fbpx
ಸಮಾಚಾರ

ಶಕ್ತಿಕೇಂದ್ರದಲ್ಲಿ ಖೋಖೋ ಆಡಿದ್ರು ಶಿವಣ್ಣ. ದೊಡ್ಮನೆ ಕುಟುಂಬದೊಂದಿಗೆ ಶಕ್ತಿಧಾಮಕ್ಕಿದೆ ವಿಶೇಷ ನಂಟು

ಮೈಸೂರಿನಲ್ಲಿರುವ ಶಕ್ತಿಧಾಮ ಅನೇಕ ಕಾರಣಗಳಿಂದ ಇಂದು ವಿಶ್ವವಿಖ್ಯಾತಿ ಪಡೆದಿದೆ. ಮನೆಯಿಂದ ದೂರವಾಗಿರುವ ಅನಾಥ ಹೆಣ್ಣು ಮಕ್ಕಳನ್ನು ಸಲಹುವ ಕೇಂದ್ರ ಇದಾಗಿದ್ದು ಇದರ ಬಗ್ಗೆ ಎಲ್ಲರಿಗೂ ಗೊತ್ತಾಗಿದ್ದು ಅಪ್ಪು ಕಾಲವಾದ ಬಳಿಕ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ಅವರ ಬಲಿಕ ಈ ಅನಾಥಾಶ್ರಮದ ಜವಾಬ್ದಾರಿ ವಹಿಸಿಕೊಂಡಿದ್ದು ಗೀತಾ ಶಿವರಾಜ್ ಕುಮಾರ್. ಆದರೆ ಈ ಶಕ್ತಿಧಾಮಕ್ಕೆ ಶಕ್ತಿಯಾಗಿ ನಿಂತಿದ್ದು ಪುನೀತ್. ಈಗ ಅಪ್ಪು ಜಾಗದಲ್ಲಿ ನಿಂತು ಶಕ್ತಿಧಾಮಕ್ಕೆ ಶಕ್ತಿಯಾಗಿ ಶಿವರಾಜ್‌ಕುಮಾರ್ ಅವರು ನಿಂತಿದ್ದಾರೆ.

ಆಗಾಗ ಈ ಶಕ್ತಿಧಾಮಕ್ಕೆ ಭೇಟಿ ಕೊಡುವ ಶಿವಣ್ಣ ಒಂದಿಷ್ಟು ಸಮಯವನ್ನು ಅವರ ಜೊತೆ ಕಳೆಯುವುದು ಮಾತ್ರವಲ್ಲದೆ ಅಲ್ಲಿಯ ಮಕ್ಕಳೊಂದಿಗೆ ಬೆರೆತು ಆಟವಾಡುತ್ತಾರೆ. ಹೀಗೆ ಇತ್ತೀಚೆಗೆ ಶಿವರಾಜ್ ಕುಮಾರ್ ಮಕ್ಕಳೊಂದಿಗೆ ಖೊಖೊ ಆಡಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಅಪ್ಪು ಮಾಡುತ್ತಿದ್ದ ಎಷ್ಟೋ ಕೆಲಸಗಳು ನಮಗೆ ಗೊತ್ತೇ ಇರಲಿಲ್ಲ ಅಂತ ಅಪ್ಪು ಇಹಲೋಕ ತ್ಯಜಿಸಿದ ದಿನ ಶಿವಣ್ಣ ಮಾಧ್ಯಮಗಳ ಮುಂದೆ ಹೇಳಿದ್ದರು. ಶಕ್ತಿಧಾಮದ ಬಗ್ಗೆಯೂ ಶಿವಣ್ಣನಿಗೆ ಆ ಬಳಿಕ ಗೊತ್ತಾಗಿದ್ದಂತೆ. ಇದೀಗ ಅಪ್ಪು ಜಾಗದಲ್ಲಿ ನಿಂತು ಶಿವಣ್ಣ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ.
ಶಕ್ತಿಧಾಮಕ್ಕೂ ರಾಜ್ ಕುಟುಂಬಕ್ಕೂ ಅವಿನಾಭಾವ ಸಂಬoಧವಿದೆ. ಅನೇಕ ವರ್ಷಗಳಿಂದ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ರಾಜ್ ಕುಟುಂಬ ಆ ಸಂಬoಧವನ್ನು ಉಳಿಸಿಕೊಂಡು ಹೋಗುತ್ತಿದೆ. ಇದೀಗ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸವನ್ನು ನೀಡುತ್ತಾ ಬಂದಿದೆ. ಪುನೀತ್ ಮೈಸೂರಿಗೆ ಹೋದಾಗಲೆಲ್ಲಾ ಶಕ್ತಿಧಾಮಕ್ಕೆ ಭೇಟಿ ಕೊಡುತ್ತಿದ್ದರಂತೆ. ಪಾರ್ವತಮ್ಮ ರಾಜ್ ಕುಮಾರ್ ಇಲ್ಲಿಗೆ ಬಂದಾಗಲೆಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚುತ್ತಿದ್ದರoತೆ. ಜೊತೆಗೆ ಪುನೀತ್ ಬಂದಾಗಲೂ ಶಕ್ತಿಧಾಮದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಒದಗಿಸಿ ಕೊಡುತ್ತಿದ್ದರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top