fbpx
ಸಮಾಚಾರ

ಡೈವೋರ್ಸ್ ನಂತರ ಮೊದಲ ಬಾರಿಗೆ ಒಂದೇ ಕಡೆ ಕಾಣಿಸಿಕೊಂಡ ಸಮಂತಾ-ನಾಗ ಚೈತನ್ಯ; ಹೇಗಿತ್ತು ರಿಯಾಕ್ಷನ್​?

ತೆಲುಗು ಚಿತ್ರರಂಗದಲ್ಲಿ ಮುದ್ದು ಜೋಡಿ ಎನಿಸಿಕೊಂಡಿದ್ದ ಸಮಂತಾ ಮತ್ತು ನಾಗಚೈತನ್ಯ ಕಳೆದ ಅಕ್ಟೋಬರ್ ಮೊದಲ ವಾರ ತಮ್ಮ ಮದುವೆ ಮುರಿದುಕೊಂಡಿದ್ದರು. ಅದನ್ನು ಅಂದು ಅಧಿಕೃತವಾಗಿ ಘೋಷಣೆ ಮಾಡಿದ್ದರು. ಹಲವು ವರ್ಷಗಳಿಂದ ಪ್ರೀತಿ ಮಾಡಿ, ನಂತರ ಮದುವೆಯಾಗಿ ಕೆಲವೇ ವರ್ಷ ಸಂಸಾರ ಮಾಡಿ, ಹೀಗೆ ದಿಢೀರನೇ ವಿಚ್ಛೇದನ ಪಡೆದುಕೊಂಡಿದ್ದು ಅವರ ಫ್ಯಾನ್ಸ್‌ಗೆ ತುಂಬ ಬೇಸರ ಉಂಟುಮಾಡಿತ್ತು.

ವಿಚ್ಛೇದನ ಪಡೆದ ನಂತರ ಇಬ್ಬರೂ ಗೆಳೆಯರಾಗಿ ಇರುತ್ತೇವೆ ಎಂದು ಹೇಳಿಕೊಂಡಿದ್ದರು. ಈ ಕಾರಣಕ್ಕೆ, ಎದುರು ಸಿಕ್ಕರೆ ಮಾತನಾಡಲೇ ಬೇಕು. ಈಗ ಇಬ್ಬರೂ ಒಂದೇ ಕಡೆ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೈದರಾಬಾದ್​ನ ರಾಮನಾಯ್ಡು ಸ್ಟುಡಿಯೋದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಒಟ್ಟಿಗೆ ಅಂದರೆ ಇಬ್ಬರು ಜತೆಯಾಗಿ ಅಲ್ಲ. ಒಂದೇ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ನಾಗಚೈತನ್ಯ ಬಂಗಾರರಾಜು ಸಿನಿಮಾದ ಶೂಟಿಂಗ್​ನಲ್ಲಿ ಬಿಜಿಯಾಗಿದ್ದರೆ, ಸಮಂತಾ ತಮ್ಮ ಯಶೋಧ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಎರಡು ಚಿತ್ರದ ಚಿತ್ರೀಕರಣ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆಯಿತು.

ಇಬ್ಬರು ಒಂದೇ ಶೂಟಿಂಗ್​ ಸ್ಥಳದಲ್ಲಿರುವುದು ಇಬ್ಬರಿಗೂ ತಿಳಿದಿತ್ತು. ಆದರೂ ಪರಸ್ಪರ ಇಬ್ಬರು ಮಾತನಾಡದೇ ತಮ್ಮ ತಮ್ಮ ಕೆಲಸ ಮುಗಿಸಿಕೊಂಡು ಕಾರನ್ನೇರಿ ಹೊರಟು ಹೋದರು ಎಂದು ತಿಳಿದುಬಂದಿದೆ. ಸಮಂತಾ ಹಾಗೂ ನಾಗ ಚೈತನ್ಯ ಒಟ್ಟಾಗಿ ಸೇರಿ ಮಾತುಕತೆ ನಡೆಸಬೇಕಿತ್ತು ಎನ್ನುವ ಅಭಿಪ್ರಾಯ ಅಭಿಮಾನಿ ವಲಯದಲ್ಲಿ ವ್ಯಕ್ತವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top