fbpx
ಸಮಾಚಾರ

ರತೋತ್ಸವದ ವೇಳೆ ಅವಘಡ: ಹೊತ್ತಿ ಹುರಿದ ದೇವರ ರಥ, ಭಕ್ತರು ಕಂಗಾಲು

ರಾಮದುರ್ಗ ತಾಲೂಕಿನ ಶಿವಪೇಠ ಗ್ರಾಮದಲ್ಲಿ ಮಂಗಳವಾರ ಸಂಜೆ ಜಡಿಶಂಕರಲಿಂಗ ದೇವರ ರಥೋತ್ಸವ ವೇಳೆ ಪಟಾಕಿ ಸಿಡಿದು ರಥಕ್ಕೆ ಬೆಂಕಿ ಹೊತ್ತಿಕೊಂಡ ಕಳವಳಕಾರಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಶಿವಪೇಟೆಯಲ್ಲಿ ನಿನ್ನೆ ಶ್ರೀ ಜಡಿ ಶಂಕರಲಿಂಗ ದೇವರ 38ನೇ ವರ್ಷದ ಮಹಾರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ಥಳದಲ್ಲಿ ಕೆಲ ಭಕ್ತರು ಪಟಾಕಿ ಸಿಡಿಸಿದ್ದಾರೆ. ಪಟಾಕಿ ಕಿಡಿ ರಥದ ಮೇಲ್ಭಾಗಕ್ಕೆ ತಾಕಿದ್ದು, ರಥ ಹೊತ್ತಿ ಉರಿದಿದೆ.

ತಕ್ಷಣವೇ ಗ್ರಾಮಸ್ಥರು ರಥದ ಮೇಲೆ ಹತ್ತಿ ಬೆಂಕಿ ಆರಿಸಿದ್ದಾರೆ. ಅದೃಷ್ಟವಶಾತ್​ ಯಾವುದೇ ಅಪಾಯ ಸಂಭವಿಸಿಲ್ಲ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top