fbpx
ಸಮಾಚಾರ

ಕೋರ್ಟ್ ಆದೇಶ ಎತ್ತಿ ಹಿಡಿದ ಬಸವ ಪೀಠಾಧ್ಯಕ್ಷೆ. ಬಸವಣ್ಣ ಅಂಕಿತನಾಮ ವಿಚಾರದಲ್ಲಿ ಎದ್ದಿದ್ದ ದಶಕಗಳ ವಿವಾದ ಸುಖಾಂತ್ಯ

ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಸ್ವಾಸ್ಥ್ಯ ಸಂದೇಶ ಸಾರಿದವರು. ತಮ್ಮ ವಚನಗಳ ಮೂಲಕ ಶರಣ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿ, ಜೀವನ ಸಂದೇಶಗಳನ್ನು ನೀಡಿದ ಬಸವಣ್ಣನವರ ಅಂಕಿತನಾಮದ ಹೆಸರಿನಲ್ಲಿ ಎದ್ದ ಗೊಂದಲ ಒಂದಿಷ್ಟು ವರ್ಷಗಳ ಹಿಂದೆ ವಿವಾದಕ್ಕೀಡಾಗಿತ್ತು. ಈಗ ಈ ವಿವಾದಕ್ಕೆ ತೆರೆ ಎಳೆಯಲಾಗಿದೆ.

ಏನಿದು ವಿವಾದ?
1996ರಲ್ಲಿ ಬಸವಣ್ಣನವರ ಅಂಕಿತನಾಮವನ್ನು ಬದಲಾಯಿಸಿ ಉಪಯೋಗಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಬಸವಧರ್ಮ ಪೀಠಾಧ್ಯಕ್ಷೆ ಲಿಂಗೈಕ್ಯ ಮಾತೆ ಮಹಾದೇವಿ ತಮ್ಮ ವಚನದೀಪ್ತಿ ಎಂಬ ವಚನ ಗ್ರಂಥದಲ್ಲಿ ಬಸವಣ್ಣನವರ ವಚನಗಳ ಅಂಕಿತನಾಮ ಕೂಡಲಸಂಗಮದೇವ ಬದಲಿಸಿ ಲಿಂಗದೇವ ಎಂದು ಉಲ್ಲೇಖ ಮಾಡಿದ್ದರು. ಇದು ರಾಜ್ಯದಲ್ಲಿ ದೊಡ್ಡ ಮಟ್ಟಿನ ವಿವಾದಕ್ಕೆ ಕಾರಣವಾಗಿತ್ತು. ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಈ ವಿಚಾರದ ಬಗ್ಗೆ ಮಾತನಾಡುತ್ತಾ ವಿವಾದಕ್ಕೆ ತೆರೆ ಎಳೆದಿದಿದ್ದಾರೆ. ಘಟನೆಯ ಬಗ್ಗೆ ಮಾತನಾಡಿದ ಅವರು ಇನ್ನು ಮುಂದೆ ಕೂಡಲ ಸಂಗಮದೇವ ಅಂಕಿತನಾಮವನ್ನೇ ವಚನ ದೀಪ್ತಿಯಲ್ಲಿ ಬಳಸುವಂತೆ ಅವರು ಆದೇಶ ನೀಡಿದ್ದಾರೆ. ಬಸವ ಸಂಘದಲ್ಲಿರುವ ಎಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಕೂಡಲಸಂಗಮ ಅಂಕಿತ ನಾಮವನ್ನೇ ಬಳಸುವಂತೆ ಆದೇಶ ನೀಡಿದ್ದಾರೆ.

ಲಿಂಗೈಕ್ಯ ಮಾತೆ ಮಹಾದೇವಿ ಬರೆದ ಗ್ರಂಥ ವಚನ ದೀಪ್ತಿ. ಇದರಲ್ಲಿ ಬಸವಣ್ಣನವರ ಅಂಕಿತನಾಮ ಕೂಡಲ ಸಂಗಮ ದೇವ ಬದಲಿಗೆ ಲಿಂಗದೇವ ಎಂದು ಬಳಸಿದ್ದು ವಿವಾದಕ್ಕೀಡಾಗಿತ್ತು. ಈ ಬಗ್ಗೆ ಮಾತನಾಡಿದ ಗಂಗಾದೇವಿ 2007 ಸಪ್ಟೆಂಬರ್ ತಿಂಗಳಲ್ಲಿ ಸುಪ್ರಿಂ ಕೋರ್ಟ್ ಕೂಡಲಸಂಗಮದೇವ ಎಂದೇ ಬಳಸುವಂತೆ ಆದೇಶ ಹೊಡಿಸಿದೆ. ಇನ್ನು ಮುಂದೆ ಕೋರ್ಟ್ ಆದೇಶವನ್ನು ಉಲ್ಲಂಘಿಸಿದರೆ ನಾವು ಜವಾಬ್ದಾರರಲ್ಲ ಎಂದು ಹೇಳಿದ್ದಾರೆ.

ಗ್ರಂಥವನ್ನು ಮಟ್ಟಗೋಲು ಹಾಕಿದ್ದ ಸರ್ಕಾರ
ವಚನ ದೀಪ್ತಿ ಪುಸ್ತಕ ವಿವಾದಕ್ಕೀಡಾದ ಹಿನ್ನಲೆಯಲ್ಲಿ ಸರ್ಕಾರ ಜಪ್ತಿ ಮಾಡಿತ್ತು. 1996ರಲ್ಲಿ ಸಂಶೋಧನೆ ಕೈಗೆತ್ತಿಕೊಂಡಿದ್ದ ಮಹಾದೇವಿಗೆ ಲಿಂಗದೇವ ಅವರು ದೀಕ್ಷೆ ನೀಡಿದ್ದರು. ಇದೇ ಕಾರಣಕ್ಕಾಗಿ ಅವರು ಕೂಡಲ ಸಂಗಮದೇವ ಜಾಗದಲ್ಲಿ ಲಿಂಗದೇವ ಎಂದು ಸೇರಿಸಿದ್ದರು. ಇದು ತಿವ್ರ ವಿರೋಧಕ್ಕೆ ಕಾರಣವಾಗಿತ್ತು. ಇದಾದ ಬಳಿಕ ರಾಜ್ಯ ಸರ್ಕಾರ ಗ್ರಂಥವನ್ನು ಮಟ್ಟಗೋಲು ಹಾಕಿತ್ತು. ಹೈಕೋರ್ಟ್ ತಲುಪಿದ್ದ ವಿವಾದ ಬಳಿಕ ಕೂಡಲಸಂಗಮದೇವ ಅಂತಲೇ ಬಳಸಬೇಕೆಂದು ಕೋರ್ಟ್ ಆದೇಶ ನೀಡುವ ಮುಖೇನ ಅಂತ್ಯಗೊoಡಿತ್ತು. ಇದನ್ನು ಪ್ರಶ್ನಿಸಿ ಬಸವ ಧರ್ಮ ಪೀಠ ಸುಪ್ರಿಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಅಂತಿಮವಾಗಿ 2017ರಲ್ಲಿ ಸುಪ್ರಿಂ ಕೋರ್ಟ್ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು. ಸುಪ್ರೀಂ ತೀರ್ಪು ಬಂದ 4 ವರ್ಷಗಳ ನಂತರ ಬಸವ ಧರ್ಮ ಪೀಠಧ್ಯಕ್ಷ ಮಾತೆ ಗಂಗಾದೇವಿ ಅಧಿಕೃತವಾಗಿ ಭಕ್ತರಿಗೆ ಕರೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top