಂದ ರೇಖಾ ಎಲ್ಲಿ ಹೋದರೂ ಸಲ್ಮಾನ್ ಹೋಗುತ್ತಿದ್ದರಂತೆ ಮತ್ತು ಅವರಿಗಾಗಿಯೇ ಯೋಗ ತರಗತಿಯನ್ನೂ ಸೇರಿದ್ದೆ ಎಂದು ಸಲ್ಮಾನ್ ಇದೇ ಸಂದರ್ಭದಲ್ಲಿ ಹೇಳಿದ್ದರು. ನನಗೂ ಯೋಗಕ್ಕೂ ಯಾವುದೇ ಸಂಬಂಧ  ಇರಲಿಲ್ಲ, ರೇಖಾ ಅವರಿಗಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೆ. ಅವರು ನನಗಿಂತ ಹಿರಿಯರಾಗಿದ್ದರೂ, ನನ್ನ ಮನೆಯಲ್ಲೂ ನಾನು ಮದುವೆಯಾದರೆ ಅವರನ್ನೇ ಎಂದು ಹೇಳಿದ್ದೆ, ಅದಕ್ಕಾಗಿ ಇನ್ನೂ ಮದುವೆಯಾಗಿಲ್ಲ ಎಂದು ಹೇಳಿದ್ದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ರೇಖಾ ನಾನು ಅದಕ್ಕೇ ಮದುವೆಯಾಗಿಲ್ಲ ಎಂದು ತಮಾಷೆಯಾಗಿ ಹೇಳಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಸಲ್ಮಾನ್ ಮದುವೆಯಾಗದಿದ್ದರೂ ಚಿತ್ರರಂಗದಲ್ಲಿ ನಾಯಕನಾಗುವುದಕ್ಕೆ ಯಾವುದೇ ಕೊರತೆ ಎದುರಿಸಿಲ್ಲ. ಸದ್ಯ ಪೂಜಾ ಹೆಗ್ಡೆ ಅವರೊಂದಿಗೆ ಕಭಿ ಈದ್ ಕಭಿ ದೀಪಾವಳಿ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಅವರ ಜೊತೆ ಕಿಕ್-2 ಚಿತ್ರದಲ್ಲೂ ಅಭಿನಯಿಸಿದ್ದು ಅಮೀರ್ ಖಾನ್ ಅವರ ಲಾಲಾಖಾನ್ ಚಡ್ಡಾ ಚಿತ್ರದಲ್ಲಿಯೂ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಟೈಗರ್ -3 ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿಯುವ ಹಂತದಲ್ಲಿದ್ದು ಬಿಡುಗಡೆಗೆ ಸಜ್ಜಾಗಿದೆ. ಶಾರುಖ್ ಅಭಿನಯದ ಪಠಾಣ್ ಚಿತ್ರದಲ್ಲಿಯೂ ಸಲ್ಲು ಅಭಿನಯ ಚಾತುರ್ಯ ಮೆರೆದಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top