fbpx
ಸಮಾಚಾರ

2021ರಲ್ಲಿ ಹಸೆಮಣೆ ಏರಿದ ನಟನಟಿಯರ ಸಣ್ಣ ಝಲಕ್ ಸ್ಟೋರಿ ಇಲ್ಲಿದೆ

2021 ಇನ್ನೇನು ಅಂತಿಮ ಹಂತದಲ್ಲಿದೆ. ವರ್ಷವಿಡೀ ನಡೆದ ಬೇರೆ ಬೇರೆ ಘಟನೆಗಳ ಬಗ್ಗೆ ಮೆಲುಕು ಹಾಕುವ ಹೊತ್ತಿದು. ಈ ವಿಚಾರದಲ್ಲಿ ಸ್ಯಾಂಡಲ್‌ವುಡ್ ಹಲವು ವಿಚಾರಗಳಿಂದ ಗಮನ ಸೆಳೆದಿತ್ತು. ವಿಶೇಷವಾಗಿ ಈ ಬಾರಿ ಹಲವಾರು ಸ್ಯಾಂಡಲ್‌ವುಡ್ ಮಂದಿ ಹಸಮಣೆ ಏರಿದ್ದರು. ಹಸೆಮಣೆ ಏರಿದ್ದ ಪ್ರಮುಖ ಸ್ಯಾಂಡಲ್‌ವುಡ್ ಮದುವೆ ಕಾರ್ಯಕ್ರಮಗಳು ಯಾವುವು ಅಂತ ನೆನಪು ಮಾಡಿಕೊಳ್ಳುವ ಹೊತ್ತಿದು. ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಹಸೆಮಣೆ ಏರಿದ್ದ ಒಂದಿಷ್ಟು ಮದುವೆಗಳ ಬಗೆಗಿನ ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಹಸೆಮಣೆ ಏರಿದ್ದ ರಮೇಶ್ ಅರವಿಂದ್ ಪುತ್ರಿ :
ಸ್ಯಾಂಡಲ್‌ವುಡ್ ಖ್ಯಾತ ನಟ ರಮೇಶ್ ಅರವಿಂದ್ ಅವರ ಮಗಳು ಕಳೆದ ವರ್ಷ ಅಂದರೆ 2020ರ ಡಿಸೆಂಬರ್ 28ರಂದು ಹಸೆಮಣೆ ಏರಿದ್ದರೂ ಆರತಕ್ಷತೆ 2021ರ ಜನವರಿಯಲ್ಲಿ ನಡೆದಿತ್ತು. ರಮೇಶ್ ಅರವಿಂದ್ ಹಲವು ದಶಕಗಳಿಂದ ಚಿತ್ರ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ಕಲಾವಿದ. ಹಾಗಾಗಿ ಹಲವಾರು ದೊಡ್ಡ ಗಣ್ಯರ ಗುಂಪೇ ಇಲ್ಲಿ ನೆರೆದಿತ್ತು. ಯಶ್, ಪುನೀತ್, ಶಿವರಾಜ್‌ಕುಮಾರ್ ಸುದೀಪ್ ಸೇರಿದಂತೆ ಹಲವು ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ದು ಆರತಕ್ಷತೆಯಲ್ಲಿ ಅವರೆಲ್ಲಾ ನೃತ್ಯ ಮಾಡಿದ್ದು ಗಮನ ಸೆಳೆದಿತ್ತು.

ಲವ್ ಮಾಕ್‌ಟೇಲ್‌ ಜೋಡಿಯ ಕಲರ್‌ಫುಲ್ ಮದುವೆ
ಲವ್ ಮಾಕ್‌ಟೇಲ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿದ್ದ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ವರ್ಷಾರಂಭದಲ್ಲಿ ಮದುವೆಯಾಗಿದ್ದರು. ಚಿತ್ರದ ಹಿಟ್ ಬಳಿಕ ಈ ಜೋಡಿ ಪ್ರೀತಿಸುತ್ತಿರುವ ಸುದ್ದಿ ಸಖತ್ ವೈರಲ್ ಆಗಿತ್ತು. ಇದರನ್ವಯ ವರ್ಷಾರಂಭದಲ್ಲಿ ಈ ಜೋಡಿ ಹಸಮಣೆ ಏರಿತು. ಫೆಬ್ರವರಿ 14ರಂದು ಹಸೆಮಣೆ ಏರಿದ್ದ ಈ ಜೋಡಿ 8ವರ್ಷಗಳಿಂದ ಪ್ರೇಮಿಗಳು.

ಎಸ್ ನಾರಾಯಣ್ ಮಗನ ವಿವಾಹ
ಸ್ಯಾಂಡಲ್ ವುಡ್‌ನಲ್ಲಿ ಹಿರಿಯ ನಿರ್ದೇಶಕರಾಗಿ, ನಟರಾಗಿ ಹೆಸರು ಮಾಡಿದ್ದವರು ಎಸ್ ನಾರಾಯಣ್. ಅವರ ಮನೆಯಲ್ಲೇ ನಡೆದ ಅದ್ದೂರಿ ಮದುವೆ ಬಹಳಷ್ಟು ಸುದ್ದಿಯನ್ನೂ ಮಾಡಿತ್ತು. ಅವರ ಮಗ ಪವನ್ ಕುಮಾರ್ ಫೆಬ್ರವರಿ 21ರಂದು ಹಸೆಮಣೆ ಏರಿದ್ದರು. ಆಗಿನ ಮುಖ್ಯಮಂತ್ರಿ ಯಡ್ಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಈ ಮದುವೆಯಲ್ಲಿ ಭಾಗವಹಿಸಿದ್ದರು.

ಚೈತ್ರ ಕೊಟ್ಟೂರು ಮದುವೆ
ಬಿಗ್‌ಬಾಸ್ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದ ಚೈತ್ರಾ ಕೊಟ್ಟೂರ್ 2021ರಲ್ಲಿ ಹಸೆಮಣೆ ಏರಿದ್ದರು. ನಾಗಾರ್ಜುನ ಎಂಬವರೊಡನೆ ಸರಳವಾಗಿ ವಿವಾಹವಾಗಿದ್ದ ಚೈತ್ರ ಬಳಿಕ ಪೋಲಿಸ್ ಠಾಣೆಯ ಮೆಟ್ಟಿಲನ್ನೂ ಏರಿದ್ದರು. ಆತ್ಮಹತ್ಯೆಗೂ ಪ್ರಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಪಾರಾಗಿದ್ದರು. ಇದೆಲ್ಲಾ ಆದ ಬಳಿಕ ನಾಗಾರ್ಜುನ ಕುಟುಂಬದವರ ಮೇಲೆ ಚೈತ್ರ ಕೇಸ್ ಕೂಡ ದಾಖಲಿಸಿದ್ದರು.

ಚಂದನ್-ಕವಿತಾ ಗೌಡ ವಿವಾಹ
ಕನ್ನಡ ಕಿರುತೆರೆಯಲ್ಲಿ ನಾಯಕ ನಾಯಕಿಯಾಗಿ ಪಯಣ ಆರಂಭಿಸಿದ್ದ ಚಂದನಾ ಕವಿತಾಗೌಡ ವಿವಾಹ ಲಾಕ್ ಡೌನ್ ಸಂದರ್ಭದಲ್ಲಿಯೇ ಅಂದರೆ ಮೇ 14ರಂದು ಸರಳವಾಗಿ ನೆರವೇರಿತು. ಈ ವೇಳೆ ಇಬ್ಬರೂ ಮಾಸ್ಕ್ ಧರಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿದ್ದವು. ಇತ್ತೀಚೆಗಷ್ಟೇ ಈ ಜೋಡಿ ಬಿರಿಯಾನಿ ಹೋಟೆಲ್ ಅನ್ನುವ ಹೋಟೆಲ್ ಅನ್ನು ಕೂಡ ಪ್ರಾರಂಭಿಸಿತ್ತು.

ಪ್ರಣಿತಾ ಸುಭಾಷ್ ಸುಭಾಷ್
ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಗುಟ್ಟಾಗಿ ಮದುವೆಯಾಗಿದ್ದರು. ಕೆಲವೇ ದಿನಗಳ ಹಿಂದೆ ಮಾದ್ಯಮಗಳಲ್ಲಿ ಮದುವೆ ಬಗ್ಗೆ ಸುದ್ದಿ ಹರಿದಾಡುತ್ತಿತ್ತು. ಈ ಸಂದರ್ಭದಲ್ಲಿ ಪ್ರಣಿತಾ ಇದನ್ನು ತೀವ್ರವಾಗಿ ಅಲ್ಲಗಳೆದಿದ್ದರು. ಆದರೆ ನಿಗದಿಯಾಗಿದ್ದ ದಿನದಂದೇ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್ನಲ್ಲಿ ಉದ್ಯಮಿಯೊಬ್ಬರೊಂದಿಗೆ ಮದುವೆಯಾಗಿದ್ದರು.

ದಾನಿಷ್ ಸೇಠ್ ವಿವಾಹ
ಹಂಬಲ್ ಪೊಲಿಟಿಷಿಯನ್, ಫ್ರೆಂಚ್ ಬಿರಿಯಾನಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ನಟ ದಾನಿಷ್ ಸೇಠ್ ಆರ್‌ಸಿಬಿ ತಂಡದೊಂದಿಗೆ ಹಾಸ್ಯ ಮಾಡುತ್ತಾ ಗುರುತಿಸಿಕೊಂಡವರು. 2021ರಲ್ಲಿ ತಮ್ಮ ಬಹುವರ್ಷದ ಗೆಳತಿ ಆದ್ಯಾ ರಂಗನಾಥ್ ಅವರ ಜೊತೆ ಸರಳವಾಗಿ ಹಸೆಮಣೆ ಏರಿದ್ದರು. ಇದೀಗ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ777.

ಚಿತ್ರದಲ್ಲಿ ದಾನಿಷ್ ಅಭಿನಯಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಂದು ಮದುವೆಯಾಗಿದ್ದ ಹಂಸೋರೆ. ಸ್ವಾತಂತ್ರ್ಯ ದಿನಾಚರಣೆಯಂದೇ ನಿರ್ದೇಶಕ ಮಂಸೋರತೆ ಹಸೆಮಣೆ ಏರಿದ್ದರು. ಅಖಿಲಾ ಜೊತೆ ಹಸೆಮಣೆ ಏರಿದ್ದ ಮಂಸೋರೆ ರಾಷ್ಟ್ರಪ್ರಶಸ್ತಿ ವಿಜೇತರೂ ಹೌದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top