fbpx
ಸಮಾಚಾರ

ಎಣ್ಣೆ ಏಟಲ್ಲಿ ಬಿಗ್‍ಬಾಸ್ ಸ್ಪರ್ಧಿ ದಿವ್ಯ ಸುರೇಶ್ ರಂಪಾಟ

ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧಿಯಾಗಿದ್ದ ನಟಿ ದಿವ್ಯ ಸುರೇಶ್ ಅವರು ನೆನ್ನೆ ರಾತ್ರಿ ಬೆಂಗಳೂರಿನ ಬ್ರಿಗೇಡ್ ರೋಡ್‍ನಲ್ಲಿ ಹೈಡ್ರಾಮಾ ನಡೆಸಿದ ಘಟನೆ ನಡೆದಿದೆ.

ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರ ನೆನ್ನೆಯಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಮೊದಲ ದಿನವಾದ ನೆನ್ನೆ ರಾತ್ರಿ 10 ಗಂಟೆ ಮೇಲೆ ಯಾರು ಓಡಾಡದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ನೈಟ್ ಕರ್ಪ್ಯೂ ಇದೆ ಮನೆಗೆ ಹೋಗಿ ಎಂದಿದ್ದಕ್ಕೆ ರಂಪಾಟ ಮಾಡಿದ್ದಾರೆ.

ದಿವ್ಯಾ ಸುರೇಶ್‌ ಅವರು 10 ಗಂಟೆಯ ನಂತರವೂ ಚರ್ಚ್‌ಸ್ಟ್ರೀಟ್‌ನಲ್ಲಿ ಓಡಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ಪೊಲೀಸ್‌ ಸಿಬ್ಬಂದಿಯೊಂದಿಗೇ ವಾಗ್ವಾದ ನಡೆಸಲು ಮುಂದಾದರು. ದೃಶ್ಯ ಮಾಧ್ಯಮದವರು ಇದನ್ನು ಸೆರೆಹಿಡಿಯಲು ಮುಂದಾದಾಗ ಅವರ ಸ್ನೇಹಿತ ಕ್ಯಾಮೆರಾ ಕಸಿದುಕೊಳ್ಳಲು ಪ್ರಯತ್ನಿಸಿದರು. ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದರು. ಈ ವೇಳೆ ದಿವ್ಯ ಸುರೇಶ್ ಕ್ಯಾಮೆರಾ ಕಂಡು ಆಟೋ ಹತ್ತಿ ತೆರಳಿದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top