fbpx
ಸಮಾಚಾರ

ಪತ್ನಿಗೆ ವಿಚ್ಛೇದನ ನೀಡಿದ ‘ನಟಸಾರ್ವಭೌಮ’ ಸಂಗೀತ ನಿರ್ದೇಶಕ: 14 ವರ್ಷದ ದಾಂಪತ್ಯ ಕೊನೆ

ಕನ್ನಡದ ಕೋಟಿಗೊಬ್ಬ-2, ನಟಸಾರ್ವಭೌಮ ಸಿನಿಮಾಗಳಿಗೆ ಸಂಗೀತ ನೀಡಿ ಹೆಸರುವಾಸಿಯಾಗಿರುವ ದಕ್ಷಿಣ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಡಿ. ಇಮಾನ್ ಅವರು ತಮ್ಮ ಪತ್ನಿಗೆ ಡೈವೋರ್ಸ್ ನೀಡಿದ್ದಾರೆ. ಈ ಮೂಲಕ
14 ವರ್ಷಗಳ ತಮ್ಮ ಸುದೀರ್ಘ ದಾಂಪತ್ಯವನ್ನು ಮುರಿದುಕೊಂಡಿದ್ದಾರೆ.

 

 

View this post on Instagram

 

A post shared by D.Imman (@immancomposer)

 

38 ವರ್ಷದ ಸಂಗೀತ ನಿರ್ದೇಶಕ ಈ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನನ್ನ ಎಲ್ಲಾ ಹಿತೈಷಿಗಳು ಮತ್ತು ಸಂಗೀತ ಪ್ರೇಮಿಗಳು ನೀಡಿದ ಬೆಂಬಲಕ್ಕಾಗಿ ನಾನು ನಿಜವಾಗಿಯೂ ಆಭಾರಿಯಾಗಿದ್ದೇನೆ. ಜೀವನವು ನಮ್ಮನ್ನು ಬೇರೆ ಬೇರೆ ದಾರಿಗಳಲ್ಲಿ ಕೊಂಡೊಯ್ಯುತ್ತಿದ್ದು ಮೋನಿಕಾ ರಿಚರ್ಡ್ ಮತ್ತು ನಾನು ನವೆಂಬರ್ 2020 ರ ಹೊತ್ತಿಗೆ ಪರಸ್ಪರ ಒಪ್ಪಿಗೆಯಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದೇವೆ. ಇನ್ನು ಮುಂದೆ ನಾವು ಗಂಡ ಮತ್ತು ಹೆಂಡತಿಯಾಗಿರುವುದಿಲ್ಲ.

ನಮ್ಮ ಎಲ್ಲಾ ಹಿತೈಷಿಗಳು, ಸಂಗೀತ ಪ್ರೇಮಿಗಳು ಮತ್ತು ಮಾಧ್ಯಮಗಳು ನಮ್ಮ ಖಾಸಗಿತನಕ್ಕೆ ಅವಕಾಶ ನೀಡಿ ಮುಂದುವರಿಯಲು ಸಹಾಯ ಮಾಡಲು ನಾನು ವಿನಂತಿಸುತ್ತೇನೆ. ನಿಮ್ಮ ತಿಳುವಳಿಕೆ, ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top